ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ರಾಹುಲ್ ಗಾಂಧಿ ಮೋದಿಯವರ ಮೂರು ಸೋಲುಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ! ಯಾವುದು ಆ 3 ಸೋಲು ನೋಡಿ

0
3574

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿಯವರು ಒಂದಲ್ಲ ಒಂದು ಅಪೇಕ್ಷಿತ ಟ್ವೀಟ್ ಗಳನ್ನು ಮಾಡುತ್ತಲೇ ಇರುತ್ತಾರೆ, ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಮ್ಮೆ ಟೀಕೆ ಮಾಡಿದ್ದಾರೆ, ಈ ಬಾರಿ ತಮ್ಮ ಟ್ವೀಟ್ ನಲ್ಲಿ ಈಗಾಗಲೇ ಎರಡು ಬಾರಿ ದೊಡ್ಡ ಸೋಲನ್ನು ಕಂಡಿರುವ ಕೇಂದ್ರ ಸರ್ಕಾರ ಈಗ ಮೂರನೇ ಅತಿದೊಡ್ಡ ಸೋಲನ್ನು ಅನುಭವಿಸಿದೆ ಎಂದು ಬರೆದಿದ್ದಾರೆ.

ಯಾವುದದು 3 ಸೋಲು : ಮೊದಲನೆಯದು ನೋಟು ಅಮಾನ್ಯೀಕರಣ, ಎರಡನೆಯದು ಜಿಎಸ್ಟಿ ನಿರ್ವಹಣೆ ಈ ಎರಡರಲ್ಲೂ ಸರ್ಕಾರ ವೈಫಲ್ಯ ಕಂಡಿದೆ ಈಗ ಮೂರನೇದಾಗಿ ಕರೋನವೈರಸ್ ನಿಯಂತ್ರಣದಲ್ಲೂ ಸರ್ಕಾರ ಸೋತಿದೆ ಹಾಗೂ ಈ ಬಗ್ಗೆ ಅವಾರ್ಡ್ ಬಿಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೇ ಎಂದು ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ.

ಜೊತೆಯಲ್ಲಿ ಮೋದಿಯವರ ಭಾಷಣದ ಒಂದು ತುಣುಕನ್ನು ಸಹ ಸೇರಿಸಿದ್ದಾರೆ, ಹಾಗೂ ಹೆಚ್ಚಾಗುತ್ತಿರುವ ಕರುನಾ ವೈರಸ್ ಅಂಕಿಅಂಶದ ಪಟ್ಟಿಯನ್ನು ಸಹ ತೋರಿಸಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಲುಪಿರುವ ವಿಡಿಯೋಸ ಹಂಚಿಕೊಂಡಿದ್ದಾರೆ.

ಈ ರೀತಿ ದೇಶದಲ್ಲಿ ಕರೋನಾ ಬಿಕಟ್ಟು ಎದುರಾದ ದಿನದಿಂದಲೂ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ಗಾಂಧಿ ಇಬ್ಬರು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ದಾಳಿ ಮಾಡುತ್ತಿರುವುದು ಸಾಮಾನ್ಯ, ಬೇರೆ ದೇಶಗಳಲ್ಲಿ ಸೋಂಕು ಮಂತ್ರದ ಬಗ್ಗೆ ಗಮನವಹಿಸಿ ಕೆಲಸಮಾಡುತ್ತಿದ್ದರೆ ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಸೋಂಕನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ.

LEAVE A REPLY

Please enter your comment!
Please enter your name here