ನಮಗೆ ಒಂದು ಜೀನ್ಸ್ ಪ್ಯಾಂಟ್ ಹಾಕುವುದೇ ಕಷ್ಟ.ಟೈಟ್ ಆಗಿ ಮಡೆಯುವುದೇ ಕಷ್ಟವಾಗುತ್ತದಡ.ಆದರೆ ಇಲ್ಲೊಬ್ಬಳು ಒಂದರ ಮೇಲೊಂದರಂತೆ ಎಂಟು ಜೀನ್ಸ್ ಪ್ಯಾಂಟ್ ಹಾಕಿ ವೈರಲ್ ಆಗಿದ್ದಾಳೆ.ಆದರೆ ಆಕೆ ಮಾಡಿರುವುದು ಗನಂಧಾರಿ ಕೆಲಸವೇನಲ್ಲ. ಕಳ್ಳತನ. ಅದು ಎಲ್ಲಿ ನಡೆದಿದ್ದು ಗೊತ್ತೇ ? ಬನ್ನಿ ಇಂಟೆರೆಸ್ಟಿಂಗ್ ಸ್ಟೋರಿ ಬಗ್ಗೆ ತಿಳಿಯೋಣ.
ವೆನೆಜುವೆಲಾ ದೇಶದಲ್ಲಿ ಇದು ನಡೆದಿದೆ.ಅಲ್ಲಿನ ಬಟ್ಟೆ ಅಂಗಡಿಯಲ್ಲಿ ಒಂದು ಹುಡುಗಿ ಬಟ್ಟೆ ಪರ್ಚೇಸ್ ಮಾಡುವ ನೆಪದಲ್ಲಿ ಆ ಅಂಗಡಿಗೆ ಹೋಗಿದ್ದಾಳೆ.ಡ್ರೆಸ್ಸಿಂಗ್ ರೂಮಲ್ಲಿ ಬಟ್ಟೆ ಧರಿಸಿ ತಮಗೆ ಸೂಟ್ ಆಗುತ್ತೋ ಇಲ್ಲವೋ ಎಂದು ನೋಡುವುದು ಸಾಮಾನ್ಯ ತಾನೇ ? ಅದೇ ರೀತಿ ಅವಳು ಜೀನ್ಸ್ ಪ್ಯಾಂಟ್ ಹಾಕಿದ್ದಾಳೆ. ಆದರೆ ಆಕೆ ತನಗೆ ಯಾವುದೇ ಬಟ್ಟೆ ಇಷ್ಟವಾಗಿಲ್ಲ ಎಂದು ಹೊರಡಲು ಸಿದ್ದವಾಗುತ್ತಾಳೆ.ಆದರೆ ಅಂಗಡಿಯವರಿಗೆ ಸಂದೇಹ ಬರುತ್ತದೆ.ಅವಳನ್ನು ವಿಚಾರಿಸುತ್ತಾರೆ . ಆದರೆ ಆಕೆ ತನಗೇನು ಗೊತ್ತಿಲ್ಲದಂತೆ ಇರುತ್ತಾಳೆ.
ಕೊನೆಗೆ ಅವಳನ್ನು ಡ್ರೆಸ್ಸಿಂಗ್ ರೂಮಿಗೆ ಕರೆದುಕೊಂಡು ಹೋದ ಅಂಗಡಿಯವರು ಅವಳ ಪ್ಯಾಂಟ್ ಬಿಚ್ಚುತ್ತಾರೆ.ಅದನ್ನು ನೋಡಿ ಅವರಿಗೆ ದೊಡ್ಡ ಶಾಕ್ ಅಗುತ್ತದೆ.ಅವಳು ಕೇವಲ ಒಂದು ಪ್ಯಾಂಟ್ ಧರಿಸಿರಲಿಲ್ಲ.ಒಂದರ ಮೇಲೊಂದು ಬರೋಬ್ಬರಿ ಎಂಟು ಜೀನ್ಸ್ ಗಳನ್ನು ಧರಿಸಿದ್ದಳು.ಇದನ್ನು ನೋಡಿ ಅಂಗಡಿಯವರಿಗೆ ಶಾಕ್ ಆಗಿದೆ.ಪೋಲಿಸರು ಅವಳನ್ನು ಬಂಧಿಸಿ ವಿಚಾರಿಸಿದಾಗ ತನ್ನ ಮನೆಯ ಬಡತನದಿಂದ ತಾನು ಈ ರೀತಿಯಲ್ಲಿ ಮಾಡಬೇಕಾಯಿತು ಎಂದು ಅವಲತ್ತುಕೊಂಡಿದ್ದಾಳೆ
ಅವಳು ಎಂಟು ಪ್ಯಾಂಟ್’ಗಳನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಬಿಚ್ಚುವ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್’ನಲ್ಲಿ ವೀಡಿಯೋ ಮಾಡಿದ್ದಾರೆ.ಅದನ್ನು ಯೂಟ್ಯೂಬ್’ಗೆ ಅಪ್ಲೋಡ್ ಮಾಡಿದ್ದಾರೆ.ಇದು ಸಕ್ಕತ್ ವೈರಲ್ ಆಗಿದೆ.ಅವಳ ಕಳ್ಳತನಕ್ಕೆ ಕೆಲವರು ಬೈದರೆ ಹೆಚ್ಚು ಜನರು ಅವಳ ಟಾಲೆಂಟ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಮಗೆ ಒಂದು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಓಡಾಡುವುದೇ ಕಷ್ಟ. ನೀನು ಎಂಟು ಪ್ಯಾಂಟ್ ಅದೆಂಗೆ ಹಾಕಿಕೊಂಡಮ್ಮ ಎಂದು ನಗುವಿನ ಸಿಂಬಲ್ ಹಾಕಿ ಕಾಮೆಂಟ್ ಮಾಡಿದ್ದಾರೆ.ಇನ್ನೂ ಕೆಲವರು ಅವಳ ಬಡತನದ ಬಗ್ಗೆ ಮರುಕ ತೋರಿಸಿದ್ದಾರೆ.