ನಿಲ್ಲದ ಬೇದಿ ಅಥವಾ ಅತಿಸಾರವಾದರೆ ನೇರಳೆ ಮರದ ತೊಗಟೆಯ ರಸ ತೆಗೆದು ಮೇಕೆಯ ಹಾಲಿನ ಜೊತೆ ಬೆರೆಸಿ ಕುಡಿಯಿರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಹೊಟ್ಟೆ ಉರಿಯುವುದು ಮತ್ತು ಹಳದಿಯಾಗಿ ವಾಂತಿಯಾಗುವುದು ನಿಲ್ಲುತ್ತದೆ.
ಕರಬೂಜದ ಹಣ್ಣನ್ನು ತಿಂದ ಮೇಲೆ ನೀವೇನಾದರೂ ಹಾಲು ಕುಡಿದರೆ ನಿಮಗೆ ಅತಿಸಾರ ಬೇಧಿ ಆಗುವುದು ಪಕ್ಕಾ.
ಕೆಲವರಿಗೆ ಪ್ರಯಾಣದ ಸಮಯದಲ್ಲಿ ವಾಂತಿ ಬರುವಾಗ ಕಿತ್ತಳೆ ಹಣ್ಣಿನ ವಾಸನೆ ಸವೆದರೆ ವಾಂತಿ ನಿಲ್ಲುತ್ತದೆ.
ಪರಂಗಿ ಹಣ್ಣನ್ನು ತಿನ್ನುವ ಬದಲು ಪರಂಗಿ ಕಾಯಿಯನ್ನು ಬೇಯಿಸಿ ತಿಂದರೆ ಬೇಧಿ ಗುಣವಾಗುತ್ತದೆ.
ಚಿಕ್ಕ ಮಕ್ಕಳಿಗೆ ಬೇಧಿ ಹಿಡಿದರೆ ಕಿತ್ತಳೆ ಹಣ್ಣಿನ ರಸವನ್ನು ಹಾಲಿನ ಜೊತೆ ಬೆರೆಸಿ ಕುಡಿಸಿದರೆ ಗುಣವಾಗುತ್ತದೆ.
ಜ್ವರ ಹಾಗೂ ಬೇಧಿ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಒಳ್ಳೆಯದು.
ಸೀಬೆ ಗಿಡದ ಎಲೆಗಳ ಕಷಾಯ ಉದರದ ತೊಂದರೆಗಳನ್ನು ನಿವಾರಿಸುತ್ತದೆ ಅಜೀರ್ಣ, ವಾಂತಿ, ಬೇಧಿ ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ.
ಜೊತೆಯಲ್ಲಿ ಇದನ್ನು ಕೂಡ ಓದಿ ವಿಪರೀತ ತಲೆ ಸುತ್ತು ಮತ್ತು ತಲೆ ನೋವಿಗೆ ಇಲ್ಲಿದೆ ಸುಲಭ ಮನೆಮದ್ದು.
ಮದ್ಯಾನದ ಬಿಸಿಲು ಶುರುವಾಗೋ ಮುನ್ನವೇ ತುಂಬಾ ಜನರಿಗೆ ತಲೆ ಸುತ್ತು ಅಥವ ಬಿಸಿಲಿನಲ್ಲಿ ಸ್ವಲ್ಪ ಸಮತ ಕಳೆದರೆ ಸಾಕು ತಲೆ ನೋವು ಸಮಸ್ಯೆಗಳು ಭೂತದಂತೆ ಕಾಡುತ್ತವೆ, ಇಂತಹ ಸಮಸ್ಯೆ ಗಳಿಗೆ ಪರಿಹಾರವಾಗಿ ಕೆಲುವು ಮನೆ ಮದ್ದು ನಿಮಗಾಗಿ ತಿಲಿಸುತ್ತೀವೆ.
ನೆಲ್ಲಿಕಾಯಿಯನ್ನು ರುಬ್ಬಿ ಮಾಡುವ ಶರಬತ್ತು ಕುಡಿಯುವುದರಿಂದ ತಲೆ ತಿರುಗುವುದು ನಿಲ್ಲುತ್ತದೆ.
ಉಷ್ಣದಿಂದ ತಲೆನೋವು ಉಂಟಾದರೆ ಕಲ್ಲಂಗಡಿಯ ರಸಕ್ಕೆ ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.
ಮಲಗುವ ಮೊದಲು ರಾತ್ರಿ 5-6 ಹನಿ ಬಾಧಾಮಿ ತೈಲವನ್ನು ಮೂಗಿಗೆ ಹಾಕಿದರೆ ತಲೆನೋವು ಕಡಿಮೆ ಆಗುತ್ತದೆ.
ಸೇಬಿನ ಹಣ್ಣಿಗೆ ಸ್ವಲ್ಪ ಉಪ್ಪು ಹಚ್ಚಿ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ, ಏಲಕ್ಕಿ ಚೂರ್ಣ ಬೆರೆಸಿದ ನಿಂಬೆ ಪಾನಕ ಸೇವಿಸಿದರು ತಲೆ ತಿರುಗು ನಿಲ್ಲುತ್ತದೆ.
ದಿನವು 10-15 ಒಣದ್ರಾಕ್ಷಿಗಳನ್ನು ತಿಂದು ಹಾಲು ಕುಡಿಯುವುದರಿಂದ ದುರ್ಬಲತೆಯಿಂದ ತಲೆ ತಿರುಗುವುದು ನಿಲ್ಲುತ್ತದೆ. ಲೈಂಗಿಕ ಶಕ್ತಿಯು ವೃದ್ದಿಯಾಗುತ್ತದೆ.