ರಾತ್ರಿ ಸಮಯದಲ್ಲಿ ಈ ಒಂದು ತಿನಿಸನ್ನು ನಾವು ಮುಟ್ಟಲೇಬಾರದು. ಅದು ಯಾವ ತಿನಿಸು ಹಾಗೂ ಏಕೆ ತಿನ್ನಬಾರದು.

0
2737

ರಾತ್ರಿ ಸಮಯದಲ್ಲಿ ಈ ಒಂದು ತಿನಿಸನ್ನು ನಾವು ಮುಟ್ಟಲೇಬಾರದು. ಅದು ಯಾವ ತಿನಿಸು ಹಾಗೂ ಏಕೆ ತಿನ್ನಬಾರದು. ರಾತ್ರಿಯ ಸಮಯದಲ್ಲಿ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ತಿನ್ನಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹೀಗೆ ಹೇಳಲು ಕಾರಣವೇನು ಎಂದು ಇಂದು ನಾವು ತಿಳಿದುಕೊಳ್ಳೋಣ. ಈ ವಿಚಾರವನ್ನು ಭಾವನಾತ್ಮಕತೆಯಿಂದ ನೋಡುವುದಾದರೆ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಸ್ರ’ವಿಸುವ ರಾ’ಸಾಯನಿಕಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.

ನಮ್ಮ ಆರೋಗ್ಯ ನಾವು ಸೇವಿಸುವ ಆಹಾರ ಕ್ರಮದಿಂದ ಅವಲಂಬಿತಗೊಂಡಿದೆ. ಹೀಗೆ ನಾವು ಅನುಕ್ಷಣ ನಮ್ಮ ಆರೋಗ್ಯ ಸರಿಯಾಗಿ ಇರಬೇಕು ಎಂದು ಬಯಸಿದರೆ ಊಟದಲ್ಲಿ ಮಾತ್ರ ಶಿಸ್ತು ಇರಲೇಬೇಕು. ವಾತಾವರಣಕ್ಕೆ ಅನುಗುಣವಾಗಿ ನಾವು ಆಹಾರವನ್ನು ಸೇವಿಸುವುದರಿಂದ ಅನವಶ್ಯಕವಾಗಿ ಬರುವ ರೋಗಗಳನ್ನು ತಡೆಗಟ್ಟಬಹುದು. ನಾವು ಸೇವಿಸುವ ಆಹಾರದಲ್ಲಿ ಶಡ್ರುಚಿಗಳು ಇರಲೇಬೇಕು.

ಒಬ್ಬರ ದೇಹ ಸ್ಥಿತಿ ಇರುವಂತೆ ಇನ್ನೊಬ್ಬ ವ್ಯಕ್ತಿಯ ದೇಹ ಸ್ಥಿತಿ ಇರುವುದಿಲ್ಲ. ಇದು ನಮಗೆಲ್ಲ ಗೊತ್ತಿರುವ ವಿಚಾರವೆ ಹೌದು. ಇದೇ ಕಾರಣದಿಂದ ನಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ ನಮ್ಮ ಊಟದ ಕ್ರಮ ಇರಬೇಕು. ಆದರೆ ರಾತ್ರಿ ಸಮಯದಲ್ಲಿ ಅತಿಯಾಗಿ ಆಮ್ಲ ಇರುವ ಪದಾರ್ಥಗಳ ಸೇವನೆ ನಿಷಿದ್ಧ ಮಾಡಿಕೊಳ್ಳಿ. ಆಗ ನಿಮ್ಮ ಆರೋಗ್ಯ ಹಾಳಾಗುವುದು ತಪ್ಪುತ್ತದೆ.

ಆಮ್ಲ ಅತಿಯಾಗಿ ದೇಹಕ್ಕೆ ಸೇರುವುದರಿಂದ ದೇಹದಲ್ಲಿ ಪಿತ್ತ ಅಧಿಕ ಆಗುತ್ತದೆ. ಆಗ ನಮ್ಮ ಆರೋಗ್ಯ ಹಾಳಾಗುವುದು ಖಚಿತ. ಉಪ್ಪಿನಕಾಯಿಯಲ್ಲಿ ಅಧಿಕ ಪ್ರಮಾಣದ ಆಮ್ಲ ಗುಣಗಳು ಇರುವುದರಿಂದ ಪಿ’ತ್ತ ಜಾಸ್ತಿ ಆಗಿ ನಮ್ಮ ಪಚನ ಕ್ರಿಯೆ ಕ್ಷೀಣಿಸುತ್ತದೆ. ಈ ರೀತಿ ವೈದ್ಯಕೀಯ ಭಾಷೆಯಲ್ಲಿ ಸಹ ಉಪ್ಪಿನಕಾಯಿ ಸೇವನೆ ರಾತ್ರಿ ಸಮಯದಲ್ಲಿ ನಿಷೇಧಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಆ ರೀತಿ ಮಾಡುವುದರಿಂದ ಪಿತ್ತದ ಕಾಟದಿಂದ ದೂರ ಇರಬಹುದು. ಇದನ್ನು ವಾಸ್ತವಿಕತೆಯಿಂದ ನೋಡುವುದಾದರೆ ನಮ್ಮ ದೇಹ ಅನೇಕ ಬಗೆಯ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ಮುಂಜಾನೆ ಮಧ್ಯಾಹ್ನ ರಾತ್ರಿ ಸಮಯದಲ್ಲಿ ಕಾಲಮಾನದಲ್ಲಿ ಬದಲಾವಣೆ ಗೋಚರವಾಗುತ್ತದೆ. ಆಯಾ ಸಮಯದಲ್ಲಿ ಎಂತಹ ಆಹಾರ ಸೇವನೆ ಮಾಡಬೇಕು ಎನ್ನುವ ತಿಳುವಳಿಕೆ ನಮ್ಮಲ್ಲಿ ಇರಬೇಕು. ಆಗ ನಾವು ಆರೋಗ್ಯದಿಂದ ಇರಲು ಅನುಕೂಲ ಆಗುತ್ತದೆ.

ರಾತ್ರಿ ಸಮಯದಲ್ಲಿ ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ತಿನ್ನುವುದು ಉತ್ತಮ. ಮಧ್ಯಾಹ್ನ ಬೇಕಾದರೆ ನೀವು ನಿಮ್ಮ ನಾಲಿಗೆಗೆ ಇಷ್ಟವಾಗಿರುವ ಆಹಾರವನ್ನು ಸೇವಿಸಬಹುದು. ಬಿಸಿಲು ವಾತಾವರಣ ಇರುವಾಗ ನಾವು ಏನೇ ತಿಂದರೂ ಸುಲಭವಾಗಿ ಜೀರ್ಣವಾಗುತ್ತದೆ. ಮಧ್ಯಾಹ್ನ ನಂತರ ಮಾಡುವ ಕೆಲಸಗಳಿಂದ ತಿಂದ ಆಹಾರ ಸುಲಭವಾಗಿ ಜೀರ್ಣ ಆಗುವುದರಲ್ಲಿ ಸಂದೇಹವೇ ಇಲ್ಲ. ಒಬ್ಬ ವ್ಯಕ್ತಿಯ ಆರೋಗ್ಯ ಅವನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ. ಅದರಿಂದಲೇ ಪಚನ ಕ್ರಿಯೆ ಕೂಡ ಅವಲಂಬಿತವಾಗಿರುತ್ತದೆ.

ಈ ವಿಚಾರವನ್ನು ವೈಚಾರಿಕತೆಯಿಂದ ನೋಡುವುದಾದರೆ ಉಪ್ಪಿನಕಾಯಿ ಎಂದರೆ ತುರ್ತು ಸಮಯದಲ್ಲಿ ಆಹಾರ ಸೇವಿಸುವಾಗ ಅದರ ಜೊತೆಗೆ ನೆಂಚಿಕೊಳ್ಳಲು ಉಪಯೋಗಿಸುವ ಒಂದು ಪದಾರ್ಥ. ಈ ಉಪ್ಪಿನಕಾಯಿಯನ್ನು ಕೇವಲ ಬೇರೆ ಅನುಪಾನ ಇಲ್ಲದಿರುವ ಸಮಯದಲ್ಲಿ ಮಾತ್ರ ಬಳಸುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಉಪ್ಪಿನಕಾಯಿ ತಿನ್ನಬಾರದು ಎನ್ನಲು ಮುಖ್ಯ ಕಾರಣ ಪಿ’ತ್ತ.

ರಾತ್ರಿ ಸೇವಿಸಿರುವ ಆಹಾರ ನಿಧಾನವಾಗಿ ಜೀರ್ಣ ಆಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅಂತಹ ಸಮಯದಲ್ಲಿ ಅತಿಯಾದ ಉಪ್ಪು ಖಾರ ಇರುವ ಉಪ್ಪಿನಕಾಯಿ ನಿದ್ರೆಗೆ ಸಂಚಕಾರ ತರುವುದು ಮಾತ್ರ ಶತ ಸಿದ್ಧ. ವೈದ್ಯರು ಸಹ ನಮಗೆ ಇದನ್ನೇ ಹೇಳುವುದು. ರಾತ್ರಿಯ ಸಮಯದಲ್ಲಿ ಉಪ್ಪು ಖಾರ ಹೆಚ್ಚಿರುವ ಪದಾರ್ಥಗಳನ್ನು ತಿನ್ನಬೇಡಿ ಎಂದು ಅವರೇ ನಮಗೆ ಸೂಚಿಸುತ್ತಾರೆ.

ಹೀಗಾಗಿ ರಾತ್ರಿ ಸಮಯದಲ್ಲಿ ಎಲ್ಲಾ ಕಾಲದಲ್ಲಿಯೂ ಪ್ರತಿಯೊಬ್ಬರು ಉಪ್ಪಿನಕಾಯಿ ಸೇವನೆ ನಿಲ್ಲಿಸುವುದು ಒಳ್ಳೆಯದು. ಈ ಮಾಹಿತಿಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ. ಹಾಗೆಯೇ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ತಿಳಿಯಲು ನಮ್ಮ ಪೇಜನ್ನು ಲೈಕ್ ಮಾಡಿ ಹಾಗೂ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here