ಅಂಬರೀಶ್’ರವರ ದತ್ತು ಮಗಳು ಬಿಗ್ ಬಾಸ್’ನಲ್ಲಿದ್ದಾರೆ ನೋಡಿ ಬಿಡಿ!

0
2985

ಅಂಬರೀಶ್ ಅಮರರಾಗಿ ಒಂದು ವರ್ಷವಾಯಿತು. ಅವರು ಇನ್ನೂ ಬದುಕಿದ್ದಾರೇನೋ ಎಂದು ಭಾಸವಾಗುತ್ತದೆ. ತಮ್ಮ ನಿಷ್ಠುರ, ನೇರ ನಡೆಯಿಂದ ಜನರ ಮನ ಗೆದ್ದಿದ್ದರು. ಮಂಡ್ಯದ ಗಂಡು, ಕರ್ಣ ಎಂದೇ ಖ್ಯಾತರಾದವರು. ಅಂಬರೀಶ್ 200 ಚಿತ್ರಗಳನ್ನು ಮಾಡಿದ್ದಾರೆ. ರಾಜಕೀಯ ರಂಗದಲ್ಲಿ ಕೂಡ ಜನಸೇವೆ ಮಾಡಿದ್ದರು. ಪತ್ರಕರ್ತರು, ರಾಜಕೀಯ ನಾಯಕರು, ಸಿನಿಮಾದವರಾಗಲೀ ಯಾರನ್ನಾದರೂ ಕೂಡ ಏಕ ವಚನದಲ್ಲಿ ಮಾತನಾಡಿಸುತ್ತಿದ್ದರು. ಪ್ರೀತಿಯಿಂದ ಬಯ್ಯುತ್ತಿದ್ದರು.

ಅವರು ಬಯ್ದಿದ್ದ ಡೈಲಾಗ್ ಬಾರೀ ವೈರಲ್ ಆಗಿತ್ತು. ಇಂತಹ ಅಂಬರೀಶ್ ಈಗ ಇರಬಾರದಿತ್ತೆ ? ಎಂದು ಅನ್ನಿಸುವುದು ಸುಳ್ಳಲ್ಲ. ಇಂತಹ ಅಂಬರೀಶ್’ಗೆ ಕಿರುತೆರೆ ನಟಿಯೊಬ್ಬರು ಸ್ವಂತ ಮಗಳ ತರಹ ಇದ್ದರು. ಅವರು ಯಾರು ಅಂತ ಹೇಳುತ್ತೇವೆ ಬನ್ನಿ.

ಬಿಗ್ಬಾಸ್ ಕನ್ನಡ ಸಿಜನ್ ಈಗ ಯಶಸ್ವಿಯಾಗಿ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಆರೋಗ್ಯಕರ ಪೈಪೋಟಿ ಇದೆ. ಬಿಗ್ಬಾಸ್ ಕಳೆದ ಸಲ ಅಷ್ಟೇನೂ ಯಶಸ್ವಿಯಾಗಲಿಲ್ಲ. ಅದಕ್ಕೆ ಈಗ ಕೇವಲ ಸೆಲೆಬ್ರಿಟಿಗಳನ್ನು ಮಾತ್ರ ಮನೆಯೊಳಗೆ ಬಿಟ್ಟಿದ್ದಾರೆ. ಕಳೆದ ಸಲ ಬಿಗ್ಬಾಸ್ ಸೋಲಲು ಅದು ಪ್ರಸಾರವಾಗುತ್ತಿದ್ದ ಚಾನಲ್ ಕೂಡ ಕಾರಣವಾಗಿದೆ. ಕಲರ್ಸ್ ಕನ್ನಡದಲ್ಲಿ ಬಿಟ್ಟು ಕಲರ್ಸ್ ಸೂಪರ್ ಚಾನಲ್’ನಲ್ಲಿ ಪ್ರಸಾರ ಮಾಡಿದರು. ಕಾರಣ ಕಲರ್ಸ್ ಸೂಪರ್ ಜನಪ್ರಿಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡರು.

ಅದಕ್ಕೆ ಈ ಬಾರಿ ಬಹಳ ಜಾಗರೂಕತೆಯಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಅವರಿಂದಲೂ ಒಂದು ಮಟ್ಟದಲ್ಲಿ ಮನರಂಜನೆ ಸಿಗುತ್ತಿದೆ. ಸುದೀಪ್ ಎಂದಿನಂತೆ ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ. ಇನ್ನ ಅಂಬರೀಶ್’ರವರಿಗೆ ನಾಗಿಣಿ ದಾರಾವಾಹಿಯ ನಟಿ ದೀಪಿಕಾ ದಾಸ್ ಬಹಳ ಇಷ್ಟವಾದ ನಟಿಯಂತೆ. ಅವರೇ ಹೇಳಿದ್ದಂತೆ ನಾನು ನಾಗಿಣಿ ಧಾರಾವಾಹಿಯನ್ನು ಮಿಸ್ ಮಾಡದೇ ಪ್ರತಿ ನಿತ್ಯ ನೋಡುತ್ತೇನೆ. ನಾಗಿಣಿ ನಟಿ ದೀಪಿಕಾ ದಾಸ್ ನನಗೆ ದತ್ತು ಮಗಳಿದ್ದಂತೆ ಎಂದು ಅವರ ಬಳಿ ಹೇಳಿದ್ದರಂತೆ.ಇದನ್ನು ಕೇಳಿ ದೀಪಿಕಾ ದಾಸ್ ತುಂಬಾ ಸಂತಸ ಪಟ್ಟಿದ್ದರು‌, ಒಬ್ಬ ನಟಿಗೆ ಇದಕ್ಕಿಂತ ಹೆಚ್ಚು ಹೊಗಳಿಕೆ ಬೇಡವಾಗಿತ್ತು. ಅವರಿಗೂ ಅಂಬರೀಶ್ ಅಂದರೆ ತುಂಬಾ ಇಷ್ಟವಂತೆ, ಒಟ್ಟಾರೆ ಅವರೂ ಬದುಕಿದಿದ್ದರೆ ಖಂಡಿತಾ ದೀಪಿಕಾ ದಾಸ್’ರವರನ್ನು ಬಿಗ್ಬಾಸ್’ನಲ್ಲಿ ನೋಡುತ್ತಿದ್ದರು. ಮಂಡ್ಯದ ಗಂಡು ಅಂಬರೀಶ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡೋಣ. ಏನಂತೀರಾ !?

LEAVE A REPLY

Please enter your comment!
Please enter your name here