ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ 9 ವಾರಗಳನ್ನು ಪೂರೈಸಿದೆ, ಆದರೆ 9 ವಾರಗಳಲ್ಲಿ ಕಳೆದ ವಾರ ಬಿಗ್ ಬಾಸ್ ಕಾರ್ಯಕ್ರಮ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ನಿಜ, ಕಾರಣ ಈ ಬಾರಿ ನೀಡಿದ ಟಾಸ್ಕ್ ರಾಕ್ಷಸರು ಮತ್ತು ಗಂಧರ್ವರೂ, ಈ ಟಾಸ್ಕ್ ನಲ್ಲಿ ರಾಕ್ಷಸರು ಮತ್ತು ಗಂಧರ್ವರೂ ಕೊಂಚ ಹೆಚ್ಚಾಗಿಯೇ ತಮ್ಮ ರಾಕ್ಷಸ ಗುಣವನ್ನು ಹೊರಹಾಕಿದ್ದು ವೀಕ್ಷಕರಲ್ಲಿ ಹಾಗೂ ಹಲವು ಪತ್ರಿಕಾ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದ್ದು ನಿಜ.
ಇದೇ ಕಾರಣಕ್ಕಾಗಿಯೇ ಬಿಗ್ ಬಾಸ್ನ ಕೋಟ್ಯಂತರ ವೀಕ್ಷಕರು ವಾರದ ಕೊನೆಯಲ್ಲಿ ಕಿಚ್ಚನ ನ್ಯಾಯದ ಮಾತಿಗಾಗಿ ಕಾದು ಕೂತಿದ್ದರು, ಶನಿವಾರ ಭಾನುವಾರ ಕಿಚ್ಚನ ನಡೆಸಿಕೊಡುವ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡ ಸುದೀಪ್, ಪ್ರತಿ ವಾರದಂತೆ ನಿನ್ನೆ ಸಹ ಒಬ್ಬ ಸ್ಪರ್ದಿಯನ್ನು ಮನೆಯ ಹೊರಗೆ ಎಲಿಮಿನೇಟ್ ಮಾಡಿದ್ದಾರೆ, ಈ ವಾರ ನಿರೀಕ್ಷೆಯಂತೆ ರಾಜು ತಾಳಿಕೋಟೆ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದು ಇವರು ಪಡೆದ ಸಂಭಾವನೆಯ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ ರಾಜು ತಾಳಿಕೋಟೆ ಅವರು ವಾರಕ್ಕೆ 60,000 ಅಗ್ರಿಮೆಂಟ್ ಗೆ ಸಹಿ ಮಾಡಿದ್ದರಂತೆ ಅದರಂತೆ 9 ವಾರ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣವನ್ನು ನಡೆಸಿದ ಕಾರಣ ಅವರಿಗೆ 5,40,000 ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ, ಹಿಂದೆ ಜೈ ಜಗದೀಶ ಅವರು ಪಡೆದ ಸಂಭಾವನೆ ಬಗ್ಗೆ ಅತಿ ಹೆಚ್ಚು ಚರ್ಚೆಯಾಗಿತ್ತು ಅದೇನೇ ಇರಲಿ ಮುಂದಿನ ವಾರ ಮನೆಯಿಂದ ಹೊರಬರುವ ಅಭ್ಯರ್ಥಿ ಯಾರು ಎಂಬುದನ್ನು ನೀವು ಊಹಿಸಿ ಹೇಳಬಲ್ಲಿರಾ? ಹಾಗೂ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ನೆಚ್ಚಿನ ಅಭ್ಯರ್ಥಿ ಈಗ ಯಾರು ಎಂಬುದನ್ನು ಮರೆಯದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.