ಗ್ರಾಹಕರೇ ಗಮನಿಸಿ. 2021 ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕ್ ಬಂದ್.

0
5925

ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ನವದೆಹಲಿ, ಮಾರ್ಚ್ 31: ಹಲವು ಜನ ಸಾಮಾನ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಬ್ಯಾಂಕ್‌ ಕೆಲಸಗಳಿರುತ್ತವೆ. ಆದರೆ, ಆ ದಿನ ಬ್ಯಾಂಕ್‌ಗೆ ರಜೆ ಇದ್ದರೆ ಅವರ ಇತರ ಕೆಲಸಗಳಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು.

ಇದೇ ರೀತಿ ಏಪ್ರಿಲ್‌ 2021 ರಲ್ಲೂ ಬ್ಯಾಂಕುಗಳು 15 ದಿನಗಳ ಕಾಲ ಬಂದ್‌ ಆಗಿರುತ್ತದೆ. ಏಪ್ರಿಲ್‌ ತಿಂಗಳ ಮೊದಲನೆಯ ದಿನವೂ ಸಹ ರಜಾ ದಿನವೇ ಆಗಿದೆ. ಹೌದು, 2020-21ರ ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುವುದರಿಂದ, ಹಣಕಾಸಿನ ವರ್ಷದ ಕೊನೆಯ ದಿನವಾದ ಮಾರ್ಚ್‌ 31 ರಂದು ಗ್ರಾಹಕರಿಗೆ ಸಂಬಂಧಿಸಿದ ಕೆಲಸವನ್ನು ಮಾಡಲಾಗುವುದಿಲ್ಲ.

ಏಪ್ರಿಲ್‌ 1 ರಂದೂ ಸಹ ಇದೇ ರೀತಿ ಬ್ಯಾಂಕುಗಳು ತಮ್ಮ ವಾರ್ಷಿಕ ಖಾತೆಗಳನ್ನು ಕ್ಲೋಸ್‌ ಮಾಡುವ ದಿನವಾಗಿದ್ದು ಜನಸಾಮಾನ್ಯರ ಕೆಲಸ ನಿರ್ವಹಿಸುವುದಿಲ್ಲ. ಈ ಹಿನ್ನೆಲೆ ಜನರಿಗೆ ತೊಂದರೆಯಾಗಬಾರದೆಂದು ಆರ್‌ಬಿಐ ಬ್ಯಾಂಕುಗಳ ರಜಾ ದಿನಗಳ ಪಟ್ಟಿಯನ್ನು ನೀಡುತ್ತದೆ. ನಿಮಗೆ ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಇದ್ದರೆ, ಯಾವ ದಿನ ಮುಚ್ಚಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಪಟ್ಟಿಯನ್ನು ಪರಿಶೀಲಿಸಿ.

ಆದರೂ, ಎಲ್ಲ ಬ್ಯಾಂಕುಗಳಲ್ಲಿ ಹಾಗೂ ಎಲ್ಲ ರಾಜ್ಯಗಳಲ್ಲಿ 15 ದಿನಗಳ ಕಾಲ ರಜೆ ಇರುವುದಿಲ್ಲ. ಏಕೆಂದರೆ ಕೆಲವು ಹಬ್ಬಗಳನ್ನು ಇಡೀ ದೇಶದಲ್ಲಿ ಆಚರಿಸಲಾಗುವುದಿಲ್ಲ ಎಂಬುದನ್ನು ಬ್ಯಾಂಕ್‌ ಗ್ರಾಹಕರು ಗಮನಿಸಬೇಕಾಗಿದೆ.

ಬ್ಯಾಂಕ್‌ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ. ಏಪ್ರಿಲ್ 2 – ಶುಕ್ರವಾರ – ಗುಡ್‌ ಫ್ರೈಡೇ. ಏಪ್ರಿಲ್ 4 – ಭಾನುವಾರ – ಈಸ್ಟರ್. ಏಪ್ರಿಲ್ 5 – ಸೋಮವಾರ – ಬಾಬು ಜಗಜೀವನ್‌ ರಾಮ್ ಜಯಂತಿ. ಏಪ್ರಿಲ್ 10 – ಎರಡನೇ ಶನಿವಾರ. ಏಪ್ರಿಲ್ 11 – ಭಾನುವಾರ. ಏಪ್ರಿಲ್ 13 – ಮಂಗಳವಾರ – ಯುಗಾದಿ, ತೆಲುಗು ಹೊಸ ವರ್ಷ, ಬೋಹಾಗ್ ಬಿಹು, ಗುಡಿ ಪಾಡ್ವಾ, ವೈಶಾಖ್, ಬಿಜು ಉತ್ಸವ.

ಏಪ್ರಿಲ್ 14 – ಬುಧವಾರ – ಡಾ.ಅಂಬೇಡ್ಕರ್ ಜಯಂತಿ, ಅಶೋಕ ದಿ ಗ್ರೇಟ್‌ನ ಜನ್ಮದಿನ, ತಮಿಳು ಹೊಸ ವರ್ಷ, ಮಹಾ ವಿಷುಬಾ ಸಂಕ್ರಾಂತಿ, ಬೋಹಾಗ್ ಬಿಹು. ಏಪ್ರಿಲ್ 15 – ಗುರುವಾರ – ಹಿಮಾಚಲ ದಿನ, ವಿಶು, ಬಂಗಾಳಿ ಹೊಸ ವರ್ಷ, ಸರ್ಹುಲ್. ಏಪ್ರಿಲ್ 16 – ಶುಕ್ರವಾರ – ಬೋಹಾಗ್ ಬಿಹು.

ಏಪ್ರಿಲ್ 18 – ಭಾನುವಾರ. ಏಪ್ರಿಲ್ 21 – ಮಂಗಳವಾರ – ರಾಮ ನವಮಿ, ಗರಿಯಾ ಪೂಜಾ. ಏಪ್ರಿಲ್ 24 – ನಾಲ್ಕನೇ ಶನಿವಾರ. ಏಪ್ರಿಲ್ 25 – ಭಾನುವಾರ – ಮಹಾವೀರ ಜಯಂತಿ. ತೆಲುಗು ಹೊಸ ವರ್ಷ, ಬಿಹು, ಗುಡಿ ಪಾಡ್ವಾ, ವೈಶಾಖ, ಬಿಜು ಉತ್ಸವ ಮತ್ತು ಯುಗಾದಿ ಹಿನ್ನೆಲೆ ಏಪ್ರಿಲ್ 13 ರಂದು ಬ್ಯಾಂಕುಗಳಿಗೆ ರಜೆ ಇರುತ್ತದೆ.

ಮರುದಿನ ಅಂದರೆ ಏಪ್ರಿಲ್ 14 ರಂದು ಡಾ. ಅಂಬೇಡ್ಕರ್ ಜಯಂತಿ ಹಿನ್ನೆಲೆ ಬ್ಯಾಂಕುಗಳನ್ನು ಮುಚ್ಚಲಾಗುವುದು. ನಂತರ ಏಪ್ರಿಲ್ 15, ಹಿಮಾಚಲ ದಿನ, ವಿಶು, ಬಂಗಾಳಿ ಹೊಸ ವರ್ಷ, ಸರ್ಹುಲ್ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ನೀಡಲಾಗುವುದು. ಇದರ ನಂತರ, ಏಪ್ರಿಲ್ 21 ರಂದು ರಾಮ ನವಮಿ ಮತ್ತು ಏಪ್ರಿಲ್ 25ರಂದು ಮಹಾವೀರ ಜಯಂತಿ ಹಿನ್ನೆಲೆ ಬ್ಯಾಂಕ್‌ ಶಾಖೆಗಳಿಗೆ ರಜೆ ಇರುತ್ತದೆ.

ಇದರ ಜತೆಗೆ ಏಪ್ರಿಲ್ 10 ಮತ್ತು 24 ರಂದು ಬ್ಯಾಂಕುಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಇದ್ದರೆ, ಏಪ್ರಿಲ್ 4, 11, 18 ಹಾಗೂ 25 ರಂದು ಭಾನುವಾರ ಎಂದಿನಂತೆ ರಜೆ ಇದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here