ನಮ್ಮ ಹಿರಿಯರು ಮಕ್ಕಳು ಇಷ್ಟಪಟ್ಟ ಕೆಲಸ ಮಾಡಲು ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ, ಪ್ರತಿಯೊಂದಕ್ಕೂ ನಮ್ಮ ಸಂಪ್ರದಾಯ ನಮ್ಮ ಸಂಸ್ಕೃತಿ ನಮ್ಮ ಸಂಸ್ಕಾರ ನೋಡಿಕೊಂಡು ಕೆಲಸವನ್ನು ಮಾಡು ಎಂದು ಹೇಳುತ್ತಿದ್ದರು, ಹಾಗಾದರೆ ಸಂಪ್ರದಾಯ, ಸಂಸ್ಕೃತಿ ಹಾಗೂ ಸಂಸ್ಕಾರ ಎಂಬುದರ ನಿಜವಾದ ಆಧ್ಯಾತ್ಮಿಕ ಅರ್ಥ ಏನು ಹಾಗೂ ವೈಜ್ಞಾನಿಕ ವಿಶ್ಲೇಷಣೆಯ ಬಗ್ಗೆ ಇಂದು ತಿಳಿಯೋಣ.
ಭಾವನಾತ್ಮಕತೆ : ನಮ್ಮ ಭಾರತೀಯ ಪರಂಪರೆಯಲ್ಲಿ ಸಂಪ್ರದಾಯ, ಸಂಸ್ಕಾರ ಹಾಗೂ ಸಂಸ್ಕೃತಿ ಎನ್ನುವುದು ರಕ್ತಗತವಾಗಿ ಬಂದಿದೆ, ಸಂಪ್ರದಾಯ ಪಾಲನೆ ಎನ್ನುವುದು ಇಂತಹ ಹಬ್ಬ, ಪೂಜೆ, ಹೋಮ, ಶುಭ ಸಮಾಚಾರ, ಮದುವೆ ಮುಂತಾದ ಸಂಗತಿಗಳು ಒಳ್ಳೆಯ ದಿನ, ತಿಥಿ ಹಾಗೂ ನಕ್ಷತ್ರ ನೋಡಿ ಆಚರಣೆ ಮಾಡಬೇಕು ಎನ್ನುತ್ತದೆ, ಸಂಸ್ಕೃತಿ ಎಂದರೆ ಪ್ರತಿಯೊಂದು ಜಾಗ, ಅಲ್ಲಿನ ಪರಿಸರ, ಅಲ್ಲಿನ ಮಾತುಕತೆ ಊಟ ಹಾಗೂ ಉಪಚಾರಗಳು ಅಲ್ಲಿನ ಸಂಸ್ಕೃತಿಗೆ ಸಾಕ್ಷಿಯಾಗುತ್ತದೆ, ಸಂಸ್ಕಾರ ಎಂದರೆ ನಮ್ಮ ಗುಣ, ನಡತೆ, ವರ್ತನೆ ಸಕಾರಾತ್ಮಕ ಚಿಂತನೆ ಎಂದು ಹೇಳಬಹುದು.
ವಾಸ್ತವಿಕತೆ : ನಿಜ ಜೀವನದಲ್ಲಿ ನಮ್ಮ ಬದುಕು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಬೇಕಾಗಿರುವುದು ಸಂಪ್ರದಾಯ, ಸಂಸ್ಕೃತಿ ಹಾಗೂ ಸಂಸ್ಕಾರ, ಸಂಪ್ರದಾಯ ನಮಗೆ ಶಿಸ್ತು ಕಲಿಸುತ್ತದೆ, ಸಂಸ್ಕೃತಿ ಉತ್ತಮ ಗುಣ, ಗೌರವ, ನಡೆ ನುಡಿಗಳನ್ನು ಅನುಸರಿಸಲು ಮಾರ್ಗದರ್ಶನ ಮಾಡುತ್ತದೆ, ಸಂಸ್ಕಾರ ಬದುಕಿಗೆ ಬಹಳ ಮುಖ್ಯ, ಅನುಚಿತ ಸಂಗತಿಗಳ ಕಡೆಗೆ ಮನಸ್ಸು ಹರಿಯುವುದಿಲ್ಲ, ಯಾವ ವ್ಯಕ್ತಿಗೂ ನೋವು ಉಂಟುಮಾಡುವ ಮಾತುಗಳನ್ನು ಬಾಯಿಂದ ಹೊರಗೆ ಬರಲು ಸಂಸ್ಕಾರ ಅವಕಾಶ ಅಥವಾ ಆಸ್ಪದ ನೀಡುವುದಿಲ್ಲ.
ವೈಚಾರಿಕತೆ : ಜೀವನ ಹುಟ್ಟು, ಸಾವುಗಳ ನಡುವೆ ಇರುವ ಕಾಲ, ಅಂತಹ ಅಮೂಲ್ಯ ಸಮಯ ಬೇರೆ ಬೇರೆ ಸಂಗತಿಗಳಿಗೆ ಮುಡುಪಾಗಿಟ್ಟು, ಕೆಟ್ಟ ವಿಷಯಗಳು, ಆಸಕ್ತಿಗಳಿಗೆ ಒಳಪಟ್ಟು ಜೀವನ ಸಾರ ಹಾಡು ಮಾಡಿಕೊಳ್ಳುವುದಕ್ಕಿಂತ ನಮ್ಮ ಕಟ್ಟುಪಾಡುಗಳ ನಡುವೆ ಜೀವನ ಸುಂದರ ಮಾಡಿಕೊಳ್ಳಲು ಸಂಸ್ಕಾರ ಸಂಪ್ರದಾಯ ಹಾಗೂ ಸಂಸ್ಕೃತಿಯ ಸಹಾಯ ಮಾಡುತ್ತದೆ.
ಜೀವನಕ್ಕೆ ಬೇಕಾದ ಅತ್ಯುತ್ತಮ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.