ಬೆಳಗ್ಗೆ ಪತ್ನಿ ನಂತರ ಸಂಜೆ ಪತಿಯ ಸಾವು, ಏನಿದು ವಿಧಿಯಾಟ!

0
14105

ಜೀವನ ದೊಡ್ಡದು, ಅದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ತಾನೇ ಎಲ್ಲರೂ ಇಷ್ಟು ಕಷ್ಟಪಟ್ಟು ಕೆಲಸ ಮಾಡುವುದು ಮುಂದಿನ ಜೀವನದ ಬಗ್ಗೆ ಮುಂಜಾಗ್ರತೆ ವಹಿಸುವುದು, ತಮ್ಮ ಜೀವನಕ್ಕೆ ಸರಿಹೊಂದುವ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುವುದು, ಇದೇ ರೀತಿ ವೆಂಕಟೇಶ್ ರಾಮ್ 24 ವರ್ಷ ದ ಹುಡುಗ ಪ್ರೀತಿ ಮಾಡಿ ಶ್ರಾವಣಿ 21 ವರ್ಷ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ.

ಇವರಿಬ್ಬರ ಕುಟುಂಬದಿಂದಲೇ ಇದಕ್ಕೆ ತೀವ್ರ ವಿರೋಧವಿದ್ದ, ಅದಕ್ಕೆ ಅಂಜದೆ ಇಬ್ಬರು ಮದುವೆಯಾಗಿದ್ದರು, ವೆಂಕಟೇಶ್ ಕೃಷಿ ಕೆಲಸ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿದ್ದ, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು, ಶ್ರಾವಣಿ ಕೂಡ ಗರ್ಭಿಣಿಯಾಗಿದ್ದಳು ಇದರಿಂದ ಇವರ ಸಂತೋಷ ದುಪ್ಪಟ್ಟಾಯಿತು, ಈ ವಿಚಾರವನ್ನು ಶ್ರಾವಣಿ ತಮ್ಮ ಮನೆಯವರಿಗೆ ತಿಳಿಸಬೇಕು ಅದಕ್ಕಾಗಿ ಊರಿಗೆ ಹೋಗೋಣ ಎಂದು ವೆಂಕಟೇಶ್ ನನ್ನು ಕೇಳಿಕೊಂಡಿದ್ದಾರೆ, ಆದರೆ ಇದಕ್ಕೆ ವೆಂಕಟೇಶ್ ಒಪ್ಪಿಗೆ ನೀಡಲಿಲ್ಲ.

ಈ ಸಣ್ಣ ವಿಚಾರಕ್ಕೆ ತಾಳ್ಮೆ ಕಳೆದುಕೊಂಡ ಶಾವಣಿ ಮನೆಯಲ್ಲಿಯೇ ಇದ್ದ ಕೀಟನಾಶಕವನ್ನು ಕುಡಿದಿದ್ದಾಳೆ, ಇದನ್ನು ಗಮನಿಸಿದ ವೆಂಕಟೇಶ್ ತಕ್ಷಣ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾನೆ, ಪ್ರಥಮ ಚಿಕಿತ್ಸೆಯ ನಂತರ ಗುಂಟೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾನೆ, ವೈದ್ಯರು ವೆಂಕಟೇಶ್ ಬಳಿ ಶ್ರಾವಣಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ, ಇದನ್ನು ಕೇಳಿ ಸಹಿಸಿಕೊಳ್ಳಲಾಗದೆ ಆಸ್ಪತ್ರೆಯ ಬಳಿ ವೆಂಕಟೇಶ ಕೀಟನಾಶಕ ಕುಡಿದಿದ್ದಾನೆ.

ಬೆಳಗ್ಗೆ ಆಸ್ಪತ್ರೆಯಲ್ಲಿ ಶ್ರಾವಣಿ ತನ್ನ ಕೊನೆಯ ಉಸಿರು ಬಿಟ್ಟರೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಸಾವಿನಲ್ಲೂ ತನ್ನ ಶಾವಣಿ ಜೊತೆಯಾದ, ಈ ಗಟನೆ ನಡೆದಿರುವುದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ.

LEAVE A REPLY

Please enter your comment!
Please enter your name here