ಮಂಡ್ಯದ ಭಗೀರಥ ಕಾಮೇಗೌಡರು ಆಸ್ಪತ್ರೆಗೆ ದಾಖಲು! ಏನಾಗಿದೆ ನೋಡಿ

0
2811

ಕಳೆದ ಬಾರಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಒಳಗಾದ ನಮ್ಮ ಮಂಡ್ಯದ ಆಧುನಿಕ ಭಗೀರಥ ರಾಮೇಗೌಡರು ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೌದು ತಮ್ಮ ಸ್ವಂತ ಕೆಲಸದಿಂದ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿ ರಾಜ್ಯೋತ್ಸವ ಪುರಸ್ಕೃತ ಪ್ರಶಸ್ತಿ ಪಡೆದಿದ್ದರು.

ಮೊದಲಿನಿಂದಲೂ ಕಾಮೇಗೌಡ ಅವರಿಗೆ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ, ಸದ್ಯ ಅವರ ಕಾಲುಗಳಿಗೆ ತೀವ್ರವಾದ ಗಾಯವಾಗಿದೆ ಆದಕಾರಣ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ, ಇನ್ನು ಅವರ ಎರಡು ಕಾಲುಗಳು ತೀವ್ರವಾಗಿ ಊದು ಕೊಂಡಿದೆ ಎಂಬುವ ವರದಿಗಳು ಆಗಿದ್ದು ಗುರುವಾರ ಸಂಜೆ ಕಾಮೇಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕಾಮೇಗೌಡ ಅವರ ಆರೋಗ್ಯ ವಿಚಾರಿಸಿ ಮತ್ತು ವೈದ್ಯರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿ ಹೋಗಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here