ಹೋಟೆಲ್’ನಲ್ಲಿ ತಿಂಡಿ ಸರ್ವ್ ಮಾಡಿದ ಮಹಿಳೆಗೆ ಕಾರ್ ಗಿಪ್ಟ್ ಕೊಟ್ಟ ದಂಪತಿಗಳು

0
8515

ನಾವು ಪರಿಚಯದವರಿಗೆ ಅಥವಾ ನೆಂಟರಿಸ್ಟರಿಗೆ ಅವರ ಶುಭ ಸಮಾರಂಭಗಳು ಅಥವಾ ಹುಟ್ಟಿದ ಹಬ್ಬದ ಪ್ರಯುಕ್ತ ಸಣ್ಣ ಮಟ್ಟದ ಅದೂ ಸಾವಿರದೊಳಗಿನ ಗಿಪ್ಟ್ ಕೊಡುವುದು ವಾಡಿಕೆ. ಆದರೆ ಸಂಬಂಧವೇ ಇಲ್ಲದ ಕೇವಲ ಒಂದೇ ದಿನದಲ್ಲಿ ಪರಿಚಯವಾದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರನ್ನು ಗಿಪ್ಟ್ ಮಾಡುವುದಂದರೇನು ? ಆಶ್ಚರ್ಯವಾಗುತ್ತದೆಯೆ ? ಕೆಲವು ವ್ಯಕ್ತಿಗಳು ನಮ್ಮ ಕಲ್ಪನೆಗೂ ನಿಲುಕದ ಜೀವಿತವನ್ನು ಮಾಡುತ್ತಿದ್ದಾರೆ. ಮನುಷ್ಯರು ಅನ್ನುವುದು ಅಂತಹವರಿಂದಲೇ ಇರಬೇಕು. ಮಾನವೀಯ ಗುಣ ಯಾರು ಹೊಂದಿರುವರೋ ಅವರೇ ಮನುಷ್ಯ ಅಲ್ಲವಾ ?!

ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಅಮೆರಿಕಾದ ಟೆಕ್ಸಾಸ್’ನ ಗ್ಯಾಲೆಸ್ಟನ್’ನಲ್ಲಿ ಎಡ್ವರ್ಡ್ ಎಂಬ ಮಹಿಳೆ ಅಮೆರಿಕನ್ ಹೋಟೆಲ್’ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಂದು ಆಸೆ ಇದೆ. ಮಧ್ಯಮ ವರ್ಗದ ಆ ಮಹಿಳೆಗೆ ಒಂದು ಕಾರು ಕೊಳ್ಳಬೇಕು ಎಂಬ ಆಸೆ ಬಹಳ ವರ್ಷಗಳದ್ದು. ಆದರೆ ಹೋಟೆಲ್’ನಲ್ಲಿ ಸರ್ವರ್ ಕೆಲಸ ಮಾಡುವ ಆಕೆಯ ಕನಸು ಈಡೇರುವುದು ಸ್ವಲ್ಪ ಕಷ್ಟವೇ . ಅದಕ್ಕೆ ಆಕೆ ದುಡ್ಡನ್ನು ಉಳಿಸಲು ಶುರು ಮಾಡುತ್ತಾಳೆ.ಅದಕ್ಕೆ ತನ್ನ ಮನೆಯಿಂದ ಹೋಟಲ್’ಗೆ ಪ್ರತಿ ದಿನ ಸುಮಾರು 22.5 ಕಿಮೀ ದೂರವನ್ನು ನಡೆದುಕೊಂಡು ಬರುತ್ತಾಳೆ.

ಒಂದು ದಿನ ದಂಪತಿಗಳು ಹೋಟೆಲ್’ಗೆ ಊಟಕ್ಕೆ ಬರುತ್ತಾರೆ. ಊಟವನ್ನು ಎಡ್ವರ್ಡ್ ಸರ್ವ್ ಮಾಡುತ್ತಾಳೆ. ಅವಳ ಸೇವೆ ಅವರಿಗೆ ಇಷ್ಟವಾಗಿ ಅವಳ ಬಗ್ಗೆ ಕೇಳುತ್ತಾರೆ. ಆಗ ಅವರಿಗೆ ಅವಳ ಕಾರಿನ ಆಸೆ, ಅವಳು ಅದಕ್ಕೆ 22.5 ಕಿಮೀ ನಡೆದುಕೊಂಡು ಬರುವ ವಿಷಯ ತಿಳಿಯುತ್ತದೆ. ತಕ್ಷಣ ಅವರು ಅಲ್ಲಿಂದ ಹೊರಟವರೇ ಒಂದು ಕಾರು ಶೋ ರೂಂಗೆ ಹೋಗುತ್ತಾರೆ. ಎಡ್ವರ್ಡ್’ಗೆ ನಾವೇ ಒಂದು ಕಾರು ಕೊಡಿಸೋಣ ಎಂದು ಅವರು ಅವಳ ಕನಸಿನ ಕಾರನ್ನೇ ಬುಕ್ ಮಾಡಿ ಸುಮಾರು ನಾಲ್ಕು ಗಂಟೆಗಳ ನಂತರ ಹೊಟಲ್’ಗೆ ಬಂದು ಎಡ್ವರ್ಡ್’ಗೆ ಕಾರ್ ಗಿಪ್ಟ್ ಮಾಡಿ ಸರ್ಪ್ರೈಜ್ ಕೊಡುತ್ತಾರೆ.

ಆಗ ಅವಳ ಆನಂದಕ್ಕೆ ಪಾರವೇ ಇರುವುದಿಲ್ಲ. ಅವಳ ಕಣ್ಣಲ್ಲಿ ಆನಂದದಿಂದ ಕಣ್ಣೀರು ಬರುತ್ತದೆ. ಅವಳ ಸಂತೋಷ ಕಂಡು ದಂಪತಿಗಳು ತುಂಬಾ ಖುಷಿಯಾಗುತ್ತಾರೆ. ಇಂತಹ ವ್ಯಕ್ತಿಗಳು ನಮಗೆ ಆದರ್ಶ ಖಂಡಿತಾ ಆಗುತ್ತಾರೆ ಅಲ್ಲವೇ ?! ನಿಮ್ಮ ಅಭಿಪ್ರಾಯ ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಆದಷ್ಟು ಎಲ್ಲಾ ಕಡೆ ಹಂಚಿಕೊಳ್ಳಿ. ಒಳ್ಳೆಯದು ಹಂಚಲು ನಮಗೆ ಹಿಂಜರಿಕೆ ಯಾಕೆ ?!

LEAVE A REPLY

Please enter your comment!
Please enter your name here