ಅರ್ಜುನನು ಪಾಶುಪತಾಸ್ತ್ರವನ್ನು ವರವಾಗಿ ಪಡೆದ ಕಥೆ..!! ನಿಮಗಿದು ತಿಳಿದಿದ್ಯಾ.

0
2040

ಪಾಂಡವರು ವನವಾಸಕ್ಕೆ ಹೋದರು ಯುಧಿಷ್ಠಿರನಿಗೆ 12 ವರ್ಶಗಳ ವನವಾಸ ಮತ್ತು 1 ವರ್ಷದ ಅಜ್ಞಾತವಾಸದ ನಂತರ ನಡೆಯುವ ಯುದ್ಧದ ಬಗ್ಗೆ ಬಹಳ ಚಿಂತೆಯಾಗಿತ್ತು ಆ ಕಾಲದ ಮಹಾಮಹಾ ಯೋದ್ಧರಾದ ಭೀಷ್ಮ, ದ್ರೋಣ, ಕೃಪ ಮುಂತಾದವರೆಲ್ಲಾ ದುರ್ಯೋಧನನ ಪಕ್ಷ ವಹಿಸುವರೆಂದು ಅವನಿಗೆ ಅರಿವಿತ್ತು ಅಂತಹ ಅಪ್ರತಿಮ ವೀರರೊಡನೆ ಯುದ್ಧಮಾಡುವುದು ಮತ್ತು ಗೆಲ್ಲುವುದು ಹೇಗೆ ಎಂದು ಅವನು ಚಿಂತಿತನಾಗಿದ್ದ, ಶ್ರೀ ವೇದವ್ಯಾಸರು ಅರ್ಜುನನಿಗೆ ಶಿವ ನನ್ನ ಕುರಿತು ತಪಸ್ಸನ್ನು ಮಾಡಿ ಶಿವನ ಕೃಪೆಗೆ ಪಾತ್ರನಾಗಲು ಉಪದೇಶಿಸಿದರು ಐದೂ ಜನ ಅಣ್ಣತಮ್ಮಂದಿರು ಆ ಉಪದೇಶವನ್ನು ಅಂಗೀಕರಿಸಿದರು ಮತ್ತು ಅರ್ಜುನನು ಶಿವನಿಂದ ವರವನ್ನು ಪಡೆಯಲು ತಪಸ್ಸನ್ನು ಮಾಡಲು ಹಿಮಾಲಯ ಪರ್ವತಗಳಿಗೆ ಹೊರಟನು.

ಅರ್ಜುನನ ತಪಸ್ಸು ತೀವ್ರವಾಗಿ ಮತ್ತು ಶುದ್ಧವಾಗಿತ್ತು ಅವನು ದೇಹವೆಲ್ಲಾ ವಿಭೂತಿಯನ್ನು ಬಳಿದುಕೊಂಡು ರುದ್ರಾಕ್ರಿಯನ್ನು ಧರಿಸಿ ಒಂಟಿಕಾಲಮೇಲೆ ನಿಂತು ತಪಸ್ಸನ್ನು ಮಾಡುತ್ತಿದ್ದ.ಆ ಸಮಯದಲ್ಲಿ ದುರ್ಯೋಧನನು, ಅರ್ಜುನನನ್ನು ಕೊಲ್ಲಲು ಮೂಕಾಸುರನೆಂಬ ರಾಕ್ಷಸನನ್ನು ಕಳುಹಿಸಿದ ಅವನು ಹಂದಿಯ ರೂಪವನ್ನು ಧರಿಸಿ, ಅರ್ಜುನನು ತಪವನ್ನಾಚರಿಸುತ್ತಿದ್ದ ಸ್ಥಳಕ್ಕೆ ಬಂದನು ಅರ್ಜುನನು ಅದರ ಮೇಲೆ ಒಂದು ಬಾಣವನ್ನು ಪ್ರಯೋಗ ಮಾಡಿದನು, ಅದೇ ಸಮಯಕ್ಕೆ ಒಬ್ಬ ಬೇಟೆಗಾರನೂ ಅದರ ಮೇಲೆ ಒಂದು ಬಾಣವನ್ನು ಪ್ರಯೋಗಮಾಡಿದನು, ಆ ಹಂದಿಯು ಪ್ರಾಣವನ್ನು ಬಿಟ್ಟಿತು.

ಆ ಬೇಟೆಗಾರನು ಈ ಹಂದಿಯು ನನ್ನ ಬಾಣದಿಂದ ಸತ್ತಿತು, ನಿನ್ನ ಬಾಣದಿಂದ ಅಲ್ಲ ಎಂದು ಅರ್ಜುನನಿಗೆ ಹೇಳಿದನಂತೆ ಇದನ್ನು ಕೇಳಿ ಅರ್ಜುನ ನಕ್ಕುಬಿಟ್ಟನಂತೆ, ಇದರಿಂದ ಅವರಿಬ್ಬರಲ್ಲಿ ಸ್ಪರ್ಧೆ ಮತ್ತು ಜಗಳ ಉಂಟಾಯಿತು ಈ ಸ್ಪರ್ಧೆಯಲ್ಲಿ ತಾನು ಈ ಬೇಟೆಗಾರನಿಗೆ ಕಿಂಚಿತ್ತೂ ಸಮನಲ್ಲ ಎಂಬ ಅರಿವು ಅರ್ಜುನನಿಗೆ ಉಂಟಾಯಿತು ಅರ್ಜುನನು ಪರಮಶಿವನನನ್ನು ಕಾಪಾಡು ಎಂದು ಪ್ರಾರ್ಥಿಸಿದನಂತೆ ತಕ್ಶಣವೇ ಆ ಬೇಟೆಗಾರನೇ ಪರಮಶಿವ ಎಂದು ಅರ್ಜುನನಿಗೆ ಅರಿವಾಯಿತಂತೆ ಶಿವನಿಗೆ ಸಾಕು ಈ ನಟನೆ ಎಂದು ಅನಿಸಿದೊಡನೆಯೇ ಅರ್ಜುನನಿಗೆ ದೇವದೇವನಾದ ಪರಮಶಿವನ ದರ್ಶನವಾಯಿತು.

ಆ ದೇವನು ಅರ್ಜುನನನ್ನು ಆಶೀರ್ವದಿಸಿ, ಅವನಿಗೆ ಪಾಶುಪತಾಸ್ತ್ರವನ್ನು ವರವಾಗಿ ಕೊಟ್ಟನಂತೆ ಈ ಅವತಾರದಲ್ಲಿ ಶಿವನು ಬೇಟೆಗಾರನ ಎಂದರೆ ಕಿರಾತನ ರೂಪದಲ್ಲಿ ಬಂದ ಮತ್ತು ಅವನ ಪತ್ನಿಯಾದ ಪಾರ್ವತಿಯು ಕಿರಾತಿಯಾಗಿ ಬಂದಳು.

ಶ್ವಾನ ರೂಪವನ್ನು ತಳೆದು ಅವರನ್ನು ಹಿಂಬಾಲಿಸಿತು ಪರಮಶಿವನ ಈ ರೂಪವನ್ನು ಕಿರಾತ ಮೂರ್ತಿ ಎಂದು ಕರೆಯಲಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here