2 ನಿಮಿಷಗಳಲ್ಲಿ ನಿಮ್ಮ ಹಲ್ಲುಗಳು ಎಷ್ಟೇ ಹಳದಿ ಇದ್ದರು ಮುತ್ತುಗಳ ಹಾಗೆ ಹೊಳೆಯುತ್ತವೆ.

0
9297

ತುಳಸಿ ಎಲೆ ಯೊಂದಿಗೆ ಉಪ್ಪು ಬೆರೆಸಿ ಅದಕ್ಕೆ ಒಂದೆರಡು ಲವಂಗ ಹಾಕಿ ಕೊಂಡು ವೀಳ್ಯದೆಲೆ ಒಳಗೆ ಇಟ್ಟು ಬಾಯಲ್ಲಿ ಇಟ್ಟುಕೊಂಡು ನೋವು ಇರುವ ಹಲ್ಲಿನಿಂದ ಜಗಿದು ರಸವನ್ನು ಆಚೆ ಉಗಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

ದಿನದಲ್ಲಿ ಮೂರು ಅಥವಾ ನಾಲ್ಕು ಸಲ ಟೊಮೆಟೊ ಹಣ್ಣಿನ ರಸ ಸೇವಿಸುವುದರಿಂದ ಕೂಡ ವಸಡು ಗಳಿಂದ ರಕ್ತ ಸುರಿಯುವುದು ನಿಲ್ಲುತ್ತದೆ.

ನಿಂಬೆಯ ರಸವನ್ನು ರಕ್ತ ಸೋರುತಿರುವ ವಸಡಿಗೆ ಲೇಪಿಸಿದರೆ ರಕ್ತ ಬರುವುದು ನಿಲ್ಲುತ್ತದೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಪ್ರತಿದಿನ ಆ ಕ್ಷಣದಿಂದ ಹಲ್ಲುಗಳನ್ನು ಚೆನ್ನಾಗಿ ಉಜ್ಜಿದರೆ ಹಲ್ಲುಗಳು ಹಳದಿ ಬಣ್ಣದಿಂದ ಮುಕ್ತಿ ಪಡೆದು ದುರ್ಗಂಧ ನಿವಾರಣೆಯಾಗುತ್ತದೆ.

ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಚೂರ್ಣ ಮಾಡಿಟ್ಟುಕೊಂಡು ದಿನ ½ ಚಮಚ ಸೇವಿಸುವುದರಿಂದ ಹಾಗೂ ಸಿಪ್ಪೆಯನ್ನು ನೀರಿನಲ್ಲಿ ಬೇಯಿಸಿ ಮುಕ್ಕಳಿಸುವುದರಿಂದ ಬಾಯಿಂದ ಬರುವ ದುರ್ಗಂಧ , ಬಾಯಲ್ಲಿ ನೀರು ಬರುವುದು ಮುಂತಾದ ತೊಂದರೆಗಳು ದೂರವಾಗುತ್ತವೆ.

ಮಾವಿನ ಎಲೆಯಿಂದ ದಿನವೂ ಹಲ್ಲು ಉಜ್ಜುವುದರಿಂದ ದಂತಕ್ಷಯ ದೂರವಾಗಿಸಿ ಒಸಡು ಬಲು ಗಟ್ಟಿಯಾಗುತ್ತವೆ.

ಇಡೀ ಸೇಬು ಹಣ್ಣನ್ನು ಕಚ್ಚಿ ಜಗಿದು ತಿಂದರೆ ಹಲ್ಲುಗಳು ಹಾಗೂ ವಸಡು ಗಟ್ಟಿಯಾಗುತ್ತವೆ.

ಝಂಡು ಬಾಮ್ ಹತ್ತಿಗೆ ಹಾಕಿ ಹಲ್ಲಿನ ಮೇಲೆ ಇಟ್ಟರೆ ನೋವು ಗುಣವಾಗುವುದು.

ನೋವಿರುವ ಜಾಗಕ್ಕೆ ಲವಂಗದ ಎಣ್ಣೆಯಲ್ಲಿ ಅದ್ದಿ ಸ್ವಲ್ಪ ಸಮಯದವರೆಗೆ ಇಟ್ಟರೆ ನೋವೆಲ್ಲಾ ಮಾಯ.

ಸ್ವಲ್ಪ ಇಂಗು ಜೊತೆ ನಿಂಬೆರಸ ಸೇರಿಸಿ ಪೇಸ್ಟ್ ಮಾಡಿ ಅದನ್ನು ನೋವು ಇರುವ ಹಲ್ಲಿನ ಮೇಲೆ ಇಟ್ಟರೆ ಹಲ್ಲು ನೋವು ಜೊತೆಗೆ ಹಲ್ಲಿನಲ್ಲಿರುವ ನಂಜು ಕಡಿಮೆಯಾಗುತ್ತದೆ.

ಒಂದು ಹರಳು ಕಲ್ಲು ಉಪ್ಪು ಮತ್ತು ಅಷ್ಟೇ ಪ್ರಮಾಣದ ಕರ್ಪೂರ ಒಟ್ಟಿಗೆ ನೋವಿರುವ ಹಲ್ಲಿನ ಮೇಲಿಟ್ಟು ಅಗಿಯಿರಿ. ಅದರಿಂದ ಇಳಿದ ನೀರನ್ನು ನೋವನ್ನು ಉಪಶಮನ ಮಾಡುತ್ತದೆ.

ನೋವಿರುವ ಜಾಗಕ್ಕೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಸ್ವಲ್ಪ ಸಮಯದವರೆಗೂ ಇಟ್ಟರೆ ನೋವೆಲ್ಲಾ ಮಾಯ.

ಪರಂಗಿ ಕಾಯಿಯ ಬಿಳಿ ಹಾಲನ್ನು ಹಲ್ಲಿನ ಬುಡಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ. ಅಡಿಗೆ ಸೋಡ ಎಳ್ಳಿನ ಎಣ್ಣೆಯನ್ನು ಮಿಶ್ರಣಮಾಡಿ ಹತ್ತಿಯಲ್ಲಿ ನೋವಿರುವ ಹಲ್ಲಿಗೆ ಇಟ್ಟರೆ ನೋವು ಮಾಯವಾಗುತ್ತದೆ. ನೋವು ಹಾಗೆ ಇದ್ದರೆ 4 ದಿನದವರೆಗೂ ಪುನರಾವರ್ತಿಸುವುದು ಅಗತ್ಯ. ಆಗ ನೋವು ಮಾಯವಾಗುತ್ತದೆ.

ಬೆಳ್ಳುಳ್ಳಿಯನ್ನು ಉಪ್ಪಿನ ಜೊತೆ ಜಜ್ಜಿ ಮಿಶ್ರಣಮಾಡಿ ನೋವಿರ ಹಲ್ಲಿನ ಮೇಲಿಟ್ಟರೆ ನೋವು ಕಡಿಮೆಯಾಗುತ್ತದೆ.

ಎಳ್ಳಿನ ಎಣ್ಣೆಯಲ್ಲಿ 5 ನಿಮಿಷ ಬಾಯಿ ಮುಕ್ಕಳಿಸುವುದರಿಂದ ಯಾವುದೇ ರೀತಿ ಹಲ್ಲಿನ ತೊಂದರೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here