ಮೊದಲಿಗೆ ಬೆನ್ನು ನೋವನ್ನು ನಿವಾರಿಸಬಹುದಾದ ಮನೆಮದ್ದಿನ ಆಹಾರಗಳ ಬಗ್ಗೆ ತಿಳಿಯೋಣ.
ಹಾಲಿನಲ್ಲಿ ಶುಂಠಿ ಕಷಾಯವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.
ಸೊಗದೇ ಬೇರಿನ ಚೂರ್ಣವನ್ನು ಒಂದು ಚಮಚದಷ್ಟು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು, ಹಾಗೂ ನೀರು ಅರ್ಧ ಪ್ರಮಾಣಕ್ಕೆ ತಿಳಿದಾಗ ಅದನ್ನು ಶೋಧಿಸಿ ನಿಂಬೆರಸ ಬೆರೆಸಿ ಕುಡಿಯಬೇಕು.
ಮೆಣಸು, ಶುಂಠಿ, ಹಿಪ್ಪಲಿ, ಬೆಲ್ಲ, ನೆಗ್ಗಿಲು ಮುಳ್ಳು ಮತ್ತು ಕೊಬ್ಬರಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಕುಟ್ಟಿ ಮೊದಲಿಗೆ ಪುಡಿ ಮಾಡಿಟ್ಟುಕೊಳ್ಳಬೇಕು, ಒಂದು ಚಮಚದಷ್ಟು ಈ ಪುಡಿಯನ್ನು ದಿನಕ್ಕೆರಡು ಬಾರಿ ಸೇವಿಸಬೇಕು, ನೀರಿಗೆ ಒಂದು ವಾರ ಮಾಡಬೇಕು.
ಹಾಲಿನಲ್ಲಿ ಅಶ್ವಗಂಧವನ್ನು ಬೆರೆಸಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಅದನ್ನು ಒಂದು ಚಮಚ ಜೇನು ತುಪ್ಪದೊಂದಿಗೆ ಇಲ್ಲವೇ ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು.
ಪ್ರತಿದಿನ ನೀವು ಸೇವಿಸುವ ಆಹಾರದಲ್ಲಿ ಮೆಂತ್ಯ ಸೊಪ್ಪಿನ ಬಳಕೆ ಮಾಡಿದ್ದಲ್ಲಿ ಬೆನ್ನು ನೋವಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತೀರಿ.
ಬೆನ್ನು ನೋವಿಗೆ ಮನೆಯಲ್ಲೇ ಮಾಡಬಹುದಾದಂತ ಬಾಹ್ಯ ಚಿಕಿತ್ಸೆ.
ತುಂಬಿ ಗಿಡದ ಸೊಪ್ಪನ್ನು ಹರಳೆಣ್ಣೆ ಅಥವಾ ಎಣ್ಣೆಯಲ್ಲಿ ಚೆನ್ನಾಗಿ ಅರೆದು ಅದನ್ನು ನೋವಿರುವ ಜಾಗದಲ್ಲಿ ಲೇಪಿಸಿದರೆ ಬೆನ್ನು ನೋವು ಕಡಿಮೆಯಾಗುತ್ತದೆ.
ಸಾಸಿವೆ ಎಣ್ಣೆ, ಬೇವಿನ ಎಣ್ಣೆ, ಕೊಬ್ಬರಿ ಎಣ್ಣೆ ಹಾಗೂ ಅರಳೆಣ್ಣೆ ಇಷ್ಟನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಮೆಂತ್ಯೆ, ಜೀರಿಗೆ ಮತ್ತು ಬಜೆಯ ಸಮಭಾಗ ಪುಡಿ ಹಾಕಿ ಕಾಯಿಸಬೇಕು, ತಣ್ಣಗಾದ ಮೇಲೆ ನೋವಿರುವ ಜಾಗಕ್ಕೆ ಪದೇ ಪದೇ ಹಚ್ಚುತ್ತಿದ್ದರೆ ನೋವು ಮಾಯವಾಗುತ್ತದೆ.
ಸುಲಭವಾಗಿ ಹೇಳುವುದಾದರೆ ಹರಲೆನ್ನೆ ಹಾಗೂ ನಿಂಬೆರಸ ಬೆರೆಸಿ ನೋವಿರುವ ನೋವಿರುವ ಜಾಗದಲ್ಲಿ ಲೇಪನ ಮಾಡಿ ಶಾಖವನ್ನು ಕೊಡುವುದರಿಂದ ನೋವು ಕಡಿಮೆಯಾಗುತ್ತದೆ.
ಎಕ್ಕದ ಎಲೆಯನ್ನು ಬಿಸಿಮಾಡಿ ( ಸ್ವಲ್ಪ ಬೆಚ್ಚಗೆ ಮಾಡಿ ) ಬಿಸಿ ಇರುವ ಎಲೆಯನ್ನು ನೋವಿರುವ ಜಾಗಕ್ಕೆ ಇಟ್ಟರು ನೋವು ಕಡಿಮೆಯಾಗುತ್ತದೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.