ಈ 8 ಕಾರಣಗಳು ಗೊತ್ತಾದ್ರೆ ನೀವು ಖಂಡಿತ ದಿನವು ಹಾಲು ಕುಡಿಯುತ್ತೀರಿ..!!

0
5403

ಪ್ರತಿದಿನ ಹಾಲನ್ನು ಕುಡಿಯುವುದರಿಂದ ಇಷ್ಟು ಉಪಯೋಗ ಇದೆ ಅದು ಯಾವುದು ಅಂತಾ ಕೆಳಗೆ ಕೊತ್ತಿದಿವಿ ನೋಡಿ.

ಪ್ರತಿದಿನವೂ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವ ಕ್ಯಾಲ್ಶಿಯಮ್ ದೊರೆತು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ, ಇದು ಮೈಗ್ರೇನ್ ತಲೆನೋವಿನಿಂದ ಉಪಶಮನ ನೀಡುತ್ತದೆ.

ಹಾಲಿನಲ್ಲಿರುವ ಕ್ಯಾಲ್ಶಿಯಮ್ ಹಾಗೂ ವಿಟಮಿನ್ ಗಳು ಉಗುರು ಮತ್ತು ಕೂದಲುಗಳ ಆರೋಗ್ಯವನ್ನು ಕಾಪಾಡುತ್ತದೆ, ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿಯಬೇಕು ಇದರಿಂದ ನಮ್ಮ ದೇಹಕ್ಕೆ ಹಿತವಾದ ಅನುಭವಾಗಿ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ.

ಪ್ರತಿದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ಎದೆ ಉರಿ ಹಾಗೂ ಗಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ, ಹಾಲನ್ನು ಪ್ರತಿದಿನ ಕುಡಿಯುವುದರಿಂದ ಕ್ಯಾಲ್ಶಿಯಮ್ ಸರಿಯಾದ ಪ್ರಮಾಣದಲ್ಲಿ ದೊರೆತು ಹಲ್ಲುಗಳ ಆರೋಗ್ಯ ಸುಧಾರಿಸುತ್ತದೆ.

ಈಗಿನ ಒತ್ತಡದ ಜೀವನದಲ್ಲಿ, ದಿನವಿಡೀ ಆಫೀಸ್ ಕೆಲಸ ಮಾಡಿ ದಣಿದಿರುತ್ತೀರಿ ಇದಕ್ಕೇನು ಪರಿಹಾರ ಗೊತ್ತಾ, ಒಂದು ಲೋಟ ಬಿಸಿ ಹಾಲನ್ನು ಕುಡಿಯಿರಿ ಇದರಿಂದ ನಿಮ್ಮ ಮನಸ್ಸಿಗೆ ಹಿತವಾದ ಅನುಭವವಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ.

ಹಾಲು ಒಳ್ಳೆಯ ಕ್ಲೆನ್ಸರ್ ತರ ಕೆಲಸ ಮಾಡುತ್ತದೆ ಒಂದು ಹತ್ತಿಯ ತುಂಡಿನಿಂದ ಹಸಿ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷ ಬಿಟ್ಟು ತೊಳೆಯಿರಿ ಇದೇ ರೀತಿ ಪ್ರತಿದಿನವೂ ಮಾಡುವುದರಿಂದ ಮುಖವು ಬೆಳ್ಳಗೆ ಆರೋಗ್ಯಯುತವಾಗಿ ಹೊಳೆಯುತ್ತದೆ.

ಜೊತೆಯಲ್ಲಿ ಇದನ್ನು ಕೂಡ ಓದಿ ಪ್ರತಿದಿನ ಒಂದು ಹಣ್ಣು ತಿಂದರೆ ಏನು ಲಾಭ ಗೊತ್ತ.

ಈಸ್ಟ್ ಆಂಗ್ಲಿಯಾ ವಿಶ್ವ ವಿದ್ಯಾಲಯದ ಸಂಶೋಧನೆಯ ಪ್ರಕಾರ ಆರೋಗ್ಯವಂತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ಲೆವೊನಾಯ್ದ್ (Flavonoids) ಸೇವನೆಯಿಂದ ಸಕ್ಕರೆ ಕಾಯಲೆ ಬರುವ ಸಾಧ್ಯತೆಯನ್ನು ನಿಧಾನಿಸಬಹುದಂತೆ, ಈ ಪ್ಲೆವೊನಾಯ್ದ್ ಅಂಶಗಳು ಟೀ, ದ್ರಾಕ್ಷಿ, ವೈನ್ ಮತ್ತು ಹುಳಿ ಹಣ್ಣುಗಳಲ್ಲಿ ಹೆಚ್ಚಾಗಿ ಇರುತ್ತದೆ.

ಈ ಪ್ಲೆವೊನಾಯ್ದ್ ಅಂಶಗಳು ಶರೀರದಲ್ಲಿ ಇನ್ಸುಲಿನ್ ಪ್ರತಿರೋಧಕತೆಯನ್ನು ಕಡಿಮೆ ಮಾಡಿ, ರಕ್ತದಲ್ಲಿ ಸೇರುವ ಸಕ್ಕರೆ ಅಂಶವನ್ನು ಸರಿಯಾಗಿ ಉಪಯೋಗಿಸುತ್ತದೆ ಎಂದು ತಿಳಿದುಬಂದಿದೆ ಈ ಅಂಶದ ಜೊತೆಗೆ ಆಂತೊಸಯಾನಿನ್ (Anthocyanins)ಗಳು ಕೂಡಿ ಶರೀರದಲ್ಲಿ ನಡೆಯುವ ಕೆಲವು ದೀರ್ಘ ಕಾಲದ ಉರಿ ಊತವನ್ನು ಕಡಿಮೆ ಮಾಡುವುದರ ಪರಿಣಾಮವಾಗಿ ಸಕ್ಕರೆ ಕಾಯಿಲೆ, ದಢೂತಿ, ಹೃದಯ ಕಾಯಿಲೆಗಳು ಕಾಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಪ್ರತಿ ದಿನ ಯಾವುದಾದರೂ ಒಂದು ಹಣ್ಣನ್ನು 78 ಗ್ರಾಂ ದ್ರಾಕ್ಷಿ, 30 ಗ್ರಾಂ ಸ್ಟ್ರಾಬೆರ್ರಿ, 100 ಗ್ರಾಂ ಕಿತ್ತಳೆ ಹಣ್ಣು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯನ್ನು ನಿಧಾನ ಮಾಡಬಹುದು.

ಹಣ್ಣು ಸೇವನೆ ಮಾತ್ರದಿಂದಲೇ ಕಾಯಿಲೆ ಬರುವ ಸಾಧ್ಯತೆಯನ್ನು ನಿಧಾನ ಮಾಡಲು ಉಪಾಯವಲ್ಲ ಜೊತೆಗೆ ಸರಿಯಾದ ವ್ಯಾಯಾಮ ಮತ್ತು ಆಹಾರದ ಸೇವನೆಯನ್ನು ಪಾಲಿಸಬೇಕಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here