ಪೂಜೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಏನು. ಯಾವ ಸಮಯದಲ್ಲಿ ಪೂಜೆ ಮಾಡಬೇಕು.

0
4486

ಪೂಜೆಗಳಲ್ಲಿ ಎಷ್ಟು ವಿಧ. ಯಾವ ಸಮಯದಲ್ಲಿ ಪೂಜೆ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ. ನಮ್ಮ ಪರಂಪರೆಯಲ್ಲಿ ಪೂಜೆಯೆಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆ ಮಾತು ಸತ್ಯ ಸಹ ಹೌದು. ಪೂಜೆಗಳನ್ನು ಹಲವಾರು ಬಗೆಯಲ್ಲಿ ಮಾಡಬಹುದು. ಆದರೆ ಮೂರು ಪ್ರಮುಖ ವಿಧಾನಗಳು ಪೂಜೆಗಳಲ್ಲಿ ಉಂಟು. ನಮ್ಮ ದೇ’ಹ, ಮನಸ್ಸು, ಮಾತಿನಿಂದ ಭಗವಂತನ ಸ್ತುತಿ ಮಾಡುವುದು. ಪೂಜೆ ಇಷ್ಟ ಬಂದ ಸಮಯದಲ್ಲಿ ಮಾಡಬಾರದು.

ಬ್ರಾಹ್ಮಿ ಮುಹೂರ್ತ, ಪ್ರಾತಃ ಕಾಲದ ಪೂಜೆ, ಮಧ್ಯಾಹ್ನದ ಪೂಜೆ, ಸಾಯಂಕಾಲ ಸಂಧ್ಯಾ ಸಮಯ, ರಾತ್ರಿ ಸಮಯದಲ್ಲಿ ಪೂಜೆಮಾಡುತ್ತಾರೆ. ನಾವು ಪೂಜೆಗೆ ಸನ್ನದ್ಧರಾಗುವ ಮೊದಲು ನಮ್ಮ ದೇಹ ಸ್ವಚ್ಛವಾಗಿರಬೇಕು. ಅದೇ ರೀತಿ ಭಗವಂತನನ್ನು ಸ್ತುತಿಸಲು ಮನಸ್ಸು ನಿರಾಳವಾಗಿ ಇರಬೇಕು. ನಾವು ಹೇಳುವ ಮಂತ್ರಗಳ ಉಚ್ಚಾರಣೆ ಸ್ಪಷ್ಟವಾಗಿರಬೇಕು. ಪೂಜೆ ಮಾಡುವ ಸಮಯದಲ್ಲಿ ವಾತಾವರಣ ಸೂಕ್ತವಾಗಿರಬೇಕು. ಬ್ರಾಹ್ಮಿ, ಪ್ರಾತಃ ಕಾಲದಲ್ಲಿ ಸೂರ್ಯನ ಎಳೆಯ ಕಿರಣಗಳು ನಮ್ಮ ಮನಸ್ಸು ಹಿತವಾಗಿ ಇರುವಂತೆ ನೋಡಿಕೊಳ್ಳಬಹುದು.

ಪ್ರಾತಃ ಕಾಲದಲ್ಲಿ ನಮ್ಮ ಏಕಾಗ್ರತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ ನಾವು ಏಕಾಗ್ರಚಿತ್ತದಿಂದ ಮಾಡುತ್ತೇವೆ. ಈ ಸಮಯದಲ್ಲಿ ಮಾಡಿದ ಎಲ್ಲಾ ಪೂಜಾ ಕ್ರಮಗಳು ಸಹ ದೇವರಿಗೆ ಪ್ರೀತಿ ಆಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮ ಹಿರಿಯರು ಅವರ ಎಲ್ಲಾ ನಿತ್ಯದ ಕಾರ್ಯಚಟುವಟಿಕೆಗಳನ್ನು ರೂಢಿಸಿಕೊಂಡಿರುವುದು ಯಾವುದೋ ಒಂದು ಉತ್ತಮ ಯೋಚನೆಗಳಿಂದಲೇ. ನಾವು ಪ್ರತಿದಿನ ಮುಂಜಾನೆ ಬೇಗ ಎದ್ದು ಸ್ನಾನ ಮುಗಿಸಿ ದೇವರ ಪೂಜೆ ಮಾಡುವುದರಿಂದ ನಮ್ಮ ದಿನವನ್ನು ಪ್ರಾರಂಭಿಸಬೇಕು.

ಇದರ ಹಿಂದಿರುವ ಉದ್ದೇಶ ಏನೆಂದರೆ ಯಾವುದೇ ಮನುಷ್ಯನು ತನ್ನ ಆಲಸ್ಯವನ್ನು ಬಿಟ್ಟು ಪ್ರತಿದಿನದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬೇಗ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿದರೆ ನಮ್ಮ ದಿನ ಶುಭವಾಗಿರುತ್ತದೆ. ನಾವು ಮಾಡುವ ಕೆಲಸಗಳಲ್ಲಿ ಶ್ರದ್ಧೆ ಇರುತ್ತದೆ. ನಾವು ತಡವಾಗಿ ಏಳುವುದರಿಂದ ನಾವು ಆಲಸಿಗಳಾಗುತ್ತಿವೆ. ಇದೇ ಕಾರಣದಿಂದಾಗಿ ಬೆಳಿಗ್ಗೆ ಬೇಗ ಎದ್ದು ಪೂಜೆ ಮಾಡಿರಿ ಎಂದು ನಮ್ಮ ಹಿರಿಯರು ಹೇಳಿರುವುದು. ಸಾಯಂಕಾಲ 5:45 ರಿಂದ 6:30 ನಿಮಿಷಗಳ ಒಳಗಿನ ಸಮಯ ಬಹಳ ಉತ್ತಮವಾದುದು.

ಈ ಸಮಯವನ್ನು ಗೋಧೂಳಿ ಸಮಯ ಎನ್ನುತ್ತಾರೆ. ಈ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಬಹಳ ಒಳ್ಳೆಯದು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಇನ್ನೇನು ದಿನದ ಅಂತ್ಯ ಸಮೀಪಿಸುವ ಹೊತ್ತು ಇದು. ಅಂದಿನ ದಿನ ಸುಗಮವಾಗಿ ಸಾಗಿದ್ದಕ್ಕಾಗಿ ಆ ದೇವರಿಗೆ ಒಂದು ನಮನ ಸಲ್ಲಿಸುವ ಸಲುವಾಗಿ ಹಾಗೂ ದಿನವು ಬೇಸರ ತಂದಿದ್ದಾರೆ ಅದರಿಂದ ಹೊರಬರುವ ಪರಿಹಾರವನ್ನು ತೋರಿಸಲು ಕೋರಿ ದೇವರಿಗೆ ಪೂಜೆ ಮಾಡಬೇಕು. ರಾತ್ರಿ ಮಲಗುವ ಮೊದಲು ಸಹ ದೇವರ ಧ್ಯಾನವನ್ನು ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಎಂದು ಹೇಳುತ್ತಾರೆ.

ಪೂಜೆ ಎನ್ನುವುದು ಸೂಕ್ತ, ಸರಿಯಾದ ರೀತಿಯಲ್ಲಿ ಮಾಡುವುದರಿಂದ ಸಕಾರಾತ್ಮಕ ಫಲಿತಾಂಶ ಲಭಿಸುತ್ತದೆ. ಮನಸ್ಸು ದೇಹ ಮತ್ತು ಮಾತು ಸ್ಪಷ್ಟತೆಯಿಂದ ಕೂಡಿರಲಿ. ದೇವರ ಪೂಜೆಗೆ ಕೇವಲ ಮನಸ್ಸು ಮುಖ್ಯ. ದೇವರು ಎಲ್ಲಾ ಕಡೆ ಇದ್ದಾನೆ ಎಂದು ಹೇಳುತ್ತಾರೆ. ತಾರ್ಕಿಕವಾಗಿ ಯೋಚನೆ ಮಾಡಿದರೆ ಈ ಮಾತುಗಳಲ್ಲಿ ಸತ್ಯವಿದೆ ಎಂದು ಗೋಚರವಾಗುತ್ತದೆ. ಆದರೆ ಯಾವುದೇ ಕೆಲಸ ಮಾಡಿದರೂ ಸಮಯ ಎನ್ನುವುದು ನಿಗದಿ ಆಗಿರಬೇಕು. ಹೀಗಾಗಿ ಅಂತಹ ಸಮಯದಲ್ಲಿ ಮಾಡಿದ ಕೆಲಸದಿಂದ ಉತ್ತಮ ಫಲಿತಾಂಶ ದೊರಕುತ್ತದೆ.

LEAVE A REPLY

Please enter your comment!
Please enter your name here