ಈ ರೀತಿ ಮಾಡಿದರೆ ಶಾಂಪೂ ಬಳಸದೆ ನಿಮ್ಮ ಕೂದಲು ನಯವಾಗುತ್ತದೆ..!!

0
11994

ತಲೆಗೂದಲು ಸಾಫ್ಟ್ & ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅನ್ನಿಸುತ್ತೆ, ಅದಕ್ಕೆಲ್ಲಾ ಹಣ ಯಾಕೆ ಖರ್ಚು ಮಾಡ್ಬೇಕು, ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಿ.

ಮೊಟ್ಟೆ : ಒಂದು ಪಾತ್ರೆಗೆ ಎರಡು ಮೊಟ್ಟೆ ಒಡೆದು ಹಾಕಿ ಅದಕ್ಕೆ ಅರ್ಧ ಹೋಳು ನಿಂಬೆಹಣ್ಣು ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಇದನ್ನ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ, ಮೊಟ್ಟೆಯ ಹಸಿವಾಸನೆ ಸಹಿಸಲು ಆಗಲ್ಲ ಎಂದಾದ್ರೆ ಸ್ವಲ್ಪ ಕರ್ಪೂರವನ್ನ ಪುಡಿ ಮಾಡಿ ಬೆರೆಸಿಕೊಳ್ಳಿ, ಸಂಪೂರ್ಣವಾಗಿ ಹಸಿವಾಸನೆ ಹೋಗುವುದಿಲ್ಲ, ಆದ್ರೂ ಸ್ವಲ್ಪ ಮಟ್ಟಿಗಾದ್ರೂ ಅದರಿಂದ ಮುಕ್ತಿ ಸಿಗುತ್ತದೆ.

ಆಲೋವೆರಾ : ಆಲೋವೆರಾವನ್ನ ಮುಖಕ್ಕೆ, ಕೈ ಕಾಲಿಗೆ ಹಾಗೇ ತಲೆಗೂದಲಿಗೂ ಬಳಸಬಹುದು, ಆಲೋವೆರಾದ ಸಿಪ್ಪೆ ತೆಗೆದು ಅದರ ತಿರುಳನ್ನ ತೆಗೆದು ರುಬ್ಬಿಕೊಳ್ಳಿ ನಂತರ ತಲೆಗೆ ಪ್ಯಾಕ್ ಹಾಕಿ ಒಂದು ಗಂಟೆಯ ನಂತರ ಸ್ನಾನ ಮಾಡಿ, ಆಲೋವೆರಾ ಬದಲು ಆಲೋವೆರಾ ಜೆಲ್ ಕೂಡ ಬಳಸಬಹುದು, ಆದ್ರೆ ನೈಸರ್ಗಿಕವಾದ್ದದಾದ್ರೆ ಉತ್ತಮ.

ಬಾಳೇಹಣ್ಣು ಬಾದಾಮಿ ಎಣ್ಣೆ : ಚೆನ್ನಾಗಿ ಕಳಿತ ಬಾಳೇಹಣ್ಣನ್ನು ರುಬ್ಬಿಕೊಂಡು ಅದಕ್ಕೆ 2 ಚಮಚ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಿ, ಒಂದು ಗಂಟೆಯ ನಂತರ ಸ್ನಾನ ಮಾಡಿ, ಕೂದಲು ತೊಳೆಯುವಾಗ ಬಾಳೆಹಣ್ಣಿನ ಅಂಶ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ, ಸ್ವಲ್ಪ ಸ್ವಲ್ಪ ಕೂದಲಿನಲ್ಲೇ ಇದ್ದರೆ ಚಿಂತೆ ಬೇಡ, ಕೂದಲು ಒಣಗಿದ ನಂತರ ಅದೆಲ್ಲಾ ಉದುರಿ ಹೋಗುತ್ತದೆ.

ಮೆಹೆಂದಿ : ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುವಾಗ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿಕೊಳ್ಳಿ, ತಣ್ಣಗಾದ ನಂತರ ಮೆಹೆಂದಿ ಪುಡಿ, ಸ್ವಲ್ಪ ಮೊಸರು ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ(ಇಡೀ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಬಹುದು), ನಂತರ ಕೂದಲಿಗೆ ಸಂಪೂರ್ಣವಾಗಿ ಮೆಹೆಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ, ಕೂದಲಿಗೆ ಬಣ್ಣ ಬೇಕಾದರೆ 1 ಗಂಟೆ ಬಿಡಬಹುದು, ಕೂದಲು ಸಾಫ್ಟ್ ಆದ್ರೆ ಸಾಕು ಅಂತಿದ್ರೆ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.

ಗುಲಾಬಿ ದಳ ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳ ಹಾಕಿ, ನೊರೆ ಬರುತ್ತದೆ ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ, 3 ಗಂಟೆಗಳ ನಂತರ ಸ್ನಾನ ಮಾಡಬಹುದು.

LEAVE A REPLY

Please enter your comment!
Please enter your name here