ಮನುಷ್ಯನಿಗೆ ತಿಳಿದ ರೋಗಗಳಲ್ಲಿ ನ್ಯೂಮೋನಿಯವು ಅತ್ಯಂತ ಭಯಂಕರವಾದ ರೋಗವಾಗಿದೆ, ಆಧುನಿಕ ವಿಷಹಾರ ಔಷಧಿಗಳು ಸಾಮಾನ್ಯವಾಗಿ ಈ ರೋಗವನ್ನು ಹತೋಟಿಗೆ ತರಬಲ್ಲವು ಹೀಗಿದ್ದರೂ ಇದು ಒಂದು ತೀವ್ರ ತರಹದ ರೋಗವೇ ಆಗಿದೆ (Streptococcus) ಮತ್ತು (Pneumococcus) ಮೊದಲಾದ ಜೀವಾಣುಗಳ ನ್ಯೂಮೋನಿಯವನ್ನುಂಟು ಮಾಡುವುದು ಕೆಲವು ಬಗೆಯ ವಿಷಾಣುಗಳು ಸಹ ಈ ಕಾಯಿಲೆಗೆ ಕೆಲವು ವೇಳೆ ಕಾರಣವಾಗುತ್ತದೆ.
ಈ ರೋಗವು ಸಾಮಾನ್ಯವಾಗಿ ತಲೆಯಲ್ಲಿ ಅಥವಾ ಗಂಟಲಲ್ಲಿ ಶೀತದಿಂದ ಪ್ರಾರಂಭವಾಗುತ್ತದೆ ಕೆಲವೇಳೆ ರೋಗಿಯು ಎದೆಯಲ್ಲಿ ಚುಚ್ಚುವ ನೋವಿನಿಂದ ಕೂಡಿ ನಡುಗುವ ಚಳಿಗೆ ಈಡಗುವನು ಆನಂತರ ಪಾಟಲ ವರ್ಣದ ಉಗುಳಿನಿಂದ ಕೂಡಿದ ಕೆಮ್ಮು ಬರುವುದು ತರುವಾಯ ಉಗುಳು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿ ಜ್ವರ ತಲೆನೋವು ಇರುವುದು ಧೂಳಿನ ವರ್ಣದ ಉಗುಳು ನ್ಯೂಮೋನಿಯದ ಉಗ್ರತೆಯನ್ನು ಸೂಚಿಸುವುದು ಚಿಕ್ಕಮಕ್ಕಳಲ್ಲಿ ಚಿತಬ್ರಮೆ ಮತ್ತು ಮೂರ್ಛೆ ರೋಗ ತಲೆದೋರುವುದು ನ್ಯೂಮೋನಿಯಾ ರೋಗಿಗಳು ರೋಗದ ತೀವ್ರತೆಯನ್ನು ಅನುಭವಿಸುತ್ತಾರೆ ಮತ್ತು ಅತಿಯಾಗಿ ಬೆವರು ಕೊಳ್ಳುತ್ತಾರೆ, ಜ್ವರವು ಅತಿಯಾದ ಉಗುಳಿನಿಂದ ಕೂಡಿದ ಕೆಮ್ಮು ಕಾಣಿಸಿಕೊಳ್ಳುವುದು ತುಟಿಯ ಸುತ್ತಮುತ್ತ ಮುಖದ ಸುತ್ತಮುತ್ತ ಮುಖದ ಮೇಲೆ ಹುಣ್ಣುಗಳಾಗುವುದು.
ರೋಗಿಯನ್ನು ಹಾಸಿಗೆಯಲ್ಲಿ ಇರುವಂತೆ ಮಾಡಿ ಧಾರಾಳವಾಗಿ ಪಾನೀಯಗಳನ್ನು ರಸಗಳನ್ನು ಕುಡಿಯಲು ಕೊಡಬೇಕು ಅಗತ್ಯವಿದ್ದರೆ ಆಮ್ಲಜನಕವನ್ನು ಕೊಡಬೇಕು ಅನೇಕ ಸಂದರ್ಭಗಳಲ್ಲಿ ಪೆನ್ಸಿಲಿನ್ ಅಥವಾ ಇತರ ಪ್ರಯೋಜನಕಾರಿಯಾದ ವಿಷಹಾರಿಗಳನ್ನು ಸಾಕಷ್ಟು ಕ್ರಮದಲ್ಲಿ ಕೊಟ್ಟರೆ ಅವು ವ್ಯಾಧಿಯನ್ನು ಹತೋಟಿಗೆ ಬರುವುದಲ್ಲದೆ ರಕ್ಷಣಾ ವ್ಯೂಹವನ್ನು ರಚಿಸಿಕೊಳ್ಳಲು ನೆರವಾಗುವುದು ಜ್ವರ ಇಳಿದು ರೋಗಿಯ ಉಷ್ಣವು ಸಹಜ ಸ್ಥಿತಿಗೆ ತಿರುಗಿದ ಮೇಲೆಯೂ ಅವನನ್ನು ಅನೇಕ ದಿನಗಳ ಕಾಲ ಹಾಸಿಗೆಯಲ್ಲಿ ಇರಿಸಬೇಕು ಮರುಕಳಿಸದಂತೆ ಎಚ್ಚರವನ್ನು ವಹಿಸಬೇಕು ಏಕೆಂದರೆ ನ್ಯೂಮೋನಿಯ ಉಗ್ರವಾದ ವ್ಯಾಧಿಯಾಗಿದೆ.