ಶನಿವಾರದ ದಿನ ಈ ಕೆಲಸಗಳನ್ನ ಮಾಡಲೇಬಾರದು, ಆ ಕೆಲಸಗಳು ಯಾವುವು ಎಂದು ನಿಮಗೆ ಗೊತ್ತಾ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಸೌರಮಂಡಲದಲ್ಲಿ 9 ಗ್ರಹಗಳಿವೆ, ಅವುಗಳನ್ನೇ ನಾವು ಜ್ಯೋತಿಶ್ಶಾಸ್ತ್ರದಲ್ಲಿ ನವಗ್ರಹಗಳು ಎಂದು ವ್ಯವಹರಿಸುತ್ತೇವೆ. ಈ ಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗು ಪುರಾಣಗಳ ಪ್ರಕಾರ ಈ 9 ಗ್ರಹಗಳು ಮನುಷ್ಯನ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ, ಇನ್ನು ಇವುಗಳ ಗತಿಯನ್ನ ಅನುಸರಿಸಿ ಮನುಷ್ಯರ ಜಾತಕ ಬದಲಾಗ್ಗುತ್ತಾ ಇರುತ್ತದೆ, ಒಂದೊಂದು ಗ್ರಹಕ್ಕು ಒಂದೊಂದು ಬಗೆಯ ಫಲ ಇದ್ದೆ ಇದೆ, ಅದೇ ವಿಧದಲ್ಲಿ ಒಂದು ವಾರದಲ್ಲಿ ಬರುವ 7 ದಿನಗಳು ಕೂಡ ರಾಹು ಕೇತುಗಳನ್ನ ಹೊರತುಪಡಿಸಿ ಒಂದೊಂದು ದಿನಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ.
ಈ ಕ್ರಮದಲ್ಲಿ ಶನಿ ಗ್ರಹದ ಅದಿಪತ್ಯವಾಗಿರುವ ದಿನ ಶನಿವಾರ ಮತ್ತೆ ಆ ದಿನ ಯಾವ ಕೆಲಸಗಳನ್ನ ಮಾಡಬಾರದು ಹಾಗು ಆ ಕೆಲಸ ಗಳನ್ನೂ ಮಾಡಿದರೆ ಏನಾಗುತ್ತದೆ ಈಗ ನೋಡೋಣ ಬನ್ನಿ.
ಸಾಮಾನ್ಯವಾಗಿ ಉಪ್ಪನ್ನ ಒಬ್ಬರ ಕೈಯಿಂದ ಮತ್ತೊಬ್ಬರು ಪಡೆದುಕೊಳ್ಳುವುದಿಲ್ಲ ಆದರೆ ಶನಿವಾರದ ದಿನ ಉಪ್ಪನ್ನು ಬೇರೊಬ್ಬರಿಗೆ ಧಾನ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತೆ. ಇದರಿಂದ ಅನೇಕ ಸಮಸ್ಯೆಗಳು ತೊಲಗಿಹೊಗುತ್ತವೆ ಅಷ್ಟೇ ಅಲ್ಲ ಶನಿವಾರದ ದಿನ ಮಾತ್ರ ಮನೆಗೆ ಉಪ್ಪನ್ನು ಕೊಂಡು ಕೊಂಡು ತರಬಾರದು ಅದರಿಂದ ಆರ್ಥಿಕ ಸಮಸ್ಯೆಗಳು ಕಾಡುತ್ತವೆ.
ಬದನೆಕಾಯಿ ಹಾಗು ಕಪ್ಪು ಮೆಣಸನ್ನ ಶನಿವಾರದ ದಿನ ಕೊಂಡುಕೊಳ್ಳ ಬಾರದು ಹಾಗೆಯೇ ಅವುಗಳನ್ನ ಉಪಯೋಗಿಸಿ ಅಡುಗೆ ಪದಾರ್ಥಗಳನ್ನ ಮಾಡಬಾರದು, ಒಂದು ವೇಳೆ ಹಾಗೇನಾದರು ಮಾಡಿದರೆ ಶನಿಯ ಪ್ರಭಾವದಿಂದ ಸಮಸ್ಯೆಗಳು ಬರುತ್ತವೆ, ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ ಎಂದು ಹೇಳಲಾಗುತ್ತದೆ.
ಶನಿವಾರದ ದಿನ ಹೊಸ ವಾಹನಗಳನ್ನ ಖರೀದಿ ಮಾಡಬಾರದು, ಒಂದು ವೇಳೆ ಹಾಗೇನಾದ್ರೂ ಖರೀದಿ ಮಾಡಿದ್ರೆ ಇಲ್ಲದ ಗ್ರಹಚಾರ ನಿಮ್ಮ ತಲೆಗೆ ಸುತ್ತಿಕೊಳ್ಳುವುದು ಖಂಡಿತ ಎನ್ನುತ್ತಾರೆ ಪಂಡಿತರು, ಅಷ್ಟೇ ಅಲ್ಲ ಕಬ್ಬಿಣದ ವಸ್ತುಗಳನ್ನು ಸಹ ಖರೀದಿ ಮಾಡಬಾರದು, ಒಂದು ವೇಳೆ ಹಾಗೇನಾದ್ರೂ ಕೊಂಡರೆ ಅಪಘಾತಗಳಾಗುವ ಸಂಭವಗಳು ಹೆಚ್ಚಿರುತ್ತವೆ ಎನ್ನುತ್ತಾರೆ ಶಾಸ್ತ್ರ ಕಾರರು. ಕಬ್ಬಿಣದ ವಸ್ತುಗಳನ್ನ ತೆಗೆದುಕೊಳ್ಳುವಾಗ ಅಥವ ಖರೀದಿ ಮಾಡುವಾಗ ಶನಿವಾರದ ದಿನ ಮಾತ್ರ ಒಳ್ಳೆಯದಲ್ಲ.
ಶನಿವಾರದ ದಿನ ಉದ್ದಿನ ಬೇಳೆಯನ್ನ ತೆಗೆದುಕೊಳ್ಳಲು ಬಾರದು ಹಾಗು ಸೇವಿಸಲೂ ಬಾರದು,, ಒಂದು ವೇಳೆ ಉದ್ದಿನಬೇಳೆ ಯನ್ನ ಯಾರಾದರು ಬಡ ಬ್ರಾಹ್ಮಣರಿಗೆ ಅಥವ ಬಡವರಿಗೆ ಧಾನವಾಗಿ ನೀಡಿದ್ದಲ್ಲಿ ಅತ್ಯುತ್ತಮವಾದಂತಹ ಫಲಗಳನ್ನ ಪಡೆಯುತ್ತೀರಿ, ಶನಿ ಸಂತೃಪ್ತಿ ಹೊಂದಿ ತನ್ನ ಸಂಪೂರ್ಣ ಅನುಗ್ರಹ ಬೀರುತ್ತಾನೆ, ಸಮಸ್ಯೆಗಳನ್ನ ತಪ್ಪಿಸುತ್ತಾನೆ ಎಂದು ಹೇಳುತ್ತಾರೆ.
ಕಪ್ಪು ಬಣ್ಣದ ವಸ್ತ್ರಗಳು : ಕಪ್ಪು ಬಣ್ಣ ನಿಮ್ಮ ನೆಚ್ಚಿನ ಬಣ್ಣವಾಗಿರಬಹುದು ಆದರೆ ಆ ಬಣ್ಣದ ವಸ್ತ್ರಗಳನ್ನ ಮಾತ್ರ ಶನಿವಾರದ ದಿನ ದರಿಸಬಾರದು ಹಾಗೆ ಹಾಕಿಕೊಂಡರೆ ಶನೆಶ್ವರನಿಗೆ ಆಗ್ರಹ ಬರುತ್ತೆ ಹೀಗಾಗಿ ಎಲ್ಲ ಅಶುಭವೆ ಜರಗುತ್ತವೆಯಂತೆ ಎಂದು ಹೇಳುತ್ತಾರೆ ಶಸ್ತ್ರ ಕಾರರು.
ಸಾಸವೆ ಕಾಲುಗಳನ್ನ ಶನಿವಾರದ ದಿನ ಸೇವಿಸಬಾರದು ಹಾಗೆಯೇ ಸಾಸುವೆ ಎಣ್ಣೆಯನ್ನು ಕೂಡ ಇಂದಿನ ದಿನ ಸೇವಿಸಬಾರದು ಎಂದು ಹೇಳುತ್ತಿದ್ದಾರೆ ಶಾಸ್ತ್ರಕಾರರು, ಇವನ್ನ ಈ ದಿನ ಖರೀದಿ ಕೂಡ ಮಾದಬಾರದಂತೆ..ಒಂದು ವೇಳೆ ಈ ಪದಾರ್ಥದಿಂದ ತಯಾರಿಸಿದ ಆಹಾರಗಳನ್ನು ಬಡ ಬಗ್ಗರಿಗೆ ಧಾನವಾಗಿ ನೀಡಬಹುದು.
Very lmprtant massage gives in publics. this massage is like