ಹೈದರಾಬಾದಿನಲ್ಲಿ ವಾಸವಾಗಿದ್ದ ದಿವ್ಯ 22 ವರ್ಷದ ಹುಡುಗಿ ಬಾವಿಗೆ ಹಾರಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ, ಮೇಲ್ನೋಟಕ್ಕೆ ವರದಕ್ಷಿಣೆ ಕಿರುಕುಳದಿಂದ ಮದುವೆಯಾದ 4 ತಿಂಗಳಿಗೆ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ದಿವ್ಯ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವರ್ಷ ಫೆಬ್ರವರಿ 22ರಂದು ಅದೇ ಗ್ರಾಮದ ಪ್ರವೀಣ್ ರೆಡ್ಡಿ ಇನ್ನು ಅವರ ಜೊತೆ ದಿವ್ಯ ಅವರ ಮದುವೆಯಾಗಿತ್ತು, ಇನ್ನು ಮದುವೆಯಲ್ಲಿ ವರದಕ್ಷಿಣೆಯಾಗಿ 10 ಲಕ್ಷ ನಗದು, 20 ತೋಲಾ ಚಿನ್ನ ಮತ್ತು 1ಎಕರೆ ಭೂಮಿ ನೀಡಿ ಮದುವೆ ಮಾಡಿಕೊಟ್ಟಿದ್ದರು, ಇನ್ನು ಮದುವೆಯಾದ ನಂತರವೂ ದಿವ್ಯ ಹೈದರಬಾದಿನಲ್ಲಿ ಕೆಲಸ ಮಾಡುತ್ತಿದ್ದಳು ಆದರೆ ಪ್ರವೀಣ್ ರೆಡ್ಡಿ ಊರಿನಲ್ಲಿ ತೋಟದ ಕೆಲಸ ಮಾಡಿಕೊಂಡು ಇದ್ದರು.
ಇದ್ದಕ್ಕಿದ್ದ ಹಾಗೆ ಜಗಳ ಮಾಡಿಕೊಂಡು ಮನೆಗೆ ಬಂದಿದ್ದ ದಿವ್ಯ ಅಪ್ಪ-ಅಮ್ಮಂದಿರ ಬಳಿ ಗಂಡನ ಮನೆಯವರು ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ ಇಲ್ಲವಾದರೆ ನಾವು ಕೊಟ್ಟಿರುವ ಒಂದು ಎಕರೆ ಜಮೀನನ್ನು ಮಾರಾಟ ಮಾಡುವುದಾಗಿ ಹೇಳುತ್ತಿದ್ದಾರೆ ಹಾಗೂ ವಾಟ್ಸಾಪ್ನಲ್ಲಿ ನನ್ನ ಗಂಡ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದಳು.
ಇದಾದ ಬಳಿಕ ದಿವ್ಯ ಮನೆಯವರು ಗಂಡ ಪ್ರವೀಣ್ ರೆಡ್ಡಿ ಅವರ ಮನೆಗೆ ಹೋಗಿ ಮಾತುಕತೆ ಮಾಡಲು ಮುಂದಾದರೂ ಆದರೆ ಅಲ್ಲೂ ಸಹ ಎರಡು ಕುಟುಂಬಗಳ ನಡುವೆ ಬಹುದೊಡ್ಡ ಜಗಳ ನಡೆದಿದೆ ನಂತರ ಹಿಂದಿರುಗಿ ಮನೆಗೆ ಬಂದಿದ್ದ ದಿವ್ಯ ಅವರ ತಾಯಿಯ ಜಮೀನಲ್ಲಿ ಇದ್ದ ಬಾವಿಯೊಂದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಪೋಷಕರು ಪ್ರವೀಣ್ ರೆಡ್ಡಿ ಅವರ ಮೇಲೆ ಹಾಗೂ ಅವರ ಪೋಷಕರ ಮೇಲೆ ಪೊಲಿಸಿ ನಲ್ಲಿ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂಲ ಪಬ್ಲಿಕ್ ಟಿವಿ