ಜೀರಿಗೆ, ಹಳೆ ಬೆಲ್ಲ ಹುಣಸೆ ಹಣ್ಣು-ಇವು ಮೂರನ್ನೂ ಸಮ ಪ್ರಮಾಣದಲ್ಲಿತೆಗೆದುಕೊಂಡು ಚೆನ್ನಾಗಿ ಕುಟ್ಟಬೇಕು ಇದನ್ನು ಗೋಲಿ ಗಾತ್ರದಷ್ಟು ತೆಗೆದುಕೊಂಡು ಬಾಯಿಯಲ್ಲಿಇಟ್ಟುಕೊಂಡು ಚಪ್ಪರಿಸಿ ರಸ ನುಂಗುತ್ತಿದ್ದರೆ ಪಿತ್ತವಿಕಾರದಿಂದ ತಲೆದೋರುವ ವಾಕರಿಕೆ, ಹೊಟ್ಟೆ ತೊಳಸುವಿಕೆ, ತಲೆ ಸುತ್ತುವಿಕೆ ಇತ್ಯಾದಿದೋಷಗಳು ನಿವಾರಣೆಯಾಗುವುವು. ಒಂದು ಟೀ ಚಮಚ ಹುಣಸೆ ಗೊಜ್ಜನಲ್ಲಿ ಅರ್ಥ ಟೀ ಚಮಚ ಜೀರಿಗೆ ಚೂರ್ಣ ಕಲಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಅರಿಶಿನ ಕಾಮಾಲೆ ಗುಣವಾಗುವುದು. ಪಿತ್ತಶಾಂತಿಗೂ ಇದೇ ಚಿಕಿತ್ತೆ ಮಾಡಬಹುದು.
ಒಂದು ಬಟ್ಟಲು ನೀರಿನಲ್ಲಿ ಒಂದು ಟೀ ಚಮಚ ಜೀರಿಗೆ ಹಾಕಿ ನೀರು ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಈ ಕಷಾಯಕ್ಕೆ ಒಂದುಟೀ ಚಮಚತಾಜಾ ಕೊತ್ತುಂಬರಿ ಸೊಪ್ಪಿನ ರಸ ಮತ್ತು ಒಂದು ಚಿಟಿಕೆ ಅಡುಗೆ ಉಪ್ಪು ಸೇರಿಸಿ. ಈ ಔಷಧಿಯನ್ನು ಊಟದ ನಂತರ ದಿನಕ್ಕೆ ಎರಡಾವರ್ತಿ ತೆಗೆದುಕೊಂಡರೆ ತಲೆ ಸುತ್ತುವಿಕೆ, ಬಾಯಲ್ಲಿ ನೀರೂರುವುದು, ಹೊಟ್ಟೆ ತೊಳಸುವಿಕೆ, ಅಜೀರ್ಣ, ಹೊಟ್ಟೆ ಉಬ್ಬರ, ಅತಿಸಾರ ಇತ್ಯಾದಿ ರೋಗಗಳಲ್ಲಿ ಹೆಚ್ಚು ಗುಣ ಕಂಡುಬರುವುದು.
ಬಿಸಿಲಿನ ಬೇಗೆಯಿಂದ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡರೆ ಜೀರಿಗೆಯನ್ನು ನುಣ್ಣಗೆ ಪುಡಿಮಾಡಿ ತೆಂಗಿನ ಹಾಲಿನಲ್ಲಿ ಕಲಸಿ ಹಚ್ಚಿರಿ. ಕೊಂಚವೇಳೆಯ ನಂತರ ಬೆಚ್ಚನೆಯ ನೀರಿನಿಂದ ಸ್ನಾನಮಾಡಿರಿ. ಕೆಲವು ದಿನಗಳವರೆಗೆ ಈಕ್ರಮ ಮುಂದುವರಿಸಿ. ನಂತರ ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡಿ ಮತ್ತು ಕೋಸುಂಬರಿ, ಎಳನೀರು,ನಿಂಬೆರಸ, ತಾಜಾ ಹಣ್ಣುಗಳು- ಆವುಗಳನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಿರಿ. ಆದರೆ ಸಕ್ಕರೆ ಬಳಕೆ ಕಡಿಮೆ ಮಾಡಲು ಮರೆಯಬೇಡಿ.
ಹೇರಳೆ ಹಣ್ಣನ್ನು ಎರಡು ಹೋಳು ಮಾಡಿ; ಆ ಹೋಳುಗಳಲ್ಲಿ ಜೀರಿಗೆಪುಡಿಯನ್ನು ಚೆನ್ನಾಗಿ ತುಂಬಿ, ಒಂದು ಪೊರಕೆ ಕಡ್ಡಿಯಿಂದ ಚೆನ್ನಾಗಿ ತಿವಿಯಿರಿ.ನಂತರ ಹೋಳುಗಳನ್ನು ಕೊಂಚ ಕಾಲ ಬಿಸಿ ಬೂದಿಯಲ್ಲಿಡಿ. ಆ ತರುವಾಯ ಹೋಳುಗಳಿಂದ ರಸ ಹಿಡಿ, ಬರಿಯ ಹೊಟ್ಟೆಯಲ್ಲಿ ಸೇವಿಸಿರಿ. ಪಿತ್ತಾ ಧಿಕ್ಕದಿಂದ ಉಂಟಾಗುವ ದೋಷಗಳು ಈ ರಸದ ಸೇವನೆಯಿಂದ ನಿವಾರಣೆಯಾಗುವುವು.ಎರಡು ವಾರ ಕಾಲ ಪ್ರತಿದಿನವೂ ಈ ರಸವನ್ನು ಸೇವಿಸುತ್ತಿದ್ದರೆ ಅರಿಶಿನಕಾಮಾಲೆಯೂ ಗುಣವಾಗುವುದು.
ಪಿತ್ತ ಶಾಂತಿಗೆ ಜೀರಿಗೆ ದಿವ್ಯೌಷಧಿ. ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತ ಶಾಂತಿಯಾಗುವುದು. ಪ್ರತಿದಿನ ಊಟದ ನಂತರ ಈ ಮಜ್ಜಿಗೆಯನ್ನು ಒಂದು ಬಟ್ಟಲು ಸೇವಿಸುವುದು ಆರೋಗ್ಯಕರ.
ಊಟಕ್ಕೆ ಮುಂಚೆ ಜೀರಿಗೆ ಅಗಿದು ತಿನ್ನುವುದರಿಂದ, ಹಸಿವು ಹೆಚ್ಚುವುದು ಊಟದ ನಂತರ ಜೀರಿಗೆ ಅಗಿದು ತಿನ್ನುವುದರಿಂದ ಉಂಡ ಆಹಾರವು ಚೆನ್ನಾಗಿ ಜೀರ್ಣಿಸುವುದು ಮಲಬದ್ಧತೆಯುಂಟಾಗುವುದಿಲ್ಲ. ಜೀರಿಗೆಯನ್ನು ಅಗಿದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುವುದು.
ಗರ್ಭಿಣಿಯು ಗರ್ಭಧಾರಣೆಯಾದಂದಿನಿಂದ ಶಿಶು ಜನನವಾಗುವವರೆಗೂ ಪ್ರತಿದಿನ ಹಾಲು ಮತ್ತು ಚೇನು ಬೆರಸಿದ ಜೀರಿಗೆ ಕಷಾಯ ಸೇವಿಸುತ್ತಿದ್ದರೆ ಗರ್ಭದಲ್ಲಿ ಶಿಶುವಿನಬೆಳವಣಿಗೆ ಚೆನ್ನಾಗಿ ಆಗುವುದು. ಸುಖ ಪ್ರಸವಕ್ಕೆದಾರಿಯಾಗುವುದು ಮತ್ತು ಎದೆ ಹಾಲು ಯಥೇಚ್ಛವಾಗಿ ಉತ್ಪತ್ತಿಯಾಗುವುದು.ಈ ಕಷಾಯವನ್ನು ಬೆಳೆಯುವ ಮಕ್ಕಳಿಗೂ, ಅರಕ್ತತೆಯ ದೋಷ ಉಳ್ಳವರಿಗೂ ನರದೌರ್ಬಲ್ಯವುಳ್ಳವರಿಗೂ ದ್ರವರೂಪ ಆಹಾರವಾಗಿ ಕೊಡುವುದರಿಂದ ಲಾಭವುಂಟು.