ಒಂದು ಸಂಶೋಧನೆ ಪ್ರಕಾರ ಕೋಲ್ಡ್ ಫಿಲ್ಟರ್ ನೀರಿಗಿಂತ ಮಡಿಕೆ ನೀರು ಎಷ್ಟು ಉತ್ತಮ ಅಂತ ಗೊತ್ತಾ..!!

0
2106

ಹೊರಗಡೆಯಿಂದ ದಣಿದು ಮನೆಗೆ ಬಂದಾಗ ಅಥವಾ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಯಲ್ಲಿ ನಾವು ನೋಡಿರುತ್ತೇವೆ, ಆ ನೀರನ್ನು ತಂಪು ಮಾಡಲು ಬಾಟಲ್ ಗಳಲ್ಲಿ ನೀರನ್ನು ತುಂಬಿ ಅದನ್ನು ಮುಚ್ಚಳಗಳನ್ನು ಬಳಸಿ ಸಂರಕ್ಷಸಿ ರೆಫ್ರಿಜರೇಟರ್ ನಲ್ಲಿ ಇಡುವುದರಿಂದ ನೀರಿನ ಗುಣಮಟ್ಟ ಕಡಿಮೆಯಾಗುತ್ತದೆ ಎಂತೆ.

ಅಷ್ಟೇ ಅಲ್ಲದೆ ನಾವು ಹೆಚ್ಚಾಗಿ ನೀರನ್ನು ಸಂರಕ್ಷಿಸುವುದು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿ, ಹೀಗೆ ಪ್ಲಾಸ್ಟಿಕ್ ನ ಅಂಶವು ಆ ನೀರಿನಲ್ಲಿ ಕೂಡಿ ಕೊಳ್ಳುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಅತಿ ಹೆಚ್ಚು ಎಂದು ಈ ಸಂಶೋಧನೆ ವಿವರಿಸಿದೆ, ಬಾಟಲ್ ಗಳಲ್ಲಿ ತುಂಬಿಟ್ಟ ನೀರುಗಳು ವಿಜ್ಞಾನಿಗಳ ಲೆಕ್ಕಾಚಾರವನ್ನೇ ಬದಲಿಸಿದೆ, ಅಚ್ಚರಿಯ ವಿಚಾರವೆಂದರೆ ಇಡೀ ಜಗತ್ತಿನಲ್ಲಿ ತೊಂಬತ್ತಕ್ಕೂ ಹೆಚ್ಚು ಜನ ಕಡಿಮೆ ಗುಣಮಟ್ಟದ ನೀರನ್ನು ಕುಡಿಯುತ್ತಿದ್ದರೆ ಒಂದು ವೇಳೆ ಇದೇ ರೀತಿಯ ನೀರನ್ನು ಕುಡಿಯುವುದು ಮುಂದುವರಿಸಿದ ಆದರೆ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ.

ಉತ್ತಮ ಗುಣಮಟ್ಟದ ನೀರು ಎಂದರೆ ಏನು ?

ಉತ್ತಮ ಗುಣಮಟ್ಟದ ನೀರನ್ನು ಗುರುತಿಸಲು ನೀರಿನಲ್ಲಿ ಟಿಡಿಎಸ್ ಮಾಪನವನ್ನು ಪರೀಕ್ಷೆ ಮಾಡಲಾಗುತ್ತದೆ, TDS ಎಂದರೆ total dissolved solids ಮಾಪನದಲ್ಲಿ ಅಳೆಯಲಾಗುತ್ತದೆ, ಇದರಿಂದ ನೀರಿನ ಗುಣಮಟ್ಟವನ್ನು ಸುಲಭವಾಗಿ ಪತ್ತೆ ಹಚ್ಚಲಾಗುವುದು, ಒಂದು ವೇಳೆ ನೀವು ಕುಡಿಯುವ ನೀರಿನಲ್ಲಿ ಟಿಡಿಎಸ್ ಪ್ರಮಾಣ 350 ರಷ್ಟು ಇದ್ದರೆ ಒಳ್ಳೆಯದು, ಹಾಗೂ 250 ರಿಂದ 500 ವರೆಗಿನ ಟಿಡಿಎಸ್ ಕಂಡುಬಂದಲ್ಲಿ ನೀರು ಉತ್ತಮ, ಸಾವಿರಕ್ಕೂ ಹೆಚ್ಚು ಟಿಡಿಎಸ್ ನ ಹೊಂದಿದ್ದಲ್ಲಿ ಈ ನೀರು ಎಂದು ಅರ್ಥ, ಆದರೆ ನೂರಕ್ಕಿಂತಲೂ ಕಡಿಮೆ ಟಿಡಿಎಸ್ ಇದ್ದ ನೀರು ಕುಡಿಯಲು ಯೋಗ್ಯವಲ್ಲ.

ಬಾಟಲುಗಳಲ್ಲಿ ಸಂರಕ್ಷಣೆ ಮಾಡಿದ ನೀರುಗಳಲ್ಲಿ ರೋಗನಿರೋಧಕ ಶಕ್ತಿಗಳು ಇರುವುದಿಲ್ಲ ಹಾಗೂ ಟಿಡಿಎಸ್ ಪ್ರಮಾಣ ನೂರಕ್ಕಿಂತಲೂ ಕಡಿಮೆ ಇರುತ್ತದೆ ಇದರಿಂದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರು ಮಾಡುತ್ತವೆ.

ಇನ್ನು ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರಗಳು.

ಮಣ್ಣಿನ ಮಡಿಕೆಗಳಲ್ಲಿ ಶೇಖರಿಸಿದ ನೀರುಗಳು ಆರೋಗ್ಯಕ್ಕೆ ಬಹಳಷ್ಟು ಉಪಕಾರಿ, ಮಣ್ಣಿನ ಮಡಿಕೆ ಯು ನೀರಿನಲ್ಲಿ ಟಿಡಿಎಸ್ ಪ್ರಮಾಣ ಕಡಿಮೆ ಇದ್ದಲ್ಲಿ ಅದು ಹೆಚ್ಚಿಸುತ್ತದೆ ಅಥವಾ ಹೆಚ್ಚಿದ್ದಲ್ಲಿ ಕಡಿಮೆ ಮಾಡುವ ಶಕ್ತಿಯೂ ಮಣ್ಣಿನ ಮಡಿಕೆಗೆ ಇರುತ್ತದೆ, ಹಾಗೂ ಗಾಳಿಯಾಡದಂತೆ ನಾವು ನೀರನ್ನು ಮುಚ್ಚಿಡುವುದು ತಪ್ಪು ಸ್ವಲ್ಪವಾದರೂ ಗಾಳಿ ಹಾಡುವಂತಹ ಮಡಿಕೆಯಲ್ಲಿ ನೀರನ್ನು ಶೇಖರಿಸುವುದರಿಂದ ನೀರಿನ ಮಟ್ಟ ಉತ್ತಮವಾಗಿರುತ್ತದೆ ಹಾಗೂ ಕುಡಿಯಲು ಯೋಗ್ಯವಾಗಿರುತ್ತದೆ.

LEAVE A REPLY

Please enter your comment!
Please enter your name here