ಮದುವೆಯಾದ ಧ್ರುವ ಸರ್ಜಾ ಪ್ರೇರಣ ತಂದೆ ಬಳಿ ಪಡೆದ ವರದಕ್ಷಿಣೆ ಕೇಳಿದ್ರೆ ಶಾಕ್ ಆಗ್ತೀರ !

0
3187

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ತಮ್ಮ ಬಾಲ್ಯದ ಗೆಳತಿ ಪ್ರೇರಣಾರ ಮದುವೆ ಜೆಪಿ ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್’ನಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ.ಅದ್ದೂರಿ ಹುಡುಗನ ಮದುವೆ ಸಮಾರಂಭಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.ಧ್ರುವ ಸರ್ಜಾರೇ ಹೇಳುವಂತೆ ಮುಖ್ಯ ವಿಐಪಿಗಳು ಅಂದರೆ ಅವರ ಅಭಿಮಾನಿಗಳು ಕೂಡ ಮದುವೆಗೆ ಬಂದು ಹಾರೈಸಿದ್ದಾರೆ.ಇನ್ನ ಮುಖ್ಯ ವಿಷಯಕ್ಕೆ ಬರುವುದಾದರೆ ಧ್ರುವ ಸರ್ಜಾರ ಮಾವ ಪ್ರೇರಣಾರ ತಂದೆ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದು ತಮ್ಮ ಮುದ್ದಿ‌ನ ಮಗಳ ಮದುವೆಗೆ ತುಂಬಾ ಖರ್ಚು ಮಾಡಿದ್ದಾರೆ.ಸಾಮಾನ್ಯವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಮದುಮಗನಿಗೆ ಬೆರಳಿಗೆ ಉಂಗುರ, ಸರ ಕೊಡುವುದು ವಾಡಿಕೆ.ಆದರೆ ದೊಡ್ಡ ಬಿಜಿನೆಸ್ ಮ್ಯಾನ್ ಆದ ಪ್ರೇರಣಾರ ತಂದೆ ಧ್ರುವರವರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿಯನ್ನು ನೀಡಲು ಮುಂದೆ ಬಂದಿದ್ದಾರೆ.ಆದರೆ ಅದನ್ನು ನಯವಾಗಿಯೇ ನಿರಾಕರಿಸಿರುವ ಧ್ರುವ ಸರ್ಜಾ “ನಾನು ಪ್ರೀತಿಸುವ ನಿಮ್ಮ ಮಗಳೇ ನನಗೆ ಕೋಟಿಗೆ ಸಮ.ನನಗೆ ಯಾವ ಆಸ್ತಿಯೂ ಬೇಡ ” ಎಂದು ಸಿನಿಮಾ ಸ್ಟೈಲಿನಲ್ಲಿ ಹೇಳಿದ್ದಾರೆ .ಈ ವಿಷಯ ಕೇಳಿ ಅವರ ಅಭಿಮಾನಿಗಳು ಅವರನ್ನು ಇನ್ನಷ್ಟು ಇಷ್ಟ ಪಡುತ್ತಿದ್ದಾರೆ.

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯುವಜನರ ಅಭಿಮಾನವನ್ನು ಬಹು ಬೇಗನೇ ಸಂಪಾದಿಸಿದವರು.ಪ್ರತಿಷ್ಠಿತ ಸರ್ಜಾ ಕುಟುಂಬದಿಂದ ಬಂದವರಾದರೂ ಇವರು ತಮ್ಮ ಪ್ರತಿಭೆಯಿಂದನೇ ಸಿನಿಮಾದಲ್ಲಿ ಯಶಸ್ಸು ಕಂಡವರು.ಫೈಟ್ ,ಡಾನ್ಸ್ ಮತ್ತು ಪಾತ್ರಕ್ಕೆ ತಕ್ಕಂತೆ ದೇಹವನ್ನು ಹುರಿಗೊಳಿಸುವುದಕ್ಕಾಗಿ ಹಗಲು ರಾತ್ರಿ ಕಸರತ್ತು ಮಾಡುತ್ತಾರೆ.ಚಿಕ್ಕ ಹುಡುಗನಿದ್ದಾಗಲೇ ಮಾವ ಅರ್ಜುನ್ ಸರ್ಜಾರ ಚಿತ್ರಗಳನ್ನು ನೋಡಿಕೊಂಡು ಬಂದ ಧ್ರುವ ಸರ್ಜಾ ಅವರಂತೆಯೇ ನಾನೂ ಹೀರೋ ಆಗಬೇಕು ಎಂದು ಬಯಸಿದರು.ಈ ಬಗ್ಗೆ ಮಾವನ ಬಳಿ ಹೇಳಿದಾಗ ಚಿತ್ರ ನಟನಾಗಬೇಕಾದರೇ ಕೇವಲ ಇನ್ಫ್ಲೂಯೆನ್ಸ್ ಇದ್ದರೆ ಸಾಲದು ಅದಕ್ಕೆ ಕಠಿಣ ಪರಿಶ್ರಮ ಶ್ರದ್ಧೆ ಬೇಕು ಎಂದು ಬುದ್ದಿವಾದ ಹೇಳಿದರು.ಚಿತ್ರರಂಗಕ್ಕೆ ಬರುವ ಮೊದಲು ತಯಾರಿ ನಡೆಸಿಕೊಂಡೇ ಬಂದರು.ನಿರ್ದೇಶಕ ಎಪಿ ಅರ್ಜುನ್ ತಮ್ಮ ಮೊದಲ ಚಿತ್ರ ಅದ್ದೂರಿ ಚಿತ್ರಕ್ಕೆ ಆಡಿಶನ್ ನಡೆಸುತ್ತಿದ್ದಾಗ ಸಂದರ್ಶನದಲ್ಲಿ ಧ್ರುವ ಆಯ್ಕೆಯಾದರು. ತಾನು ಅರ್ಜುನ್ ಸರ್ಜಾರ ಅಳಿಯ ಎಂದು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.ನಾಯಕಿಯಾಗಿ ರಾಧಿಕಾ ಪಂಡಿತ್ ಇದ್ದರು.ಚಿತ್ರ ಹೊಸತನದ ಕತೆ ಮತ್ತು ಚುರುಕು ಸಂಭಾಷಣೆ ಇದ್ದುದರಿಂದ ಮೊದಲ ಚಿತ್ರವೇ ನೂರು ದಿನ ಓಡಿತು.ಎರಡನೇ ಚಿತ್ರ ಚೇತನ್ ಕುಮಾರ್ ಬಹದ್ದೂರ್’ಗಾಗಿ ಇವರನ್ನು ಅಯ್ಕೆ ಮಾಡಿಕೊಂಡರು.

ಅದೂ ಅಲ್ಲದೇ ಕತೆಯ ಆಯ್ಕೆ ವಿಚಾರದಲ್ಲಿ ಪ್ರಬುದ್ಧತೆ ಇದ್ದುದರಿಂದ ಹಾಗೂ ಅವರ ಮಾವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸಹಾಯ ಮಾಡುತ್ತಿದ್ದುದರಿಂದ ಅವರು ಉತ್ತಮವಾದ ಕತೆ ಆಯ್ಕೆ ಮಾಡಿಕೊಂಡರು.ಆ ಚಿತ್ರವೂ ನೂರು ದಿನ ಓಡಿತು. ಇದೇ ತಂಡ ಭರ್ಜರಿ ಚಿತ್ರವನ್ನು ಮಾಡಿತು.ಭರ್ಜರಿಯಾಗಿ ಓಡಿದ ಈ ಚಿತ್ರ ಧ್ರುವಸರ್ಜಾರಿಗೆ ಹ್ಯಾಟ್ರಿಕ್ ಬಿರುದು ನೀಡಿತು.ಈಗ ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಬರುತ್ತಿದೆ.ಸುಮಾರು ಎರಡು ವರ್ಷಗಳಿಂದ ದೇಹವನ್ನು ಹುರಿಗೊಳಿಸಿರುವ ಅವರು ಅದಕ್ಕೆ ತಮ್ಮ ಗಡ್ಡವನ್ನು ತೆಗೆಯುತ್ತಿಲ್ಲ.ಮದುವೆ ದಿನವೂ ಕೂಡ ಅವರು ಗಡ್ಡ ತೆಗೆಯಲಿಲ್ಲ.ಕಾರಣ ಸಿನಿಮಾ ಶೂಟಿಂಗ್’ಗೆ ತೊಂದರೆ ಆಗುತ್ತದೆ.ನನ್ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣದಿಂದ.
ಮನುಷ್ಯ ದೊಡ್ಡವನಾಗುವುದು ಶ್ರೀಮಂತಿಕೆಯಿಂದಲ್ಲ.ತನ್ನ ಸರಳತೆಯಿಂದ ಅಲ್ಲವೇ?!

LEAVE A REPLY

Please enter your comment!
Please enter your name here