ಹೌದು ನಾವು ಬಳಸುವ ಆಹಾರದಲ್ಲಿ ದೇಹದ ಅರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು, ಪ್ರತಿ ದಿನ ಒಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬಂತೆ ದಿನದಕ್ಕೆ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನಿ ಆರೋಗ್ಯಕರವಾಗಿ ಎಂದು ವೈದ್ಯ ಶಸ್ತ್ರ ಹೇಳುತ್ತದೆ, ಸಾಕಷ್ಟು ಜನರು ಬೆಳ್ಳುಳ್ಳಿಯಿಂದ ದೂರ ಇರುತ್ತಾರೆ.
ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೆ ಮಾಡುವುದು ಸರಿಯಲ್ಲ, ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರೂ ಎಸಳು ಬೆಳ್ಳುಳ್ಳಿಯನ್ನು ಕಾಳಿ ಹೊಟ್ಟೆ ಇರುವಾಗ ನುಂಗುವ ಅಭ್ಯಾಸ ಬೆಳಸಿಕೊಳ್ಳಿ, ಒಂದು ಎಸಳು ನುಂಗಲು ಆಗದೆ ಇದ್ದಾರೆ ಅರ್ಧ ಮಾಡಿ ನುಂಗಿರಿ ಮಾತ್ರೆಯಂತೆ, ಹೀಗೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ, ಮುಖದ ಮೇಲಿರುವ ಮೊಡವೆ ಅದರ ಕಲೆಗಳು ದೂರವಾಗುತ್ತದೆ.
ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಹತ್ತಿರಾ ಬರದು. ಅಸಿಡಿಟಿ, ಅಲರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ ಆದರೆ ತುಂಬಾ ಬೆವರುವ ಗುಣ ಉಳ್ಳವರು ಕಡಿಮೆ ಪ್ರಮಾಣದ ಬೆಳ್ಳುಳ್ಳಿ ಬಳಸಿದರೆ ಒಳ್ಳೆಯದು, ಅತಿಯಾದ ಸೇವನೆಯಿಂದ ಬೆವರು ದುರ್ಗಂಧಮಯವಾಗುತ್ತದೆ, ಬೆಳ್ಳುಳ್ಳಿಯಲ್ಲಿ ಪ್ರೊಟೀನ್, ವಿಟಮಿನ್ ಈ,ಬಿ,ಸಿ, ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ, ಮನೆ ಮದ್ದಿನಲ್ಲಿ ಬೆಳ್ಳಿಲ್ಲುಯ ಪಾತ್ರ ಹಿರಿದು, ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಮೊಲೆ ಹಾಲು ಹೆಚ್ಚಾಗುವುದು, ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲು ನೋವು ಕಡಿಮೆಯಾಗುತ್ತದೆ.
ರೋಗನಿರೋಧಕವಾಗಿ ಬೆಳ್ಳುಳ್ಳಿ ಉಪಯುಕ್ತ, ಕೊಲೆಸ್ಟ್ರಾಲ್ ಜಾಸ್ತಿಯಾಗಿದ್ದಾಗ ಬೆಳ್ಳುಳ್ಳಿಯುಕ್ತ ಮಾತ್ರೆಗಳ ಸೇವನೆ ಹಿತಕರ, ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಒಳ್ಳೆಯದು, ವಾತ ಸಂಬಂದಿ ಕೀಲುನೋವು, ವಯಸ್ಸಾದಾಗ ಬರುವ ಸಂಧಿವಾತಗಳಿಗೂ ಬೆಳ್ಳುಳ್ಳಿ ಸೇವನೆ ಹಿತಕರ, ಬೆನ್ನುನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷದಿ, ಎರಡು ಅಥವಾ ಮೂರೂ ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ, ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.