ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ನಾವು ಬಹಳಷ್ಟನ್ನು ನಿರೀಕ್ಷೆ ಮಾಡಬಹುದು, ಈ ಮಾತು ಏಕೆ ಹೇಳುತ್ತಿದ್ದೀರಿ ಎನ್ನುತ್ತೀರಾ ಕಾರಣ ಇದೆ, ಬಿಗ್ ಬಾಸ್ ಶುರುವಾಗಿ ಸರಿಯಾಗಿ ಎರಡು ದಿನ ಕಳೆದಿದೆ ಅಷ್ಟರಲ್ಲಿ ಪ್ರೇಮ ಪ್ರಸಂಗಗಳು ನಂಬಿಕೆ ಅಪನಂಬಿಕೆಗಳ ಬಗ್ಗೆ ಮಾತು, ಕೈಹಿಡಿದು ಹೇಳಿದ ಪ್ರಸಂಗಗಳು ನಡೆದಿದೆ ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಎತ್ತಿ ಕಾಣುತ್ತಿರುವುದು ರವಿ ಬೆಳಗೆರೆ ಅವರ ಆರೋಗ್ಯ ಸಮಸ್ಯೆ, ಆದರೆ ಅದನ್ನು ಬಿಟ್ಟು ಇನ್ನು ಹಲವು ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿವೆ, ಕಿರಿಕ್ ಪಾರ್ಟಿ ಸಿನಿಮಾ ನಟರಾದ ಚಂದನ್ ಹಾಗೂ ಅಗ್ನಿಸಾಕ್ಷಿ ಧಾರಾವಾಹಿ ಪ್ರಿಯಾಂಕಾ ಅವರ ನಡುವೆ ಪ್ರೇಮ ಪ್ರಸಂಗ ಶುರುವಾಗಿದೆ ಎಂದು ಹೇಳಲಾಗುತ್ತಿದೆ, ಕಾರಣ ಕಿರಿಕ್ ಪಾರ್ಟಿ ಸಿನಿಮಾ ನೋಡಿ ಚಂದನ್ ಅವರನ್ನು ಮಾತಾಡಿಸಬೇಕು ಎಂದು ಅವರ ಇನ್ಸ್ಟಾಗ್ರಾಮ್ ಗೆ ಪ್ರಿಯಾಂಕಾ ಅವರು ನಾಲ್ಕೈದು ಬಾರಿ ಮೆಸೇಜ್ ಮಾಡಿದ್ದಾರೆ ಆದರೆ ಇವರ ಯಾವುದೇ ಮೆಸೇಜ್ಗೆ ಚಂದನ್ ಅವರು ರಿಪ್ಲೈ ನೀಡಿರಲಿಲ್ಲ ಹಾಗಾಗಿ ಈ ವಿಚಾರ ನನಗೆ ಬಹಳಷ್ಟು ಬೇಸರ ತಂದಿದೆ ಎಂದು ಚಂದನ್ ಅವರ ಮುಂದೆ ಪ್ರಿಯಾಂಕ ಹೇಳಿಕೊಂಡಿದ್ದಾರೆ.
ಮತ್ತೊಂದೆಡೆ ಬಿಗ್ ಬಾಸ್ ಮನೆಗೆ ಬಂದಿರುವ ಡ್ಯಾನ್ಸರ್ ಕಿಶನ್ ಮತ್ತು ಚಂದನ ಚುಕ್ಕಿ ಇವರಿಬ್ಬರು ಮಳೆಯಲ್ಲಿ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಮನೆಯಲ್ಲಿ ಉಳಿದ ಎಲ್ಲರಿಗೂ ಬಿಸಿ ಮುಟ್ಟಿಸಿದ್ದಾರೆ, ಡ್ಯಾನ್ಸರ್ ಕಿಶನ್ ನಡುವಳಿಕೆ ಎಲ್ಲರಲ್ಲೂ ಅನುಮಾನ ಮೂಡುವಂತೆ ಮಾಡಿದೆ, ಇವನು ಏನಾದರೂ ಆಡಂ ಪಾಶಾ ಲಿಸ್ಟ್ ಗೆ ಸೇರುತ್ತಾನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ.
ಇದೆಲ್ಲವನ್ನೂ ಹೊರತುಪಡಿಸಿದರೆ ರಾಜು ತಾಳಿಕೋಟೆ ಅವರ ಮೇಲೆ ಗಂಭೀರವಾದ ಆರೋಪ ಕೇಳಿಬರುತ್ತಿದೆ, ಚೈತ್ರ ವಾಸುದೇವರವರು ರಾಜು ತಾಳಿಕೋಟೆ ನನ್ನ ಕೈಹಿಡಿದು ಎಳೆಯುತ್ತಾರೆ ಹಾಗೂ ಬೆನ್ನುತಟ್ಟಿ ಮಾತಾಡಿಸುತ್ತಾರೆ ಇದು ನನಗೆ ಇಷ್ಟವಾಗುತ್ತಿಲ್ಲ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ, ಮೊದಲ ವಾರವೇ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸ್ಪರ್ಧೆಗಳು ಕುರಿ ಪ್ರತಾಪ್, ರಾಜು ತಾಳಿಕೋಟೆ, ಚೈತ್ರ ಕೊಟ್ಟೂರು, ಗುರುಲಿಂಗಸ್ವಾಮಿ, ಚೈತ್ರ ವಸುದೇವನ್, ರವಿಬೆಳಗೆರೆ ಅವರು ನಾಮಿನೇಟ್ ಆಗಿದ್ದರು ಆದರೆ ಸದ್ಯ ಅವರು ಸ್ಪರ್ಧೆಯಲ್ಲ ಬದಲಿಗೆ ಅವರ ಆರೋಗ್ಯ ಸಮಸ್ಯೆ ಇರುವುದರಿಂದ ಅವರನ್ನು ಸ್ಪರ್ಧೆಯ ಪಟ್ಟಿಯಿಂದ ತೆಗೆದು ಅತಿಥಿಯಾಗಿ ಮನೆಯಲ್ಲಿ ಇರಲು ಒಂದು ವಾರದ ಮಟ್ಟಿಗೆ ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದಾರೆ.