ಮಜ್ಜಿಗೆ, ಈ ಮಜ್ಜಿಗೆಯ ಬಗ್ಗೆ ನಮಗೆಲ್ಲರಿಗೂ ತಿಳಿಯದೆ ಇರುವ ವಿಷಯಗಳೇನು ಇಲ್ಲ ಎಂಬುದು ನನ್ನ ಭಾವನೆ, ಮಜ್ಜಿಗೆಯು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದು ದ್ರವ ಪದಾರ್ಥ ಎಂದರೆ ಖಂಡಿತ ತಪ್ಪಾಗಲಾರದು. ಮಜ್ಜಿಗೆಯಲ್ಲಿ ಹಲವು ಉಪಯೋಗಗಳಿವೆ ಅವುಗಳು ಇಲ್ಲಿವೆ ನೋಡಿ.
ವಿಟಮಿನ್ ಬಿ12 ಯತೇಚ್ಛವಾಗಿ ಒಳಗೊಂಡಿರುವ ಮಜ್ಜಿಗೆಯಿಂದ ಅನೀಮಿಯಾ, ಖಿನ್ನತೆ ದೂರವಾಗುತ್ತೆ.
ಮಜ್ಜಿಗೆಯಲ್ಲಿರುವ ಆಸಿಡ್, ಜರ್ಮ್ಸ್ ಮತ್ತು ಬ್ಯಾಕ್ಟೀರಿಯಾಗಳನ್ನ ಕೊಲ್ಲುತ್ತದೆ, ಹೊಟ್ಟೆಯನ್ನು ಶುದ್ಧೀಕರಿಸಿ ಜೀರ್ಣಶಕ್ತಿ ವೃದ್ಧಿಸುತ್ತದೆ.
ಮಜ್ಜಿಗೆಯಲ್ಲಿರುವ ಎಲೆಕ್ಟ್ರೋಲೈಟ್ಸ್ ಮತ್ತು ಅತಿಯಾದ ದ್ರವಾಂಶ ನಿಮ್ಮ ದೇಹ ನಿರ್ಜಲೀಕರಣಗೊಳ್ಳುವುದನ್ನ ತಡೆಯುತ್ತದೆ.
ಹೆಚ್ಚು ಎಣ್ಣೆ, ಮಸಾಲೆ ಪದಾರ್ಥಗಳನ್ನ ತಿಂದ ಬಳಿಕ ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆ ಹಗುರವಾಗಿ ಬಹಿರ್ದೆಸೆಗೆ ಅನುಕೂಲವಾಗುತ್ತೆ.
ದೇಹಕ್ಕೆ ಬೇಕಾದ ಕ್ಯಾಲ್ಶಿಯಂ, ವಿಟಮಿನ್, ಪ್ರೊಟೀನ್ ಗಳನ್ನು ಮಜ್ಜಿಗೆ ನೀಡುತ್ತದೆ.
ಕ್ಯಾನ್ಸರ್ ತಡೆ, ಕೊಲೆಸ್ಟ್ರಾಲ್ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ.
ಎಲ್ಲಕ್ಕಿಂತ ಪ್ರಮುಖವಾದ ಅಂಶವೆಂದರೆ ಆಸಿಡಿಟಿಯಿಂದ ಬಳಲುತ್ತಿರುವವರಿಗೆ ಮಜ್ಜಿಗೆ ರಾಮಬಾಣ.
ಜೊತೆಯಲ್ಲಿ ಇದನ್ನು ಓದಿ ಕೆಮ್ಮು ಕಫಗಳಂತಹ ಸಮಸ್ಯೆಗಳಿಗೆ ವೀಳೆದೆಲೆಯಲ್ಲಿದೆ ಮದ್ದು.
ವೀಳೇದೆಲೆಯನ್ನ ನಾವು ಹೆಚ್ಚಾಗಿ ತಾಂಬೂಲ ಹಾಕಲು ಇಲ್ಲವೇ ಶುಭ ಸಮಾರಂಭಗಳಲ್ಲಿ ಪೂಜೆ ಪುನಸ್ಕ್ರಗಳಿಗೆ ಬಳಸುತ್ತೇವೆ, ಆದರೆ ಈ ವೀಳೇದೆಲೆ ಕೇವಲ ಪೇಜೆ ಹಾಗೂ ತಾಂಬೂಲಕ್ಕೆ ಮಾತ್ರ ಸೀಮಿತವಲ್ಲ, ಇದರಲ್ಲಿ ಅನೇಕ ಕಾಯಿಲೆಗಳಿಗೆ ಮದ್ದುಗಳಿವೆ. ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಇಂತಹವುಗಳಾದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ ಬೇಗ ಕ್ರಿಯಾ ಹೀನವಾಗಬಹುದು.
ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ, ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ, 1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿಯಾಗುತ್ತದೆ.
ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ, ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ, ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.