ಶ್ರೀರಂಗಪಟ್ಟಣದಲ್ಲಿ ಹೊಟ್ಟೆ ಹಸಿವು ತಡೆಯಲಾಗದೆ ಜನರನ್ನು ಬೇಡಿಕೊಳ್ಳುತ್ತಿರುವ ಹುಚ್ಚ ವೆಂಕಟ್!

0
9038

ಆಶ್ಚರ್ಯವೆನಿಸಬಹುದು ಕಾರಣ ಕರೋನಾವೈರಸ್ ನಿಂದ ಸಂಕಷ್ಟ ಎದುರಾದಾಗ ಇದೇ ಹುಚ್ಚ ವೆಂಕಟ್ ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದರು, ಕೆಲವೇ ದಿನಗಳ ಹಿಂದೆ ಬೀದಿ ಬೀದಿಗೆ ತರಲಿ ಪಾನಿಪುರಿ ಅಂಗಡಿ, ಮಾಂಸದಂಗಡಿ ಹಾಗೂ ಮೀನಂಗಡಿ ತರಹದ ಹಲವು ಸಣ್ಣ ಅಂಗಡಿಗಳಿಗೆ ಸ್ವತಹ ಇವರೇ ತೆರಳಿ ದಿನಸಿ ಕಿಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದರು.

ಆದರೆ ಇಂದು ಶ್ರೀರಂಗಪಟ್ಟಣದಲ್ಲಿ ಸಾರ್ವಜನಿಕರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾರೆ, ಕಣ್ಣಲ್ಲಿ ನೀರು ಹಾಕುತ್ತಾ ಮನೆಗೆ ಹೋಗಲು ದುಡ್ಡಿಲ್ಲ ದಯವಿಟ್ಟು ಯಾರಾದರೂ ಹಣ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ, ನಿನ್ನೆ ರಾತ್ರಿ ಶ್ರೀರಂಗಪಟ್ಟಣದ ಮೈದಾನವೊಂದರಲ್ಲಿ ಮಲಗಿದ್ದು ಬೆಳಗ್ಗೆ ಎದ್ದು ದೇವಾಲಯದ ಮುಂಭಾಗದಲ್ಲಿ ಬಂದು ಅಲ್ಲಿರುವ ಜನರನ್ನು ಬೈಯುತ್ತಾ ಸುತ್ತಾಡುತ್ತಿದ್ದ ರಂತೆ, ಇದನ್ನು ನೋಡಿದ ಸಾರ್ವಜನಿಕರು ಹುಚ್ಚ ವೆಂಕಟ್ ಅವರ ಬಗ್ಗೆ ಮೊದಲೇ ಗೊತ್ತಿದ್ದ ಕಾರಣ ಅವರ ತಂಟೆಗೆ ಯಾರು ಹೋಗಿಲ್ಲ ಮತ್ತು ಮಾತನಾಡಿಸಿಲ್ಲ.

ಬಳಿಕ ಹೊಟ್ಟೆ ಹಸಿವಿನಿಂದ ನರಳುತ್ತಿದ್ದ ಹುಚ್ಚ ವೆಂಕಟ್ ಅವರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಯಾರು ಹೋಟೆಲ್ ನಲ್ಲಿ ಉಪಹಾರ ಕೊಡಿಸಿದ್ದಾರೆ, ಇದಾದ ಬಳಿಕ ಕಣ್ಣಲ್ಲಿ ನೀರು ಹಾಕುತ್ತಾ ಊರಿಗೆ ಹೋಗಲು ಹಣವಿಲ್ಲ ಯಾರಾದರೂ ಹಣ ಕೊಡಿ ಎಂದು ಜನರನ್ನು ಬೇಡಿಕೊಳ್ಳುತ್ತಿದ್ದ ರಂತೆ ಇದೇ ಸಮಯಕ್ಕೆ ದಾರಿಹೋಕ ಜನರು ಹುಚ್ಚ ವೆಂಕಟ್ ಗೆ ಹಣ ನೀಡಿದ್ದಾರೆ, ಇಷ್ಟಾಗುವಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿತ್ತು ತಕ್ಷಣ ಹುಚ್ಚವೆಂಕಟ್ ಇರುವ ಸ್ಥಳಕ್ಕೆ ಬಂದು ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಮೊದಲು ಉಡುಪಿಯಲ್ಲಿ ತಮ್ಮ ಕಾರಿನ ಗಾಜು ತಾವೇ ಹೊಡೆದು ರಂಪ ಮಾಡಿದ್ದರು, ನಂತರ ಟೋಲ್ ಒಂದರಲ್ಲಿ ಯಾರೋ ಹುಡುಗಿಯನ್ನು ಮದುವೆಯಾಗುವಂತೆ ಪೀಡಿಸಿ ನಂತರ ಮಾಧ್ಯಮಗಳ ಮುಂದೆ ಬಂದು ಸಾರ್ವಜನಿಕರಲ್ಲಿ ಇನ್ನೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ನನ್ನ ತಪ್ಪನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದರು, ಆದರೆ ಮತ್ತೇನಾಯ್ತು ಶಿವನೇ ಬಲ್ಲ.

LEAVE A REPLY

Please enter your comment!
Please enter your name here