10ಕ್ಕೂ ಹೆಚ್ಚು ಕಾಯಿಲೆಗಳಿಗೆ ಒಂದು ತುಂಡು ಶುಂಠಿಯೇ ಮನೆಮದ್ದು!

0
3354

ಚರಕ ಸಂಹಿತೆಯಲ್ಲಿ ಶುಂಠಿಯನ್ನು ವಿಶ್ವಭೇಷಜ ಎಂಬ ಹೆಸರಿನಿಂದ ಹೊಗಳಲಾಗಿದೆ, ನಾಗರ, ಮಹೌಷಧ, ಶೃಂಗವೇರ ಮೊದಲಾದ ಪರ್ಯಾಯ ನಾಮಗಳು ಇದಕ್ಕೆ ಇವೆ, ಅತ್ಯುತ್ತಮ ಆಮಪಾಚಕ ವಾಗಿರುವುದರಿಂದ ಶರೀರದಲ್ಲಿ ಜೀರ್ಣವಾಗದೆ ಉಳಿದ ಆಹಾರದಿಂದ ಉಂಟಾಗುವ ವಿವಿಧ ವ್ಯಾಧಿಗಳನ್ನು ದೂರ ಮಾಡುತ್ತದೆ ಮತ್ತು ತನ್ನ ತೀಕ್ಷ್ಣತೆಯಿಂದ ಶರೀರದೊಳಗಿನ ಸ್ರೋತಸ್ ಗಳ ಅವರೋಧವನ್ನು ನಿವಾರಿಸುತ್ತದೆ, ಈ ಎರಡು ಗುಣಗಳಿಂದಾಗಿ ಶುಂಠಿಯು ಎಲ್ಲಾ ರೋಗಗಳನ್ನು ಗುಣಪಡಿಸಲು ಸಾಧ್ಯವಾಗುವುದು.

ಶುಂಠಿಯಲ್ಲಿ 80% ಆದ್ರತೆ, 2.3% ಪ್ರೋಟೀನ್, ೨.೪% ಫೈಬರ್, ೧೨.೩% ಕಾರ್ಬೋಹೈಡ್ರೇಟ್ಸ್ ಮತ್ತು ಖನಿಜಗಳು ಕ್ಯಾಲ್ಸಿಯಂ ಫಾಸ್ಪರಸ್, ಕಬ್ಬಿಣ, ಅಯೋಡಿನ್ ಮತ್ತು ವಿಟಮಿನ್ ಎ,ಬಿ ಮತ್ತು ಸಿ ಗಳು ಇರುತ್ತವೆ.

ಅಗ್ರಸ್ಥಾನ, ಹಸಿವನ್ನು ಉಂಟುಮಾಡುವುದರಲ್ಲಿ ಮತ್ತು ಹೆಚ್ಚಿಸುವುದರಲ್ಲಿ ಶುಂಠಿಗೆ ಅಗ್ರಸ್ಥಾನ, ಮಜ್ಜಿಗೆಯಲ್ಲಿ ತಯಾರಿಸಿದ ಶುಂಠಿಯ ತಂಬುಳಿ ಅಥವಾ ಚಟ್ನಿಯ ನಾವು ತಿಂದ ಆಹಾರವನ್ನು ಜೀರ್ಣಮಾಡಿ ದೇಹದಲ್ಲಿ ಅಮವು ಸೇರದಂತೆ ಮಾಡುವುದು, ಹೊಟ್ಟೆನೋವು, ಹೊಟ್ಟೆಉಬ್ಬರ ಗಳಲ್ಲಿ ಶುಂಠಿಯ ರಸವನ್ನು ಸೇವಿಸುವುದು ಹಿತಕರ, ಪ್ರತಿದಿನ ಊಟಕ್ಕೆ ಮೊದಲು ಒಂದು ಚೂರು ಶುಂಠಿಯನ್ನು ಸ್ವಲ್ಪ ಉಪ್ಪು ಸೇರಿಸಿ ತಿನ್ನುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ.

ಲೇಪನ, ಆಮವಾತ, ಗಂಟುನೋವು, ಇತ್ಯಾದಿಗಳಲ್ಲಿ ಶುಂಠಿಯು ಕಲ್ಕ ತಯಾರಿಸಿ ಸ್ವಲ್ಪ ಬಿಸಿಮಾಡಿ ಲೇಪ ಮಾಡಬೇಕು, ಶೀತತ್ವ ನೋವು ಬಾವುಗಳನ್ನು ಇದು ದೂರ ಮಾಡುತ್ತದೆ ಶುಂಠಿಯ ಪುಡಿಯನ್ನು ಎಳ್ಳೆಣ್ಣೆಯೊಂದಿಗೆ ಮಿಶ್ರಿ ಸಿ ಅಭ್ಯಂಗ ಮಾಡುವುದರಿಂದ ಕೂಡ ಈ ರೋಗಗಳು ಗುಣಹೊಂದುತ್ತವೆ, ಶುಂಠಿಯ ಚೂರ್ಣವನ್ನು ಮೈಗೆ ತಿಕ್ಕುವುದರಿಂದ ಬಾವು ಇಳಿಯುತ್ತದೆ, ಅಲರ್ಜಿ,ಆನೆಕಾಲು ರೋಗಗಳಲ್ಲೂ ಶುಂಠಿಯ ಪ್ರಯೋಗವು ಉತ್ತಮ ಪರಿಣಾಮವನ್ನು ಬೀರುತ್ತದೆ.

ಶುಂಠಿಯ ರಸ, ನೆಗಡಿ, ಕೆಮ್ಮು, ದಮ್ಮು, ಬಿಕ್ಕಳಿಕೆಗಳಲ್ಲೂ ಶುಂಠಿಯ ರಸವನ್ನು ಕುಡಿಯಬೇಕು, ಇದು ಕಫಹರವಾಗಿ ಕೆಲಸ ಮಾಡಿ, ಗಂಟಲಿನಲ್ಲಿ ಸಂಚಯವಾದ ಕಫವನ್ನು ಕರಗಿಸಿ ತೆಗೆಯುತ್ತದೆ, ಇದು ನರಗಳಿಗೆ ಉತ್ತೇಜಕವಾಗಿದೆ, ಸಾಮಾನ್ಯ ಜ್ವರಗಳಲ್ಲಿ ಔಷಧಿಯನ್ನು ಶುಂಠಿ ರಸದೊಂದಿಗೆ ಸೇವಿಸುವ ಕ್ರಮ ರೂಢಿಯಲ್ಲಿದೆ ವಿಷಮ ಜ್ವರದಲ್ಲಿ ಶುಂಠಿಯ ಚೂರ್ಣ ಹಿತಕರವಾಗಿದೆ.

ಸಂತಾನ ಶಕ್ತಿ, ಶುಂಠಿಯೂ ಉತ್ತೇಜಕವಾಗಿರುವುದರಿಂದ ಪುರುಷನ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ, ವಾಜೀಕರಣ ಔಷಧಿಗಳಲ್ಲಿ ಶುಂಠಿಯು ಒಂದಾಗಿದೆ, ಹೆರಿಗೆಯ ನಂತರ ದೌರ್ಬಲ್ಯದಲ್ಲಿ ಶುಂಠಿಪಾಕ ಸೇವಿಸಬೇಕು, ಕಠಿಣವಾದ ಕಾಯಿಲೆಯಲ್ಲಿ ನಿತ್ರಾಣದಿಂದ ಕೈಕಾಲುಗಳಿಗೆ ತಿಕ್ಕುವುದರಿಂದ ಬಿಸಿ ಉಂಟಾಗಿ ದೌರ್ಬಲ್ಯವು ಕಡಿಮೆಯಾಗುವುದು, ನೆಗ್ಗಿಲುಮುಳ್ಳಿನ ಕಷಾಯದೊಂದಿಗೆ ಶುಂಠಿ ಬೆರೆಸಿ ಪ್ರತಿದಿನ ಪ್ರಾತಃ ಕಾಲದಲ್ಲಿ ಸೇವಿಸುವುದರಿಂದ ಅಮವಾತ ಮತ್ತು ಸೊಂಟ ನೋವುಗಳು ಗುಣ ಹೊಂದುವುದು ಎಂದು ವೃಂದಮಾಧವ ಎಂಬ ಗ್ರಂಥದಲ್ಲಿ ಹೇಳಲಾಗಿದೆ.

ಹಳೆಯದಾದ ಬೆಲ್ಲದೊಂದಿಗೆ ಶುಂಠಿ ರಸವನ್ನು ಕುಡಿಯುವುದರಿಂದ ಶೀತ, ಅಲರ್ಜಿ, ನಿವಾರಿಸಲು ಸದ್ಯ ಎಂದು ಭಾವ ಪ್ರಕಾಶದಲ್ಲಿ ಅಭಿಪ್ರಾಯಪಡಲಾಗಿದೆ, ವಾತರೋಗದಲ್ಲಿ ಶುಂಠಿಯ ಅತ್ಯುತ್ತಮವಾಗಿ ಕಾರ್ಯ ಮಾಡುವುದು ಎಂದು ನಂಬಲಾಗಿದೆ, ಶುಂಠಿ ಮತ್ತು ಮಜ್ಜಿಗೆಯ ಮಿಶ್ರಣವು ಮಹಾ ಔಷಧಿ ಎಂದು ಶೋಢಲ ಎಂಬ ಪ್ರಖ್ಯಾತ ಪ್ರಾಚೀನ ಚಿಕಿತ್ಸಕನ ನಂಬಿಕೆ.

LEAVE A REPLY

Please enter your comment!
Please enter your name here