ಬೇಡುವುದನೆಲ್ಲಾ ಕರುಣಿಸುವ ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ತಾಯಿ..!! ಇತಿಹಾಸ.

0
5498

ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯವು ಈಗ ಕರ್ನಾಟಕದಾದ್ಯಂತ ಹೆಸರು ಪಡೆದಿದೆ ಇದಕ್ಕೆ ಮುಖ್ಯಕಾರಣವೆಂದರೆ, ೧೯೮೦-೧೯೯೦ ರ ದಶಕದಲ್ಲಿ ವಾಹನಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅನುಕೂಲವಾದದ್ದರಿಂದ, ಶೃಂಗೇರಿಗೆ ಬರುವ ಪ್ರವಾಸಿಗರು ಅಲ್ಲಿಂದ ೮೦ ಕಿ.ಮೀ. ದೂರ ಇರುವ ಹೊರನಾಡಿಗೂ ಬರತೊಡಗಿದರು ಅದಕ್ಕೂ ಹಿಂದೆ, ಇಲ್ಲಿನ ಅನ್ನಪೂರ್ಣೇಶ್ವರಿ ದೇವಾಲಯದ ವೈಶಿಷ್ಟ್ಯವೆಂದರೆ, ಯಾವುದೇ ಸಮಯದಲ್ಲಿ ಭೇಟಿ ಕೊಡುವ ಜನರಿಗೂ ಇಲ್ಲಿ ಊಟ ಅಥವಾ ಉಪಹಾರವನ್ನು ನೀಡುವ ಪದ್ದತಿ ಇತ್ತು – ರಾತ್ರಿ ಬಂದವರಿಗೂ ತಿನಿಸು ಅಥವಾ ಊಟವನ್ನು ಕೊಡುವ ಪದ್ದತಿ ಇಲ್ಲಿತ್ತು. ಕ್ರಮೇಣ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಜಾಸ್ತಿಯಾದಂತೆಲ್ಲ, ವಸತಿ ವ್ಯವಸ್ಥೆ ಮತ್ತಿತರ ವ್ಯವಸ್ಥೆಗಳ ಅನುಕೂಲಗಳು ಹೆಚ್ಚಾದವು ಮತ್ತು ಅಂಗಡಿ ಮುಂಗಟ್ಟುಗಳೂ ತಲೆ ಎತ್ತಿದವು.ಇಲ್ಲಿನ ದೇವಾಲಯದ ಆಳೆತ್ತರದ ಅನ್ನಪೂರ್ಣೇಶ್ವರಿ ವಿಗ್ರಹವು ಆಕರ್ಷಕವಾಗಿದೆ. ವರ್ಷದ ಎಲ್ಲಾ ಕಾಲಗಳಲ್ಲೂ ಇಲ್ಲಿಗೆ ಭೇಟಿ ನೀಡಬಹುದಾದರೂ, ಮಳೆಗಾಲದ ಮೂರು ತಿಂಗಳಿನಲ್ಲಿ ಮಳೆ ವಿಪರೀತವಿರುವುದರಿಂದ, ಸ್ವಲ್ಪ ಅನಾನುಕೂಲವಾಗಬಹುದು.

ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅನ್ನಪೂರ್ಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ ವರ್ಷವಿಡೀ ಲಕ್ಷಾಂತರ ಭಕ್ತರು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಅನ್ನಪೂಣೇಶ್ವರಿಯ ಕೃಪೆ ಇದ್ದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಹೊರನಾಡು ಸುತ್ತ ಮುತ್ತಲಿನ ಗ್ರಾಮಗಳ ರೈತರಲ್ಲಿದೆ. ಹೀಗಾಗಿ ಅವರು ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ತಾಯಿಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ತಂದು ಒಪ್ಪಿಸುವ ಸಂಪ್ರದಾಯವಿದೆ.

ಭಕ್ತಿಭಾವ ಉಕ್ಕಿಸುವ ಆರು ಅಡಿ ಎತ್ತರದ ಸುಂದರವಾದ ವಿಗ್ರಹ ರೂಪದಲ್ಲಿ ಹೊರನಾಡಿನಲ್ಲಿ ನೆಲೆ ನಿಂತಿರುವ ಆದಿಶಕ್ತ್ಯಾತ್ಮಿಕೆಯಾದ ತಾಯಿ ಅನ್ನಪೂರ್ಣೆಶ್ವರಿಯನ್ನು ನೋಡುವುದೇ ಒಂದು ಸೌಭಾಗ್ಯ. ಹೀಗಾಗೆ ಕವಿ ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು, ನಾಲಿಗೆ ಸಾವಿರ ಸಾಲದು ಈಶ್ವರಿ ನಿನ್ನನು ಹೊಗಳಲು ಎಂದು ಹಾಡಿರುವುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here