ಕರ್ನಾಟಕ ಮಾತ್ರವಲ್ಲದೆ ದೇಶದೆಲ್ಲಡೆ ಹೆಸರಾಗಿರುವ ಮಂಡ್ಯ ಜಿಲ್ಲೆಯ ಕಾಮೇಗೌಡ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಕುರಿ ಕಾಯಲು ಹೋದಾಗ ಬಾಯಾರಿಕೆಯಿಂದ ಬಳಲಿ ನೀರು ಸಿಗದೆ ಒದ್ದಾಡಿ ಅದೇ ಸಮಯದಲ್ಲಿ ಕಾಡಿನ ಪ್ರಾಣಿಗಳ ಪರಿಸ್ಥಿತಿ ಅರಿವಾಗಿ ಅವುಗಳಿಗಾಗಿ ಕೆರೆ ಕಟ್ಟುವ ನಿರ್ಧಾರ ತೆಗೆದುಕೊಂಡು ತಾವಿದ್ದ ಕುಂದೂರು ಬೆಟ್ಟದಲ್ಲಿಯೇ 7 ಕೆರೆಗಳನ್ನು ನಿರ್ಮಾಣ ಮಾಡಿರುವುದಾಗಿ ಹೆಸರಾಗಿದ್ದರು, ಹಾಗೂ ಇವರ ಸಾಧನೆಯ ಬಗ್ಗೆ ಸ್ವತಹ ಪ್ರಧಾನಿಗಳಾದ ನರೇಂದ್ರ ಮೋದಿಯವರೇ ತಮ್ಮ ಮನ್ಕಿಬಾತ್ ನಲ್ಲಿ ಹೊಗಳಿದ್ದರು.
ಇಂತಹ ಕಾಮೇಗೌಡ ಹೇಳಿರುವುದೆಲ್ಲ ಸುಳ್ಳು ಎಂದು ಅದೇ ಊರಿನ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ, ತಮ್ಮ ದೂರಿನಲ್ಲಿ ಸ್ವತಹ ಕೆರೆಕಟ್ಟೆಗಳನ್ನು ಕಟ್ಟಿಸಿದ್ದು, 2000 ಸಸಿಗಳನ್ನು ನೆಟ್ಟಿರುವುದು ಶುದ್ಧ ಸುಳ್ಳು, ಸರ್ಕಾರದ ಜಾಗವನ್ನು ನನ್ನ ಜಾಗ ಅಂತ ಹೇಳುತ್ತಾರೆ, ಊರಿನಲ್ಲಿರುವ ಯಾರಿಗೂ ಆ ಜಾಗದಲ್ಲಿ ಪ್ರವೇಶ ಕೊಡುವುದಿಲ್ಲ, ರೈತರೊಂದಿಗೆ ಹಾಗೂ ಊರಿನ ಮಹಿಳೆಯರೊಂದಿಗೆ ಅವ್ಯಾಚ ಪದಗಳಿಂದ ನಿಂದಿಸುತ್ತಾರೆ ಮರ್ಯಾದೆ ಕೊಡುವುದಿಲ್ಲ, ಅವರ ತಾಯಿ ಸತ್ತಾಗಲೂ ಮುಖ ನೋಡಲು ಭಾರದ ಕಾಮೇಗೌಡ ಅದು ಹೇಗೆ ಊರಿಗೆ ಉಪಕಾರಿ ಯಾಗುತ್ತಾರೆ ದನಕರುಗಳಿಗೆ ಕೆರೆಯಲ್ಲಿ ನೀರು ಕುಡಿಯಲು ಬಿಡುವುದಿಲ್ಲ ಈ ವ್ಯಕ್ತಿ.
ಸರ್ಕಾರ ನನ್ನ ಜೊತೆಗಿದೆ ಎಂದು ಗ್ರಾಮಸ್ಥರಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಕಿರುಕುಳ ಕೊಡುತ್ತಾರೆ, ಸರ್ಕಾರದ ಅಧಿಕಾರಿಗಳು ಖುದ್ದು ಸ್ಥಳದ ಪರಿಶೀಲನೆ ಮಾಡಿ ಇಡೀ ಗ್ರಾಮಸ್ಥರ ಅಭಿಪ್ರಾಯವನ್ನು ವಯಕ್ತಿಕವಾಗಿ ಪಡೆಯಿರಿ ಅದಾದನಂತರ ನಿಜವಾಗಿಯೂ ಸಮಾಜ ಸೇವಕ ಎಂಬುದು ಕಂಡು ಬಂದರೆ ಖಂಡಿತ ಗೌರವ ನೀಡಿ ನಮ್ಮ ಅಭ್ಯಂತರ ಏನೂ ಇಲ್ಲ ವಿರೋಧ ಸಹ ಮಾಡುವುದಿಲ್ಲ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.