ಅನೇಕ ಸ್ತ್ರೀ ರೋಗ ಮತ್ತು ನರದೌರ್ಬಲ್ಯಕ್ಕೆ ಹುತ್ತತ್ತಿ ಗಿಡ!

0
3704

ಹುತ್ತತ್ತಿಯು ಪೊದೆಯ ರೂಪದಲ್ಲಿ ಬೆಲೆಯುತ್ತದೆ, ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ, ಎಲೆಯು ೨-೫ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ.

ಹುತ್ತತ್ತಿ ಎಲೆ : ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ.

ಉಪಯೋಗಗಳು : ಹೆತ್ತುತ್ತಿಯ ಎಲ್ಲಾ ಭಾಗವನ್ನು ಔಷಧವಾಗಿ ಉಪಯೋಗಿಸಬಹುದಾಗಿದೆ. ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ, ಶೀತ, ಕೆಮ್ಮು ಮುಂತಾದವುಗಲನ್ನು ನಿವಾರಿಸಲು ಹುತ್ತತ್ತಿಯು ಸಹಾಯಕವಾಗಿದೆ. ಇದರ ಚೂರ್ಣವು ಅನೇಕ ಸ್ತ್ರೀರೋಗಗಳನ್ನು, ನರದೌರ್ಬಲ್ಯವನ್ನು ನಿವಾರಿಸುತ್ತದೆ. ಬೇರಿನ ರಸವನ್ನು ಗಾಯಕ್ಕೆ ಉಪಯೊಗಿಸಬಹುದಾಗಿದೆ, ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯುವನ್ನು ಗುಣಮುಖಗೊಳೀಸುತ್ತದೆ.

ಜೊತೆಯಲ್ಲಿ ಇದನ್ನು ಓದಿ ಬಾಯಿಯ ದುರ್ವಾಸನೆ ತಡೆಯಲು ಮನೆ ಮದ್ದು.

ಬಾಯಿಯ ದುರ್ವಾಸನೆಯನ್ನು ತಡೆಯಲು ಜಾಕಾಯಿ, ಏಲಕ್ಕಿ ಕಾಡುಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಈ ಕಾಯಿಲೆಯಿಂದ ಕ್ರಮೇಣ ದೂರವಾಗಬಹುದು.

ದಂತ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು, ಹಲ್ಲು ಹುಳುಕು ಅತಿಯಾದ ಹಲ್ಲು ನೋವು ಈ ರೀತಿಯ ಸಮಸ್ಯೆಗಳಿಗೆ ಯಾವ ಕಾರಣಕ್ಕೂ ನಿಧಾನ ಮಾಡಲೇ ಮೊದಲು ವೈದ್ಯರ ಸಂಪರ್ಕ ಮಾಡುವುದು ಒಳ್ಳೆಯದು.

ಪುದೀನಾ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುವುದು.

ಕೊತ್ತಂಬರಿ ಸೊಪ್ಪನ್ನು ಶುಭ್ರಗೊಳಿಸಿ ಅಗಿಯುವುದರಿಂದ ಬಾಯಿಯಲ್ಲಿ ಬರುವ ದುರ್ವಾಸನೆ ನಿವಾರಣೆಯಾಗುವುದು.

ಹಸಿ ಶುಂಠಿ, ಉಪ್ಪು, ಲವಂಗವನ್ನು ಚೆನ್ನಾಗಿರು ರುಬ್ಬಿ ಪೇಸ್ಟ್ ಮಾಡಿಕೊಂಡು, ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುವುದು ಜೊತೆಯಲ್ಲಿ ನಾಲಿಗೆಯ ರುಚಿ ಹೆಚ್ಚುವುದು.

ಶ್ರೀಗಂಧವನ್ನು ಚೆನ್ನಾಗಿ ಗಂಧ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಗೊಟಾಯಿಸ ಬೇಕು, ಹೀಗೆ ಗೊಟಾಯಿಸಿದ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ರಾತ್ರಿ ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಸೊಂಪಿನ ಕಾಲನ್ನ ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಕೂಡ ಬಾಯಿಯ ದುರ್ಗಂಧ ನಿಲ್ಲುತ್ತದೆ.

ಗಮನಿಸಿ : ಬಾಯಿಯ ದುರ್ಗಂಧ ನಿವಾರಿಸಲು ಸೋಂಪು, ಏಲಕ್ಕಿ, ಜಾಕಾಯಿ ಮುಂತಾದ ಪದಾರ್ಥಗಳಲ್ಲಿ ಔಷದಿಯ ಗುಣಗಳು ಇರುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here