ವ್ಯಾಸಲಿನ್ ಅತಿ ಹೆಚ್ಚಾಗಿ ಬಳಕೆ ಮಾಡುವುದು ಶುಷ್ಕ ಚರ್ಮಗಳಿಗೆ ಅಥವಾ ಒಡೆದ ತುಟಿಗಳಿಗೆ, ಆದರೆ ಇದರಿಂದ ಇನ್ನೂ ಹಲವು ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು, ಕೂದಲಿಗೆ ನಾವು ವ್ಯಾಸಲಿನ್ ಬಳಕೆ ಮಾಡಿದ್ದಲ್ಲಿ ಉದುರುತ್ತಿರುವ ಕೂದಲು ಸಮಸ್ಯೆ ನಿವಾರಣೆಯಾಗಿ ಜೊತೆಯಲ್ಲಿ ಕೂದಲು ಹೆಚ್ಚಾಗಿ ಬೆಳೆಯಲು ಶುರುವಾಗುತ್ತದೆ, ಹಾಗಾದರೆ ವ್ಯಾಸಲಿನ್ ಕೂದಲಿಗೆ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ ಮುಂದೆ ಓದಿ.
ಇದಕ್ಕೆ ಬೇಕಾಗುವ ಪದಾರ್ಥಗಳು: ಬಾದಾಮಿ ಎಣ್ಣೆ (ಆಲ್ಮಂಡ್ ಆಯಿಲ್) ವಿಟಮಿನ್ ಇ ಕ್ಯಾಪ್ಸೂಲ್ಸ್ 400 ಎಂಜಿ 2 ಕ್ಯಾಪ್ಸೂಲ್ಸ್ ,ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ (ಯಾವುದಾದರೂ ಜೆಲ್ಲಿ ತೆಗೆದುಕೊಳ್ಳಬಹುದು)
ಮೊದಲು ಒಂದು ಬಟ್ಟಲಿನಲ್ಲಿ 2 ಟೀ ಸ್ಫೂನ್ ಬಾದಾಮಿ ಎಣ್ಣೆ, ವಿಟಮಿನ್ ಇ ಎಣ್ಣೆ 2 ಕ್ಯಾಪ್ಸೂಲ್ಸ್, ಹಾಗು ವ್ಯಾಸಲಿನ್ ಅನ್ನು ಒಂದು ಸ್ಫೂನ್ ಹಾಕಿ ಚನ್ನಾಗಿ ಕಲಸಿ.
ನಿಮ್ಮ ಕೂದಲಿನ ಉದ್ದದ ಅನುಸಾರ ನಿಮಗೆ ಬೇಕಾದಷ್ಟು ಬಳಸ ಬಹುದು, ಹೀಗೆ ಮೂರೂ ಪದಾರ್ಥಗಳನ್ನು ಚನ್ನಾಗಿ ಕಲಸಿದ ಬಳಿಕ ಕೂದಲಿನ ಬುಡಕ್ಕೆ ಹಚ್ಚಿ ಚನ್ನಾಗಿ ಮಸಾಜ್ ಮಾಡ ಬೇಕು.
ಒಂದೆರಡು ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನ ತೊಳೆಯಬೇಕು, ವಾರದಲ್ಲಿ ಎರಡು ಮೂರು ದಿನ ಈ ರೀತಿ ಮಾಡಿದರೆ ಖಚಿತವಾಗಿ ಅದ್ಭುತವಾದ ರಿಸಲ್ಟ್ ಲಭಿಸುತ್ತದೆ. ಲಾಂಗ್, ಸ್ಟ್ರಾಂಗ್, ಹೆಲ್ತಿ, ಲೆಂಥಿ ಕೂದಲಿಗಾಗಿ ಇದು ಒಳ್ಳೆಯ ಮನೆಮದ್ದು ಎನ್ನುತ್ತಿದ್ದಾರೆ ಇದನ್ನ ಬಳಸಿದವರು