ಪುರಾತನ ಭಾರತೀಯ ಕಾಲದಿಂದಲೂ ನಾವು ವಾಸ್ತು,ಸಂಪ್ರದಾಯ ಆಚಾರ ವಿಚಾರಗಳನ್ನು ಪಾಲಿಸುತ್ತಾ ಬಂದಿದ್ದೇವೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಆಚಾರ ವಿಚಾರಗಳು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುವುದರಿಂದ ಅದು ಸತ್ಯವಾಗಿದೆ.
ಮನೆಯಲ್ಲಿ ಕೆಲವರಿಗೆ ಒಳ್ಳೆಯದು ,ಶುಭವಾಗುತ್ತಿದ್ದರೆ ಇನ್ನೂ ಕೆಲವರಿಗೆ ಅಶಾಂತಿ , ನೆಮ್ಮದಿ ಕೆಡುವುದು, ದುಡ್ಡಿನ ಅಭಾವ ಇವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಯಾಕೆ ಹೀಗೆ ಆಗುತ್ತದೆ ? ಇದಕ್ಕೆ ಪರಿಹಾರ ಏನು ? ಎಂದರೆ ಮನೆಯಲ್ಲಿನ ವಾಸ್ತು ದೋಷ ಅಶಾಂತಿಗೆ ಕಾರಣವಾಗುತ್ತದೆ.
ಅದಕ್ಕೆ ನಾವು ಒಂದು ಸಣ್ಣ ಬದಲಾವಣೆಯಿಂದ ಮನೆಯಲ್ಲಿ ಸಮೃದ್ಧತೆ, ಅದೃಷ್ಟ, ಹಾಗೂ ಸಂಪತ್ತನ್ನು ವೃದ್ದಿಸಿ ಬೆಳವಣಿಗೆ ಕಾಣಬಹುದು. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಬಹು ಮುಖ್ಯವಾದುದು. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಮನೆ ಶುಭ್ರವಾಗಿರಬೇಕು. ಕಸವನ್ನು ಗುಡಿಸದೇ, ಎಲ್ಲೆಂದರಲ್ಲಿ ಸಾಮಾನು,ಬಟ್ಟೆ ಬರೆಗಳನ್ನು ಬಿಸಾಡಿದರೆ ನೋಡಿದವರಿಗೂ ಚೆಂದ ಅನ್ನಸುವುದಿಲ್ಲ , ದುಡ್ಡೂ ಉಳಿಯುವುದಿಲ್ಲ. ಸಂಜೆ ಸಮಯದಲ್ಲಿ ಕಸ ಗುಡಿಸಿ ಹೊರಗೆ ಬಿಸಾಡಬಾರದು.
ಮನೆಯಲ್ಲಿ ಕೆಲವು ವಸ್ತುಗಳನ್ನು ತಂದು ಇಟ್ಟರೆ ಅದೃಷ್ಟ ಬರುವುದು . ಮೊದಲನೆಯದು ಆನೆಯ ಬೊಂಬೆ, ವಿಗ್ರಹ, ಅಥವಾ ಫೋಟೋ ಮನೆಯಲ್ಲಿ ಇಟ್ಟರೆ ಮನೆಯಲ್ಲಿ ಸ್ಥಿರತೆ ಉಂಟಾಗುತ್ತದೆ. ಆನೆಯು ಮಾತೃತ್ವ, ಫಲವತ್ತತೆ, ಅದೃಷ್ಟ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ನಿಂತಿರುವ ಭಂಗಿಯಲ್ಲಿರುವ ಆನೆಯ ಚಿತ್ರ ಅಥವಾ ಮೂರ್ತಿಯು ಈ ಅಂಶಗಳು ಸಾಂಕೇತಿಸುವುದರಿಂದ ನಿಮ್ಮ ಮನೆಗೆ ಅದೃಷ್ಟವನ್ನು ತರುವುದೆಂದು ಹೇಳಲಾಗುತ್ತೆ.
ಮೀನನ್ನು ಇಡುವುದು. ಅಕ್ವೇರಿಯಂ ನಲ್ಲಿ ಮೀನುಗಳನ್ನು ಸಾಕುವುದು. ಇದರಿಂದ ಮನೆಯಲ್ಲಿ ಆರೋಗ್ಯ, ಅದೃಷ್ಟ ,ಸಂಪತ್ತು , ಶಕ್ತಿ ಬರುತ್ತದೆ.ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರಾಗುತ್ತದೆ. ಮೀನು ಶಾಂತಿಯ ಪ್ರತೀಕ. ಮನಸ್ಸಿನಲ್ಲಿ ಒತ್ತಡವನ್ನು ನಿವಾರಿಸುತ್ತದೆ.
ಬುದ್ದನ ವಿಗ್ರಹ ಇಡುವುದು. ಬುದ್ದನು ಜ್ಞಾನ, ಸಮತೋಲನ, ಸ್ಥಿರತೆಯ ಸಂಕೇತ. ಮನೆಯ ಮುಖ್ಯ ಭಾಗದಲ್ಲಿ ಈ ವಿಗ್ರಹವನ್ನು ಇಡಿ. ಇದರಿಂದ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಮನೆಯಲ್ಲಿ ಶಾಂತಿ ನೆಲೆಸುವುದು.
ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಮುಂದೆ ತುಳಸಿ ಗಿಡವನ್ನು ನೆಡಬೇಕು. ತುಳಸಿ ಲಕ್ಷ್ಮಿಯ ಸಂಕೇತ. ಪ್ರತಿ ದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸಬೇಕು. ತುಳಸಿ ಎಲೆ ಆರೋಗ್ಯಕ್ಕೂ ಒಳ್ಳೆಯದು, ಪೂಕೆಗೂ ಒಳ್ಳೆಯದು.