ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್ ಬಗ್ಗೆ ಕೆಲವು ತಿಳಿಯಲೇ ಬೇಕಾದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಹೂಡಿಕೆ : ಹೌದು ನಿಮ್ಮ ಇಪಿಎಫ್ ನಲ್ಲಿ ನೀವು ಸಹ ಹೂಡಿಕೆ ಮಾಡಬಹುದು, ನೀವು ಉದ್ಯೋಗ ಮಾಡುತ್ತಿರುವ ಕಂಪನಿಯಿಂದ ನಿಮ್ಮ ಪಿಎಫ್ ಖಾತೆಗೆ ಶೇಕಡ 12ರಷ್ಟು ಹಣ ಹೂಡಿಕೆ ಆಗುತ್ತದೆ, ಇದಲ್ಲದೆ ನೀವು ನಿಮ್ಮ ತಿಂಗಳ ಉಳಿತಾಯ ಗಳನ್ನು ಸಹ ನಿಮ್ಮ ಇಚ್ಛೆಯಂತೆ ಪಿಎಫ್ ಖಾತೆಗೆ ಪ್ರತಿ ತಿಂಗಳು ಹೂಡಿಕೆ ಮಾಡಬಹುದು, ಅಷ್ಟೇ ಅಲ್ಲದೆ ನೀವು ಮಾಡುವ ಹೂಡಿಕೆಗೆ ಸಮಯಕ್ಕೆ ತಕ್ಕ ಹಾಗೆ ಬಡ್ಡಿಯೂ ಸಿಗುತ್ತದೆ.
ಜೀವ ವಿಮೆ : ಎಪಿಎಫ್ ನಿಮಗೆ ಜೀವವಿಮೆಯ ಅವಕಾಶಗಳು ಸಹ ಇದ್ದು ಆದರೆ, ದೊಡ್ಡ ಪ್ರಮಾಣದಲ್ಲಿ ಲೈಟ್ ಕವರ್ ಇನ್ಶೂರೆನ್ಸ್ ಇರುವುದಿಲ್ಲ ಬದಲಿಗೆ ಸಣ್ಣ ಪ್ರಮಾಣದ ಲೈಫ್ ಕವರ್ ಸಿಗುತ್ತದೆ, ಈ ಯೋಜನೆಯನ್ನು ಎಂಪ್ಲಾಯಿಸ್ ಡಿಪಾಸಿಟ್ ಲಿಂಕೆಡ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತದೆ, ಮುಖ್ಯವಾಗಿ ಯೋಜನೆ ಈಗಾಗಲೇ ತನ್ನ ಉದ್ಯೋಗಿಗಳಿಗೆ ಜೀವ ವಿಮೆ ಸೌಲಭ್ಯ ನೀಡುವ ಕಂಪನಿಗಳಿಗೆ ಎಂಪ್ಲೋಯೆ ದೇಪೋಸಿಟ್ ಲಿಂಕೆಡ್ ಇನ್ಶೂರೆನ್ಸ್ ಯೋಜನೆಯಿಂದ ವಿನಾಯತಿ ನೀಡಲಾಗುತ್ತಿದೆ.
ಹಣ ಹಿಂಪಡೆಯಬಹುದು : ಯಾವುದೇ ಅವಶ್ಯಕತೆಗಳು ಇದ್ದಾಗ ಪಿಎಫ್ ಮುಖಾಂತರ ನೀವು ಹಣವನ್ನು ಹಿಂಪಡೆಯಬಹುದು, ಉದಾಹರಣೆಗೆ ಮಕ್ಕಳ ಶಿಕ್ಷಣ, ಸ್ವಯಂ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಹೆಂಡತಿ ಮಕ್ಕಳಿಗಾಗಿ ಅವಲಂಬಿತ ಪೋಷಕರ ಚಿಕಿತ್ಸೆ ಗೃಹ ಸಾಲ ಹೀಗೆ ಹಲವು ಕಾರಣಗಳಿಗೆ ನೀವು ನಿಮ್ಮ ಪಿಎಫ್ ನಲ್ಲಿ ಮಾಡಿರುವ ಹೂಡಿಕೆಯನ್ನು ಹಿಂಪಡೆಯಬಹುದು.
ಎಪಿಎಫ್ ಬೇಡವೆಂದರೆ ಏನು ಮಾಡಬೇಕು : ಈ ಪಿ ಎಫ್ ಯೋಜನೆ ನಿಮಗೆ ಬೇಡವಾದಾಗ ನೀವು ಕೆಲಸಕ್ಕೆ ಸೇರುವಾಗ ಇದನ್ನು ಆಯ್ಕೆ ಮಾಡಬೇಕು, ಒಂದು ಸಲಿ ನೀವು ಎಪಿಎಫ್ ಆಯ್ಕೆ ಮಾಡಿಕೊಂಡರೆ ಮತ್ತೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.