ಸ್ವೀಡಿಷ್ ಸಂಶೋಧಕರು ಚಾಕಲೇಟ್ ಮೇಲೆ ನಡೆಸಿದ ಅಧ್ಯಯನದಿಂದ ಚಾಕಿ ತಿಂದರೆ ಸಾಮರ್ಥ್ಯ ಮತ್ತು ಸೌಂದರ್ಯ ಹೆಚ್ಚುತ್ತದೆ ಎಂಬುದನ್ನು ತಿಳಿಸಿ ದ್ದಾರೆ ಈ ಸಂಶೋಧನೆಯಿಂದ ಚಾಕಲೇಟ್ ಪ್ರಿಯರಿಗೆ ಸಂತಸ ತಂದಿದೆ ಚಾಕಲೇಟ್ ನಲ್ಲಿ ಕೊಬ್ಬಿನ ಅಂಶ ಮತ್ತು ಕೆಫಿನ್ ಇರುವುದರಿಂದ ಹೆಚ್ಚಿನವರು ಚಾಕೋ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ ಆದರೆ ಸೌಂದರ್ಯ ಮತ್ತು ಆರೋಗ್ಯ ಸುಧಾರಿಸಲು ಕಪ್ಪು ಚಾಕ್ಲೆಟ್ ಅಂದರೆ ಡಾರ್ಕ್ ಚಾಕಲೇಟ್ ಫ್ಪ್ರಯೋಜನಕಾರಿ ಆಗಿದೆ ಎಂದು ಹೇಳುತ್ತಾರೆ.
ಚಾಕಲೇಟ್ ನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಸೃಷ್ಟಿಸುತ್ತದೆ ಎಂದು ಹಿಂದೆ ನಡೆದ ಅಧ್ಯಯನ ಹೇಳಿದ್ದವು, ಇದರ ಬಗ್ಗೆ ಇತ್ತೀಚೆಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಚಾಕಲೇಟ್ ನಲ್ಲಿರುವ ಸಿಟ್ರಿಕ್ ಆಮ್ಲದಿಂದ ಕೊಬ್ಬು ಉಂಟಾಗುವುದಿಲ್ಲ ಬದಲಾಗಿ ಚಾಕಲೇಟ್ ನೊಂದಿಗೆ ತಿನ್ನುವ ಇತರೆ ಫ್ಯಾಟಿ ಫುಡ್ ಗಳಿಂದ ದೇಹದಲ್ಲಿ ಹೆಚ್ಚಿನ ಕೊಬ್ಬು ಶೇಖರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಚಾಕ್ಲೇಟ್ ನಲ್ಲಿ ಯಾವ ಯಾವ ಅಂಶಗಳಿವೆ ಎಂದು ತಿಳಿದುಕೊಳ್ಳೋಣ : ಡಾರ್ಕ್ ಚಾಕಲೇಟ್ ನಲ್ಲಿ ಐರನ್ ಕಾಪರ್ ಮತ್ತು ಮೆಗ್ನೀಷಿಯಂ ಪೋಷಕಾಂಶಗಳು ಹೇರಳವಾಗಿವೆ ಮತ್ತು ಇದರಲ್ಲಿರುವ ಪಾಲಿ ಫೇನಾಲ್ ಎಂಬ ಆಂಟಿ ಆಕ್ಸಿಡೆಂಟ್ ಅಂಶವಿದ್ದು ಇದು ರೋಗ ನಿರೋಧಕ ಶಕ್ತಿ ಯಾಗಿ ಕೆಲಸ ಮಾಡುತ್ತಿದೆ ಪಾಲಿ ಫೆನಾಲ್ ಅಂಶ ದೇಹದಲ್ಲಿ ಹೆಚ್ಚು ಹೆಚ್ಚು ಶೇಖರಣೆ ಆದಂತೆ ಹೃದಯಕ್ಕೆ ಸಂಬಂಧಿಸಿದ ಕಾಯ್ದೆಗಳು ಕಡಿಮೆಯಾಗುತ್ತವೆ ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ 40 ಗ್ರಾಂ ಚಾಕಲೇಟ್ ನಲ್ಲಿ ಕೇವಲ 6 ಮಿಲಿ ಗ್ರಾಮ್ ನಷ್ಟು ಮಾತ್ರ ಕೆಫಿನ್ ಕಂಡುಬರುತ್ತದೆ ಅದರಿಂದ ಚಾಕಲೇಟ್ ನಲ್ಲಿ ಕೆಫಿನ್ ಅಂಶ ಹೆಚ್ಚಿರುತ್ತದೆ ಎಂಬುದು ತಪ್ಪು ತಿಳುವಳಿಕೆ ಅಷ್ಟು ಕೆಫಿನ್ ನಾವು ಪ್ರತಿನಿತ್ಯ ಕುಡಿಯುವ ಕಾಫಿ ಅಲ್ಲಿಯೂ ಸಹ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ