ಶಟ್ಟಿಗೆ ಏನೊ ಕಿತ್ಕೋತಿಯಾ ಅಂತ ಅವಾಜ್ ಹಾಕಿದ ಚಂದನಾ!

0
3130

ಬಿಗ್ಬಾಸ್ ಕನ್ನಡ ಈ ಸಲದ ಸೀಸನ್ ಬಹಳ ರಸವತ್ತಾಗಿ ನಡೆಯುತ್ತಿದೆ. ಎಂದಿನಂತೆ ಈ ಸಲವೂ ಲವ್ ಸ್ಟೋರಿ, ಕಿತ್ತಾಟ ,ಸ್ನೇಹ ಎಲ್ಲಾ ಇದೆ. ಕುರಿ ಪ್ರತಾಪ್, ವಾಸುಕಿ ವೈಭವ್, ಶೈನ್ ಶೆಟ್ಟಿ ,ಭೂಮಿಕಾ ಶೆಟ್ಟಿ , ಚಂದನಾ‌, ಹರೀಶ್ ರಾಜ್ ಮುಂತಾದವರು ಆಡುತ್ತಿದ್ದಾರೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದಕ್ಕೆ ಆಗುತ್ತಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಕುರಿ ಪ್ರತಾಪ್ ಬಹಳ ಸೇಫ್ ಆಗಿ ಆಡುತ್ತಿದ್ದಾರೆ. ಅಚ್ಚರಿ ಎಂದರೆ ಅದು ವಾಸುಕಿ ವೈಭವ್ . ಏನೂ ಗೊತ್ತಿಲ್ಲದ ಮುಗ್ದನಂತೆ ಬಂದ ವಾಸುಕಿ ಆಟ ಸಕ್ಕತ್ ಆಡ್ತಿದ್ದಾರೆ. ಶೈನ್ ಶೆಟ್ಟಿ ಈ ಮೊದಲು ಯಾರಿಗೂ ಗೊತ್ತಿರಲಿಲ್ಲ. ಆದರೆ ಬಿಗ್ಬಾಸ್ ಬಂದ ಮೇಲೆ ಇವರ ಮೇಲೆ ಹೆಚ್ಚು ಹೋಪ್ ಇದೆ. ಇವರೇ ಗೆದ್ದರೆ ಚೆಂದ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಶೈನ್ ಶೆಟ್ಟಿ ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಕುರಿ ಪ್ರತಾಪ್’ಗೆ ಪೈಪೋಟಿ ಕೊಡುತ್ತಿರುವ ಶೈನ್ ಶೆಟ್ಟಿ ಸಕ್ಕತ್ ಆಗಿ ಆಡುತ್ತಿದ್ದಾರೆ. ಆ ಲೆಕ್ಕ ನೋಡಿದರೆ ಕುರಿಯಿಂದ ಯಾವುದೇ ಮನರಂಜನೆ ಸಿಗುತ್ತಿಲ್ಲ. ಹರೀಶ್ ರಾಜ್ ನಟನಾದರೂ ಎಲ್ಲೂ ಸಕ್ಸಸ್ ಆಗಿರಲಿಲ್ಲ. ಹೀರೋ ಆಗಿ ಫೇಲ್ ಆದ ಹರೀಶ್ ರಾಜ್ ಗೆದ್ದರೆ ಅವರಿಗೂ ಅನುಕೂಲ , ಅವರ ಭವಿಷ್ಯದ ದೃಷ್ಟಿಯಿಂದಲೂ.

ಈ ವಾರದಲ್ಲಿ ಒಂದು ಅಚ್ಚರಿ ನಡೆಯಿತು. ಇಬ್ಬರೂ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದರು. ಶೈನ್ ಶೆಟ್ಟಿ ಮತ್ತು ಚಂದನಾ ನಡುವೆ ಮಾತುಕತೆ ನಡೆಯುತ್ತ ಇತ್ತು. ಶೈನ್ ಶೆಟ್ಟಿ ಹೇಳಿದಂಗೇ ಅವಳು ಹೇಳಬೇಕಾಗಿತ್ತು. ಶೆಟ್ಟಿ ಹೇಳಿದಂಗೇ ಚಂದನಾ ಹೇಳುತ್ತಿದ್ದರು. ಆಗ ತಕ್ಷಣ ಶೈನ್ ಶೆಟ್ಟಿ ಬೇರೆ ಪದ ಬಳಸಿದರು. ಅದು ಏನೆಂದರೆ ನಾನು ಪುಡಾಂಗೇ ಎಂದಿದ್ದಾರೆ. ಅದಕ್ಕೆ ಅಚ್ಚರಿ ಎಂಬಂತೆ ನಾನು ಪುಡಾಂಗೇ ಏನಿವಾಗ ? ಎಂದು ಎಕ್ಸ್‌ಟ್ರಾ ಮಾತು ಸೇರಿಸಿ ಹೇಳಿದ್ದಾರೆ. ಇದಕ್ಕೆ ಹರೀಶ್ ರಾಜ್, ವಾಸುಕಿ ಕೇಳಿ ದಿಗ್ಬ್ರಮೆಗೊಂಡಿದ್ದಾರೆ.

ಅಂದ ಹಾಗೇ ಗಾಭರಿಯಾಗಬೇಡಿ. ಇದು ತಮಾಷೆಗೆ ನಡೆದಿದ್ದು . ಇದನ್ನು ಕೇಳಿ ಶೈನ್ ಶೆಟ್ಟಿ ಒಂದು ಕ್ಷಣ ಗಾಭರಿಯಾದರೂ ನಕ್ಕಿದ್ದಾರೆ. ಇದಕ್ಕೆ ಚಂದನಾ ಕೂಡ ಚಂದವಾಗೆ ಸ್ಮೈಲ್ ಕೊಟ್ಟಿದ್ದಾರೆ

LEAVE A REPLY

Please enter your comment!
Please enter your name here