ಹೌದು ಆಲೂಗಡ್ಡೆ ಜ್ಯೂಸ್ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡಲಿದೆ. ಇದಕ್ಕಾಗಿ ತಾಜಾ ಆಲೂಗಡ್ಡೆಯ ಜ್ಯೂಸ್ ತೆಗೆದು ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ ಎರಡು ಸಲ ತಂಪಾಗಿರುವ ಈ ಜ್ಯೂಸ್ ಅನ್ನು ಭಾದಿತ ಪ್ರದೇಶಕ್ಕೆ ಹಚ್ಚಿ.
ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಫೈಬರ್, ಪೊಟೇಷಿಯಂ ಮುಂತಾದ ಅಂಶಗಳು ಹೇರಳವಾಗಿವೆ. ಆಲೂಗಡ್ಡೆಯನ್ನು ಬಿಲ್ಲೆಗಳಾಗಿ ಮಾಡಿ ಕಪ್ಪು ವರ್ತುಲಗಳಿರವ ಕಡೆಗೆ ಉಜ್ಜಿಕೊಂಡು ಅವುಗಳನ್ನು ನಿವಾರಿಸಬಹುದು ಎಂದು ಕೇಳಿದ್ದೇವೆ.
ಅದೇ ರೀತಿ ಇದರ ಜ್ಯೂಸ್ ಕುಡಿಯುವುದರಿಂದಲೂ ನಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು, ಇದರ ಜ್ಯೂಸ್ ನ ಸೇವನೆ ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಬಹುಬೇಗನೇ ನಿವಾರಿಸುತ್ತದೆ ಅಲ್ಲದೆ ಚರ್ಮಕ್ಕೆ ಹೊಳಪು ನೀಡುವುದರ ಜತೆಗೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ, ಇದರಿಂದ ನೀವು ಸದಾ ಯಂಗ್ ಆಗಿ ಕಾಣಬಹುದು.
ಹಸಿ ಆಲೂಗಡ್ಡೆ ಜ್ಯೂಸ್ ಸಂಧಿವಾತಕ್ಕೆ ಹೇಳಿ ಮಾಡಿಸಿದಂತಹ ಮನೆಮದ್ದಾಗಿದೆ. ಉರಿಯೂತ ಶಮನಕಾರಿ ಗುಣ ಹೊಂದಿರುವ ಹಸಿ ಆಲೂಗಡ್ಡೆ ಜ್ಯೂಸ್ ಉರಿಯೂತ ಕಡಿಮೆ ಮಾಡಿ ನೋವು ಶಮನ ಮಾಡುವುದು. ಚಳಿಗಾಲದಲ್ಲಿ ಹೆಚ್ಚಾಗುವ ಸಂಧಿವಾತವು ಇದರಿಂದ ನಿವಾರಣೆಯಾಗುವುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.