ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್‌ನಲ್ಲೇ ತಿಳಿಯಬಹುದು.
ಕೋವಿಡ್ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಬಿಬಿಎಂಪಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಖಾಲಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಸಲು ಮುಂದಾಗಿದೆ.
ಈ ಸಂಬಂಧ ಬಿಬಿಎಂಎಂಪಿಯ ಕೋವಿಡ್ 19 ವೆಬ್‌ಸೈಟ್‌ನಲ್ಲೇ ಡ್ಯಾಶ್‌ಬೋರ್ಡ್ ಆರಂಭಿಸಿದ್ದು, ಇದರಲ್ಲಿ ಭರ್ತಿ ಎಷ್ಟು ಆಗಿದೆ? ಖಾಲಿ ಎಷ್ಟಿದೆ ಎಂಬ ರಿಯಲ್ ಟೈಂ ಮಾಹಿತಿಯನ್ನು ನೋಡಬಹುದು.
ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.chbms.bbmpgov.in/portal/reports/