ಸಿಗಂದೂರಿನಲ್ಲಿ ಇದೊಂದು ಸೇವೆ ಮಾಡಿದರೆ ನಿಮ್ಮ ಮನೆ ಹಾಗೂ ವ್ಯವಹಾರದಲ್ಲಿ ಲಾಭ ಖಂಡಿತ‌!

0
7154

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಸುಂದರ ದೇವಾಲಯ ಸಿಗಂದೂರು ಚೌಡೇಶ್ವರಿ ದೇವಿಯ ದೇವಸ್ಥಾನ. ಈ ದೇವಸ್ಥಾನ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ದೇವಸ್ಥಾನ ಪ್ರಶಾಂತವಾದ ಸ್ಥಳ. ಬೆಂಗಳೂರಿನವರಿಗಾಗಲಿ ಅಥವಾ ಯಾವುದೇ ಪಟ್ಟಣದಲ್ಲಿ ವಾಸಿಸುವ ಜನರು ಒಮ್ಮೆ ಈ ದೇವಸ್ಥಾನಕ್ಕೆ‌ ಬಂದರೆ ಶಾಂತಿಯಿಂದ ಒಂದೆರೆಡು‌ ದಿನ ಕಳೆಯಬಹುದು. ಯಾಕೆಂದರೆ ಇದೊಂದು ಪ್ರಶಾಂತವಾಗಿ ಶಾಂತಿಯಿಂದ ಇರುವ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಸಾಗರ ಪೇಟೆಯಿಂದ 45 ಕಿಲೊ ಮೀಟರ್ ದೂರದಲ್ಲಿದೆ.

ನಿಮಗೆ ಸಿಗಂದೂರಿನ ಚೌಡೇಶ್ವರಿ ದೇವಿಗೆ ಸುಮಾರು 300 ವರ್ಷಗಳ ಇತಿಹಾಸವಿದೆ ಎಂಬ ವಿಷಯ ನೆನಪಿರಲಿ. ರಕ್ಷಣೆ ಕೋರಿ ಬರುವ ಭಕ್ತಾದಿ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ತಾಯಿ ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಪ್ರಮುಖವಾಗಿ ಕೇರಳದಿಂದ ಇಲ್ಲಿಗೆ ಭಕ್ತರ ಮಹಾಪೂರ ಹರಿದು ಬರುತ್ತದೆ. ತಾಯಿ ಚೌಡೇಶ್ವರಿಯಿಂದ ಸಿಗಂದೂರು ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದ ಜನರ ಗಮನ ಸೆಳೆದಿದೆ.

ಇನ್ನೂ ನೀವು ತುಂಬಾ ಕಡೆ‌ ‘ಶ್ರೀ ಚೌಡೇಶ್ವರಿ ಈ ಮನೆಯ ಐಶ್ವರ್ಯ’, ‘ಶ್ರೀ ಚೌಡೇಶ್ವರಿ ಈ ಅಂಗಡಿಯ ಐಶ್ವರ್ಯ’, ‘ಶ್ರೀ ಚೌಡೇಶ್ವರಿ ಈ ವಾಹನದ ಐಶ್ವರ್ಯ’, ಎಂಬ ಸ್ಟಿಕರ್ ಅಥವಾ ಬ್ಯಾನರ್ ನೋಡಿರಬಹುದು. ಅದು ಸುಮ್ಮನೆ ಹಾಕುವ ಸ್ಟಿಕರ್ ಅಲ್ಲ. ಕೆಲವರು ಕಳ್ಳರಿಂದ ಹಾಗೂ ಮೋಸಗಾರರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಸಂಸ್ಕ್ರತಿ ಇದೆ. ಜಮೀನು, ತೋಟ, ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯ ಕಾವಲಿದೆ ಎಂಬ ಬೋರ್ಡ್ ಹಾಕಿದರೆ ಅಲ್ಲಿ ಕಳ್ಳತನವಾಗುವುದಿಲ್ಲ ಹಾಗೂ ದರಿದ್ರ ದೂರವಾಗುತ್ತೆ ಎಂಬ ಪ್ರತೀತಿ ಇದೆ.

ಆದುದರಿಂದ ನೀವು ಯಾವುದೇ ಹೊಸ ಬ್ಯುಸಿನೆಸ್ ಮಾಡುವ ಪ್ಲಾನ್ ಇದ್ದರೆ ಅಥವಾ ಯಾವುದೇ ಹೊಸ ಕಟ್ಟಡ ಮನೆ ಕಟ್ಟುವ ಯೋಚನೆ ಇದ್ದರೆ, ಈ ಕೂಡಲೇ ಸಿಗಂಧೂರ ಶ್ರೀ ಚೌಡೇಶ್ವರಿಯ ದೇವಸ್ಥಾನವನ್ನು ಭೇಟಿ ಮಾಡಿ. ಶಿವಮೊಗ್ಗ ಜಿಲ್ಲೆಯ ಸಾಗರದ ಮೂಲಕ ದೇವಸ್ಥಾನವನ್ನು ‌ಭೇಟಿ‌ಮಾಡಬಹುದು ಹಾಗೂ ಸಮಯ ಇದ್ದರೆ ಕೊಲ್ಲೂರಿಗೆ ಭೇಟಿ ಮಾಡಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಚ್ ಹಾಗೂ ಇನ್ನಿತರ ಕ್ಷೇತ್ರ ಸುತ್ತಬಹದು ಹಾಗೂ‌ ಮನಸ್ಸನ್ನು ನೆಮ್ಮದಿ ‌ಇಂದ ಇರಿಸಬಹುದು. ಸಿಗಂದೂರು ತಾಯಿಯ ಬಗೆಗಿನ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here