ಬೆಲ್ಲವನ್ನು ಈ ರೀತಿ ಬಳಕೆ ಮಾಡಿದರೆ ನಿಮ್ಮ ಮುಖದ ಕಾಂತಿಯು ಒಂದೇ ದಿನದಲ್ಲಿ ಹೆಚ್ಚುತ್ತದೆ..!!

0
3240

ಮುಖದ ಕಾಂತಿಗಾಗಿ ನಾವು ಎಷ್ಟೆಲ್ಲ ಪ್ರಯತ್ನವನ್ನು ಪಡುತ್ತೇವೆ, ನಾನಾ ಬಗೆಯ ಕ್ರೀಮ್ ಗಳನ್ನು ಹಚ್ಚುತ್ತೇವೆ ಸೋಪುಗಳನ್ನು ಬಳಸುತ್ತೇವೆ ಹಾಗೂ ಪೌಡರ್ ಗಳನ್ನೂ ಸಹ ಬಳಸುತ್ತೇವೆ, ಇದು ಯಾವುದೇ ಬಳಸಿದರು ಸೂರ್ಯನ ತೇಜ ಕಿರಣಗಳಿಂದ ನಮ್ಮ ಮೃದುವಾದ ತ್ವಚೆಯು ತಪ್ಪಿಸಿಕೊಳ್ಳಲಾಗದೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.

ಹಾಗಂತ ಮೇಲೆ ತಿಳಿಸಿದ ಯಾವುದೇ ಕ್ರಮವನ್ನು ಬಿಡಲು ಸಹ ಸಾಧ್ಯವಿಲ್ಲ, ಚರ್ಮದ ಮೇಲಿನಿಂದ ಚರ್ಮಕ್ಕೆ ನಾವು ಹೇಗೆ ರಕ್ಷಣೆ ಕೊಡುತ್ತೇವೋ ಅದೇ ರೀತಿಯಲ್ಲಿ ಚರ್ಮದ ಒಳಗಿನಿಂದಲೂ ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿದರೆ ಚರ್ಮವು ಕಾಂತಿಯುತವಾಗಿ ಇರುತ್ತದೆ, ಅದಕ್ಕಾಗಿಯೇ ಸಕ್ಕರೆಯ ಬದಲು ನಿಮ್ಮ ದಿನ ನಿತ್ಯದ ಬಳಕೆಯಲ್ಲಿ ಬೆಲ್ಲವನ್ನು ಬಳಸಿ, ಬೆಲ್ಲವನ್ನ ಬಳಸುವುದರಿಂದ ನಿಮಗೆ ಸಿಗುವ ಚರ್ಮದ ಆರೋಗ್ಯದ ಬಗ್ಗೆ ಒಮ್ಮೆ ಸಂಪೂರ್ಣವಾಗಿ ಓದಿ.

ಬೆಲ್ಲದಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಒಂದು ತುಂಡು ಬೆಲ್ಲವನ್ನು ತಿಂದರೆ ಇದರಿಂದ ಮೊಡವೆಗಳು ನಿವಾರಣೆಯಾಗುತ್ತದೆ ಹಾಗೂ ಕಲೆಗಳು ಸಹ ನಿವಾರಣೆಯಾಗಿ ನಿಮ್ಮ ಮುಖದ ಚರ್ಮ ಹೊಳೆಯುತ್ತದೆ.

ಅಷ್ಟೇ ಅಲ್ಲದೆ ಬೆಲ್ಲದಲ್ಲಿ ಇರುವ ಕೆಲವು ಉಪಯುಕ್ತ ಅಂಶಗಳು ಚರ್ಮಕ್ಕೆ ವಯಸ್ಸಾಗುವ ಲಕ್ಷಣವನ್ನು ನಿವಾರಿಸುತ್ತದೆ ಹಾಗೂ ಚರ್ಮ ಸುಕ್ಕು ಉಂಟಾಗದಂತೆ ರಕ್ಷಣೆ ನೀಡುತ್ತದೆ.

ಕೇವಲ ಮುಖದ ಚರ್ಮಕ್ಕೆ ಅಷ್ಟೇ ಅಲ್ಲ ನಿಮ್ಮ ಉದ್ದನೆಯ ಸಿಲ್ಕಿ ಕೂದಲಿಗೆ ಬಹಳ ಸಹಕಾರಿ, ಬೆಲ್ಲವನ್ನು ಪುಡಿ ಮಾಡಿ ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ನೀರು ಬೆರೆಸಿ ಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಎರಡು ಚಮಚ ಜೇನುತುಪ್ಪಕ್ಕೆ ನಿಂಬೆರಸ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ, ಈ ಪೇಸ್ಟನ್ನು ತಣ್ಣೀರಲ್ಲಿ ಮುಖ ತೊಳೆದು ನಂತರ ಮುಖದ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ, 10 ನಿಮಿಷದ ನಂತರ ಮತ್ತೊಮ್ಮೆ ತಣ್ಣೀರು ಬಳಸಿ ತೊಳೆಯಿರಿ ಹೀಗೆ ಮಾಡುವುದರಿಂದ ಸಾಫ್ಟ್ ಆಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here