ಖರಾಬು ಬಾಸು ನಂತರ ಧ್ರುವ ಅವರ ಪೊಗರಿನ ಶೀರ್ಷಿಕೆಯ ಝಲಕ್. ವಿಡಿಯೋ ಸಮೇತ ನೋಡಿ.

0
1575

ಖರಾಬು ಬಾಸು ಖರಾಬು ಸುಮ್ನೆ ಓಡೋಗು ಎಂದು ಯೂಟ್ಯೂಬ್’ನಲ್ಲಿ 12 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡ ಪೊ’ಗರು ಚಿತ್ರದ ಮತ್ತೊಂದು ಶೀರ್ಷಿಕೆ ಗೀತೆ ಇನ್ನೇನು ಹೊರಬರುವ ಸಾಧ್ಯತೆಗಳು ಹೆಚ್ಚಿದೆ. ಖ್ಯಾತ ರ್ಯಾಪರ್ ಎಂದೇ ಪ್ರಖ್ಯಾತರಾಗಿರುವ ಚಂದನ್ ಶೆಟ್ಟಿಯವರು ಮ್ಯೂಸಿಕ್ ಕಂಪೋಸ್ ಮಾಡಿರುವ ಈ ಚಿತ್ರಕ್ಕೆ ನಂದಕಿಶೋರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಿ ಕೆ ಗಂಗಾಧರ ಅವರು ಇದಕ್ಕೆ ಹಣ ಹೂಡಿದ್ದಾರೆ. ಶ್ರೀ ಜಗದ್ಗುರು ಮೂವೀಸ್ ಬ್ಯಾನರ್’ನ ಅಡಿಯಲಿ ಬರುತ್ತಿರುವ ಈ ಚಿತ್ರದ ರೆಕಾರ್ಡಿಂಗ್ ಲೇಬಲ್ ಅನ್ನು ಆನಂದ ಆಡಿಯೋ ವಿಡಿಯೋ ದವರು ತೆಗೆದುಕೊಂಡಿದ್ದಾರೆ.

ಡ್ಯಾನ್ಸ್ ಮಾಸ್ಟರ್ ಮುರಳಿ ಅವರು ಕೊರಿಯಾಗ್ರಫಿ ಮಾಡಿರುವ ಈ ಚಿತ್ರಕ್ಕೆ ಹಾಗೂ ಚಂದನ್ ಶೆಟ್ಟಿ ಅವರ ಈ ಹಾಡಿಗೆ ಈಗಾಗಲೇ ಯೂಟ್ಯೂಬ್ನಲ್ಲಿ 12 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದ ಕನ್ನಡದ ಮೊದಲ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಹಾಗೂ ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ರಾಕೇಶ್ ಹಾಗೂ ಆರುಮಾಲ್ ಎಂಬುವವರು ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.

ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಧನಂಜಯ್, ರಾಘವೇಂದ್ರ ರಾಜಕುಮಾರ್, ಪಿ ರವಿಶಂಕರ್ ಹೀಗೆ ದಿಗ್ಗಜರಿರುವ ಈ ಚಿತ್ರವನ್ನು ತೆರೆಗೆ ತರುವುದಕ್ಕೆ ಎಲ್ಲ ರೀತಿಯಲ್ಲೂ ಚಿತ್ರ ತಂಡವು ಸಜ್ಜಾಗಿದೆ. 24 ಮಾರ್ಚ್ 2020 ಕ್ಕೆ ರಿಲೀಸ್ ಆಗಬೇಕಿದೆ ಚಿತ್ರ ಲಾಕ್ಡೌನ್ ಶುರುವಾಗಿದ್ದರಿಂದ ಇನ್ನೂ ತೆರೆಕಂಡಿಲ್ಲ. ಕರ್ನಾಟಕದಲ್ಲಿ ಚಿತ್ರಮಂದಿರಗಳು ಇನ್ನೂ ತೆರೆಯದೆ ಇರುವುದರಿಂದ ಹಲವಾರು ಫಿಲಂಗಳು ರಿಲೀಸ್ ನಲ್ಲಿ ಹಿನ್ನಡೆ ಕಾಣುತ್ತಿವೆ.

ಈಗಾಗಲೇ ಖರಾಬು ಬಾಸು ಖರಾಬು ಎಂಬ ಹಾಡು ರಿಲೀಸ್ ಆಗಿ ರಾಜ್ಯಾದ್ಯಂತ ಮನೆಮಾತಾಗಿದೆ. ಈ ಹಾಡು ಗಣಪತಿ ಹಬ್ಬದ ಸಂದರ್ಭದಲ್ಲಿಯು ಬಹಳ ವೈ’ರಲ್ ಆಗಿ ಎಲ್ಲೆಡೆ ಕೇಳಿ ಬಂದಿತ್ತು. ಈಗ ಚಂದನ್ ಶೆಟ್ಟಿ ತಮ್ಮ ಅಫೀಷಿಯಲ್ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಮತ್ತೊಂದು ಸಣ್ಣ ವಿಡಿಯೋವನ್ನು ಹೊರಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ಹಾಗೂ ಚಂದನ್ ಶೆಟ್ಟಿ ಅವರು ಪೊ’ಗರು ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡುತ್ತಿರುವ ಒಂದು ತುಣುಕನ್ನು ಹೊರಬಿಟ್ಟಿದ್ದಾರೆ.

ಖಾಲಿ ಹವಾಯಿ ಮೆ’ಟ್ಟಿಕೊಂಡು ಹುಡುಗರ ಕ’ಟ್ಟಿಕೊಂಡು ಎಂದು ಶುರುವಾಗುವ ಈ ಹಾಡಿಗೆ ಈಗಾಗಲೇ 59500 ಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿವೆ. ಚಂದನ್ ಶೆಟ್ಟಿ ಹಾಗೂ ಅನಿರುದ್ಧ, ಶಶಾಂಕ್ ಮೂವರು ಸೇರಿ ಹಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಈಗಾಗಲೇ ವೈ’ರಲ್ ಆಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here