ಶನಿ ಮಹಾತ್ಮನು ಕೇವಲ ಅಶುಭವನ್ನು ಮಾತ್ರ ಉಂಟುಮಾಡುತ್ತಾನ..? ಆತನ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು..?

0
2991

ಭಾವನಾತ್ಮಕತೆ : ಶನಿ ದೇವರ ಹೆಸರು ಕೇಳಿದ ಕೂಡಲೇ ಜನರು ಬೆಚ್ಚಿ ಬೀಳುತ್ತಾರೆ, ಶನಿ ನಮಗೆ ಸದಾ ಕಾಲ ಕೇಳುವುದು ಮಾಡುತ್ತಾನೆ ಎಂದು ನಂಬಿದ್ದಾರೆ, ಆದರೆ ಶನಿ ಹಲವಾರು ಬಾರಿ ಒಳ್ಳೆಯ ಫಲಿತಾಂಶ ನೀಡಿ ಭಕ್ತರ ಉದ್ದಾರಕ್ಕೆ ಕಾರಣ ಆಗಿದ್ದಾನೆ, ಶನಿ ದೇವರು ತುಂಬಾ ಒಳ್ಳೆಯ ದೇವರು ಎಂದು ಪುರಾಣಗಳು ಹೇಳಿದೆ.

ಆದರೆ ಪ್ರತಿಯೊಬ್ಬ ವ್ಯಕ್ತಿ ಸಹ ಶನಿಯ ಕೃಪೆ, ಅವಕೃಪೆಗೆ ಪಾತ್ರನಾಗಲು ಬೇಕು, ಇಲ್ಲದಿದ್ದರೆ ಅವನ ಬದುಕು ಸಂಪೂರ್ಣ ಆಗುವುದಿಲ್ಲ,ಶನಿ ದೇವರ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುವ ಪ್ರತೀತಿ ಇದೆ, ಶನಿ ಪಟ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಅಶಾಂತಿ, ನೆಮ್ಮದಿ ರಹಿತ ಬದುಕು ನಮ್ಮ ಪಾಲಿಗೆ ಬರುತ್ತದೆ ಎನ್ನಲಾಗುವುದು, ಹೀಗಾಗಿ ಮನೆಯಲ್ಲಿ ಕೇವಲ ಸೂರ್ಯನ ಫೋಟೋ ಬಿಟ್ಟು ಉಳಿದ ಗ್ರಹಗಳ ಫೋಟೋವನ್ನು ಇಟ್ಟುಕೊಳ್ಳಬಾರದು ಎಂದು ಶಾಸ್ತ್ರಗಳು ಉಲ್ಲೇಖ ಮಾಡಿದೆ.

ವಾಸ್ತವಿಕತೆ : ಶನಿ ಒಂದು ಗ್ರಹ, ನಮ್ಮ ಸೌರ ಮಂಡಲದಲ್ಲಿ ಶನಿ ಸಹ ಸೂರ್ಯನ ಸುತ್ತಲೂ ಸುತ್ತುವ, ಪರಿಭ್ರಮಿಸುವ ಒಂದು ಗ್ರಹ, ಶನಿ ಗ್ರಹದ ಸುತ್ತಲು ಹರಿದಾಡುವ, ಸಂಭ್ರಮಿಸುವ ಗ್ರಹಗಳು ಸಹ ನಮ್ಮ ಭವಿಷ್ಯ, ನಡೆಯುತ್ತಿರುವ ಸಂಗತಿಗಳ ಮೇಲೆ ಪ್ರಭಾವ ಬೀರುತ್ತದೆ, ಹೀಗಾಗಿ ಶನಿ ಕೇವಲ ಅಶೋಕ ಉಂಟುಮಾಡುವ ದೇವರು ಅಥವಾ ಗ್ರಹ ಎಂದು ಭಾವಿಸಬಾರದು.

ಶನಿ ಎಂದರೆ ನಮ್ಮ ಹಿರಿಯರು ಒಂದು ಬಗ್ಗೆ ಭಯ ಉಂಟು ಮಾಡಿದ್ದಾರೆ, ಆದರೆ ದೇವರು ಎಂದಿಗೂ ಕಷ್ಟಗಳನ್ನು ಕೊಡುವುದಿಲ್ಲ, ಅಕಸ್ಮಾತ್ ಕೊಟ್ಟರೂ ಸಹ ನಮ್ಮ ಸಹನೆ, ತಾಳ್ಮೆ ಪರೀಕ್ಷೆ ಮಾಡುವ ಸಲುವಾಗಿ ಎಂದು ಭಾವಿಸಿ.

ವೈಚಾರಿಕತೆ : ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಕಲೆ ಮತ್ತು ವಿಜ್ಞಾನ ಆದರಿಸಿ ರಚನೆ ಮಾಡಲಾಗಿದೆ, ಹೀಗಾಗಿ ಯಾವ ಸಂಗತಿಯೂ ಅತಿಯಾಗಿ ನಮ್ಮ ಮೇಲೆ ಪ್ರಭಾವ ಬೀರಬಾರದು, ಬರುವುದು ಬರಲಿ ಗೋವಿಂದನ ದಯೆ ಇರಲಿ ಎನ್ನುವಂತೆ ನಮ್ಮ ಪಾಲಿಗೆ ಬರುವ ಕಷ್ಟ, ಸುಖಗಳನ್ನು ಸಮಚಿತ್ತದಿಂದ ಎದುರಿಸಿ ನಿಲ್ಲುವ ಶಕ್ತಿ ಗಳಿಸಿಕೊಳ್ಳಿ, ಕಷ್ಟಗಳು ಸಹ ಸುಖದ ಭಾವ ನೀಡುತ್ತದೆ.

LEAVE A REPLY

Please enter your comment!
Please enter your name here