ಸಾಮಾನ್ಯವಾಗಿ ಬರುವ ತಲೆ ನೋವಿನಿಂದ ಸಹಿಸಲಾಗದ ಹಿಂಸೆಯಾಗುತ್ತದೆ, ಆದರೆ ಕೆಲವೊಮ್ಮೆ ಬರುವ ಈ ಅರ್ಧ ತಲೆ ನೋವು ಜೀವವನ್ನೇ ಹಿಂಡುತ್ತದೆ, ಅರ್ಧತಲೆ ನೋವು ಬಂದರೆ ಕಣ್ಣುಗಳ ಸ್ನಾಯುಗಳು ಎಳೆದಂತಾಗಿ ಬಹಳಷ್ಟು ತೊಂದರೆಯಾಗುತ್ತದೆ, ಇಂತಹ ಅರ್ಧ ತಲೆ ನೋವಿಗೆ ಸುಲಭವಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳ ಬಹುದಾದ ಕೆಲವು ಟಿಪ್ಸ್ ಇಲ್ಲಿವೆ ನೋಡಿ.
ಬಿಸಿ ನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದು, ಇದರ ಪರಿಣಾಮವಾಗಿ ಬೆವರಲು ಪ್ರಾರಂಭವಾಗುತ್ತದೆ. ಈ ಕ್ರಿಯೆಯಿಂದ ದೇಹದ ಕಲ್ಮಷಗಳು ಹೊರ ಹೋಗುತ್ತವೆ. ತಲೆ ನೋವು ನಿವಾರಣೆಯಾಗುತ್ತದೆ.
ಅರೆತಲೆನೋವಿನಿಂದ ಬಳಲುತ್ತಿರುವವರು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಪ್ಪದೆ ನೀರು ಕುಡಿಯುವುದರಿಂದ ರೂಢಿ ಮಾಡಿಕೊಂಡರೆ ಪರಿಹಾರ ಸಿಗುತ್ತದೆ. ಮತ್ತು ನರಗಳಿಗೆ ಸಂಬಂಧಿಸಿದ ಅನೇಕ ನೋವುಗಳನ್ನು ನಿವಾರಿಸುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್ ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತದೆ.
ಪ್ರತಿ ದಿನ ಬಿಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದಿಲ್ಲ. ಅಲ್ಲದೆ ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ, ಇದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.