ನಾನು ಬದಲಾಗಿದ್ದೇನೆ ಎಂದು ವೆಂಕಟ್ ಅಲ್ಲಲ್ಲ ಅವರೇ ಈಗಲೂ ಹೇಳಿಕೊಳ್ಳುವಂತೆ ಹುಚ್ಚ ವೆಂಕಟ್ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅದಕ್ಕಾಗಿ ಸುದ್ದಿಗೋಷ್ಟಿ ಕರೆದಿದ್ದ ಹುಚ್ ವೆಂಕಟ್ ನನಗೆ ಅರಿವಾಗಿದೆ. ಇದ್ದ ಷ್ಟು ದಿನ ನಾನು ಚೆನ್ನಾಗಿರಬೇಕು. ಇಷ್ಟು ದಿನ ಅಪ್ಪನ ದುಡ್ಡು ಹಾಳು ಮಾಡಿದೆ. ಈಗ ಅಪ್ಪನೂ ದುಡ್ಡು ಕೊಡುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ.
ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಪೂರ್ತಿಗೊಳಿಸಬೇಕಿದೆ. ಅದೂ ಅಲ್ಲದೇ ನನಗೆ ಖರ್ಚಿಗೆ ಹಣ ಇಲ್ಲ. ಇಷ್ಟು ದಿನ ಎಲ್ಲಿ ಹೋದರೂ ಗಲಾಟೆಯಿಂದ ಸುದ್ದಿಯಾಗುತ್ತಿದ್ದೆ. ಜನರು ನನ್ನ ಹತ್ತಿರ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಮೊದಲೆಲ್ಲಾ ನಾನು ಹೋದ ಕಡೆ ಎಲ್ಲ ಅಭಿಮಾನಿಗಳು ನನ್ನ ಮುತ್ತುವರೆದು ಸೆಲ್ಫಿಗೆ ಹಾತೊರೆಯುತ್ತಿದ್ದರು. ಆದರೆ ಈಗ ನಾನು ಎಲ್ಲಿ ಹೊಡೆಯುತ್ತೇನೋ ಎಂದು ಭಯ ಬೀಳುತ್ತಾರೆ. ದಯವಿಟ್ಟು ನಾನು ಯಾರಿಗೂ ಹೊಡೆಯುವುದಿಲ್ಲ. ನನ್ನ ಹತ್ತಿರ ಸೆಲ್ಫಿ ತೆಗೆದುಕೊಳ್ಳಲು ಬನ್ನಿ ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರಾದರು.
ನನಗೆ ಈಗ ಹಣದ ಅವಶ್ಯಕತೆ ಇದೆ. ದಯವಿಟ್ಟು ನನಗೆ ಸಿನಿಮಾದಲ್ಲಿ ಚಾನ್ಸ್ ಕೊಡಿ. ಗಾಯಕನಾಗಿ , ನಟ, ಸಣ್ಣ ಪಾತ್ರ, ಯಾವುದೇ ಆದರೂ ನಾನು ಮಾಡುತ್ತೇನೆ.ನನ್ನ ಕೆಲಸ ಏನಿದೆಯೋ ಅದನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಚಿತ್ರೀಕರಣದ ಸಮಯದಲ್ಲಿ ಗಲಾಟೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಭಿಮಾನಿಗಳೇ ನನ್ನ ಪಾಲಿನ ದೇವರು. ಅವರು ನನ್ನಿಂದ ದೂರಾದರೆ ನನಗೆ ಸಹಿಸಿಕೊಳ್ಳುವುದಕ್ಕಾಗಲ್ಲ ಎಂದು ಕೈ ಮುಗಿದರು.