ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದ HONEY DEW ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಕೇರಳ ಮೂಲದ ಜತಿನ್ 35 ವರ್ಷ ತನ್ನ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ, ಜತಿನ್ ತಮಿಳುನಾಡು ಮೂಲದ ಲಕ್ಷ್ಮೀಶಂಕರ ಅವರನ್ನು ಪ್ರೀತಿಸಿ ಮದುವೆಯಾಗಿದ್ದನು, ಈ ಜೋಡಿಗೆ ಎರಡು ಮಕ್ಕಳಿದ್ದರೂ ತೌಶಿನಿ 3 ವರ್ಷ ಮತ್ತು ಶಾಸ್ತಾ 1.5 ವರ್ಷ.
ಬಹಳ ದಿನಗಳಿಂದ ಜಿತಿನ್ ಕೆಲಸಕ್ಕೆ ಹೋಗುತ್ತಿರಲಿಲ್ಲ ವಂತೆ ಇದೇ ಕಾರಣಕ್ಕಾಗಿ ಗಂಡ ಹೆಂಡತಿಯರ ನಡುವೆ ಹಲವು ಬಾರಿ ಜಗಳ ನಡೆದಿದೆ, ಜಿತಿನ್ ಕೆಲಸ ಮಾಡಿದೆ ಮನೆಯಲ್ಲಿ ಇದ್ದು ಇದ್ದು ತನ್ನ ಮಾನಸಿಕ ಒತ್ತಡದಿಂದ ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ, ನಿನ್ನೆ ಕೂಡ ಇದೇ ರೀತಿ ಮನೆಯಲ್ಲಿ ಗಂಡ ಮತ್ತು ಹೆಂಡತಿಯರ ನಡುವೆ ಜಗಳ ಶುರುವಾಗಿದೆ, ಇವರಿಬ್ಬರ ಜಗಳ ಮಿತಿಮೀರಿ ಕೋಪಗೊಂಡ ಜೀತಿನ್ ಮಕ್ಕಳ ಮೇಲೆ ದಾಳಿ ಮಾಡಿದ್ದಾನೆ, ಹಾಗೂ ಅವರ ಕತ್ತುಗಳನ್ನು ಹಿಸುಕಿ ಕೊಂದಿದ್ದಾನೆ.
ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಪೊಲೀಸರ ಬಳಿ ಆರೋಪಿ ಮಕ್ಕಳು ನನ್ನ ರೀತಿ ಬೆಳೆಯುತ್ತಾ ಇರಲಿಲ್ಲ, ಇಂಥ ಮಕ್ಕಳು ನನಗೆ ಬೇಡವೇ ಬೇಡ ಅದಕ್ಕಾಗಿ ಅವರನ್ನು ಕೊಲೆ ಮಾಡಿದೆ ಎಂಬುವ ಹೇಳಿಕೆಯನ್ನು ನೀಡಿದ್ದಾನೆ ಎನ್ನಲಾಗಿದೆ.