ಅಂದೊಂದು ದಿನ ತುಂಬಾ ಯೋಚನೆಯಲ್ಲಿದ್ದ ಭಕ್ತನ ಸಮಸ್ಯೆ ಬಗೆಹರಿಸಲು ಅವನ ತಂದೆ, ತಾಯಿ, ಬಂದು ಬಳಗ, ನೆರೆಯವರು ಹಾಗು ಸ್ನೇಹಿತರು ಎಲ್ಲರು ಪ್ರಯತ್ನಿಸಿ ಸೋಲುತ್ತಾರೆ, ಯಾಕೆಂದರೆ ಪ್ರತಿ ಉತ್ತರಕ್ಕೂ ಆತನ ಬಳಿ ಮತ್ತೊಂದು ಪ್ರೆಶ್ನೆ ಮೂಡುತ್ತಿತ್ತು ಆಗ ಆತನಿಗೆ ಉತ್ತರಿಸಲು ಆಗದ ಜನರು ನಿನ್ನ ಪ್ರೆಶ್ನೆಗೆ ಆ ದೇವರೇ ಉತ್ತರ ಕೊಡಬೇಕು ಅಂತ ಹೇಳಿ ಮೂಗು ಮುರಿದರು, ದೇವರನ್ನು ಪ್ರೆಶ್ನೆ ಕೇಳುವುದು ಸರಿಯಾದ ಆಯ್ಕೆ ಎಂದು ನಿರ್ಧರಿಸಿದ ಹಾಗು ಸಾಯಿಬಾಬಾ ಮೊರೆ ಹೋದ, ಒಂದು ದಿನ ಈತನ ಭಕ್ತಿ ಮೆಚ್ಚಿದ ಭಗವಂತ ಪ್ರತ್ಯಕ್ಷನಾಗಿ ಇವನ ಪ್ರೆಶ್ನೆಗೆ ಉತ್ತರಿಸಿದ ಹಾಗಾದರೆ ಆ ಪ್ರೆಶ್ನೆ ಮತ್ತು ಉತ್ತರವನ್ನು ಒಮ್ಮೆ ಈ ಕೆಳಗೆ ಒಮ್ಮೆ ಓದಿ ಬಿಡಿ.
ಭಕ್ತ ಸಾಯಿ ಬಾಬಾ ಅತ್ತಿರ ಕೇಳಿದೆ : ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ?
ಬಾಬಾ ಹೇಳಿದರು : ಮೊದಲು ನೀನು ನಿನ್ನ ಕೋಣೆಯನ್ನು ತಪಾಸಣೆ ಮಾಡಿ ಅರ್ಥಮಾಡಿಕೊ.
ಬಾಬಾರ ಮಾತಿನಂತೆ ಭಕ್ತ ತನ್ನ ಕೋಣೆಯಲ್ಲೆಲ್ಲಾ ಕಣ್ಣೋಡಿಸಿದಾಗ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತು.
ಮನೆಯ ಮೇಲ್ಛಾವಣಿ ಹೇಳಿತು : ನೀನು ಜೇವನದ ಉತ್ತುಂಗಕ್ಕೆ ಹೇರಲು ನಿನ್ನ ಗುರಿ ಎತ್ತರವಾಗಿರಬೇಕು.
ಫ್ಯಾನ್ ಹೇಳಿತು : ಅಂದುಕೊಂಡ ಕಾರ್ಯ ಸಾಧಿಸಲು ನೀನು ಯಾವಾಗಲೂ ಕೂಲ್ ಆಗಿರು.
ಗಡಿಯಾರ ಹೇಳಿತು : ಜೀವನದಲ್ಲಿ ಗೆಲ್ಲಲು ಇಂದಿನ ಈ ಸಮಯವು ಬೆಲೆಯುಳ್ಳದ್ದಾಗಿದೆ.
ಕ್ಯಾಲೆಂಡರ್ ಹೇಳಿತು : ಒಳ್ಳೆಯ ದಿನ ಕೆಟ್ಟ ದಿನ ಎಂದು ಯೋಚನೆ ಮಾಡದೆ ತಿಂಗಳಲ್ಲಿ ಬರುವ ಎಲ್ಲ ದಿನಗಳು ಅತ್ಯಮೂಲ್ಯವಾದದ್ದು ದಿನವನ್ನು ಸದುಪಯೋಗಪಡಿಸಿಕೊ.
ಪರ್ಸ್ ಹೇಳಿತು : ಉಳಿತಾಯ ಮಾಡದವ ದಡ್ಡ ನಿನ್ನ ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಹಣ ಶೇಖರಿಸಿ ಇಡು.
ಕನ್ನಡಿ ಹೇಳಿತು : ನಿಮ್ಮ ಸಾಮರ್ಥ್ಯ ತಿಳಿಯಲು ನೀನು ಮೊದಲು ನಿನ್ನನ್ನು ಅರ್ಥ ಮಾಡಿಕೊ.
ದೀಪ ಹೇಳಿತು : ನನ್ನಂತೆಯೇ ನೀನು ಸಹ ಇತರರಿಗೂ ಬೆಳಕನ್ನು ಹರಡು.
ಗೋಡೆ ಹೇಳಿತು : ಕೈಲಾದಷ್ಟು ಇತರರ ಭಾರವನ್ನು ಹೋರು.
ಕಿಟಕಿ ಹೇಳಿತು : ನಿನ್ನ ನೋಟ ದೀರ್ಘ ದೂರದವರೆಗೂ ವ್ಯಾಪಿಸುವಂತಿರಲಿ.
ನೆಲ ಹೇಳಿತು : ಭೂಮಿಯನ್ನು ಪ್ರೀತಿಸು.
ಮೆಟ್ಟಿಲು ಹೇಳಿತು : ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಶ್ರದ್ಧೆಯಿಂದ ಇಡು.