ನಿತ್ಯಾರಾಮ್ ಮದುವೆಯಾದ ಗೌತಮ್ ಯಾರು ? ಸತ್ಯ ಬಯಲು

0
2795

ಇಂದು‌ ಡಿಸೆಂಬರ್ 6 ರಂದು ಬಹುಭಾಷಾ ದಾರಾವಾಹಿ ನಟಿ ನಿತ್ಯಾರಾಮ್ ರವರ ಮದುವೆ ಗೌತಮ್ ಎಂಬುವವರ ಜೊತೆ ಅದ್ದೂರಿಯಾಗಿ ನಡೆದಿದೆ. ಬೆಂಗಳೂರಿನ ತಾಜ್ ಅಂಡ್ ವೆಸ್ಟ್ ಹೋಟೆಲಿನಲ್ಲಿ ಗೌತಮ್ ನಿತ್ಯಾರಾಮ್ ರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತು. ನಿತ್ಯಾರಾಮ್ ಬಂಗಾರದ ಬಣ್ಣದ ಸೀರೆ ಉಟ್ಟು ಹೊಳೆಯುತ್ತಿದ್ದರು. ಗೌತಮ್ ಬಿಳಿಯ ರೇಷ್ಮೆ ಪಂಚೆ ಶಲ್ಯ ಉಟ್ಟಿದ್ದರು. ಚಿತ್ರರಂಗದ ಅನೇಕ ನಟ ನಟಿಯರು ಹಾಜರಿದ್ದು ಮದುವೆಗೆ ಸಾಕ್ಷಿಯಾದರು.

ನಿತ್ಯಾರಾಮ್ ತಂಗಿಯಾದ ರಚಿತಾರಾಮ್ ಕನ್ನಡದ ಜನಪ್ರಿಯ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಬೆಳಕಿಗೆ ಬಂದ ನಟಿ ನಂತರ ಶಿವಣ್ಣ , ಪುನೀತ್ ರಾಜ್‍ಕುಮಾರ್, ಸುದೀಪ್, ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿದ್ದಾರೆ.ಇತ್ತೀಚಿಗೆ ಅವರು ಕೋಟಿ ರೂಪಾಯಿಯ ಬೆಲೆ ಬಾಳುವ ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಅವರ ಇತ್ತೀಚಿನ ಚಿತ್ರ ಪಿ.ವಾಸು ನಿರ್ದೇಶನದ ಆಯುಷ್ಮಾನ್ ಭವ ಬಿಡುಗಡೆ ಆಗಿತ್ತು.

ನಿತ್ಯಾರಾಮ್ ತಮಿಳು , ತೆಲುಗು ಹಾಗೂ ಕನ್ನಡದಲ್ಲಿ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮುದ್ದು ಬಿಡ್ಡ , ನಂದಿನಿ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ನಂದಿನಿ ಧಾರಾವಾಹಿಯಿಂದ ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡಿದ್ದಾರೆ. ನಂದಿನಿ ಧಾರಾವಾಹಿ ಅವರಿಗೆ ಹೆಸರು ತಂದುಕೊಟ್ಟಿತು. ಎರಡು ಕನಸು ಮತ್ತು ಒಂದೆರಡು ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದಾರೆ.

ನಿತ್ಯಾರಾಮ್ ವರಿಸಿರುವ ಗೌತಮ್ ಅವರು ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿ ಬಿಜಿನೆಸ್ ಮ್ಯಾನ್ ಆಗಿದ್ದಾರೆ. ಇನ್ನೂ ವಿಶೇಷ ಏನೆಂದರೆ ಗೌತಮ್ ಮತ್ತು ನಿತ್ಯಾರಾಮ್ ದು ಲವ್ ಮ್ಯಾರೇಜ್ ಅಲ್ಲ. ಇಬ್ಬರದೂ ಅರೆಂಜ್ ಮ್ಯಾರೇಜ್. ವಿಚಿತ್ರ ಅಂದರೆ ನಿತ್ಯಾ ಒಬ್ಬ ನಟಿ ಅಂತ ಗೌತಮ್ ಗೆ ಗೊತ್ತೇ ಇರಲಿಲ್ಲವಂತೆ. ನಿತ್ಯಾರಾಮ್ ತ ತಾಯಿ ಮತ್ತು ಗೌತಮ್ ತಾಯಿ ಇಬ್ಬರು ಕ್ಲೋಸ್ ಫ್ರೆಂಡ್ಸ್. ಅವರಿಬ್ಬರ ಸ್ನೇಹದಿಂದ ಇವರ ಮದುವೆ ಸೆಟ್ಟೇರಿದೆ.

ಆರು ದಿನಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿತ್ತು. ಇಂದು ಮದುವೆ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನಡೆದಿದೆ. ಇಬ್ಬರಿಗೂ ಆಲ್ ದಿ ಬೆಸ್ಟ್ ಹೇಳೋಣ

LEAVE A REPLY

Please enter your comment!
Please enter your name here