ಇವತ್ತು ಡಿಸೆಂಬರ್ 8 ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್’ರವರ ಹುಟ್ಟಿದ ಹಬ್ಬದ ದಿನ. ಈ ಮೊದಲು ಮನೆಯಲ್ಲಿ ಸರಳವೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದರು ವಾಸುಕಿ. ಆದರೆ ಕಾಲ ಬದಲಾಗಿದೆ. ಮುಂದೆ ಎನಾಗುತ್ತೆ ಯಾವ ರೀತಿಯಲ್ಲಿ ಬದಲಾವಣೆ ಆಗುತ್ತೆ ಅಂತ ಹೇಳೊಕ್ಕಾಗಲ್ಲ. ಬಿಗ್ಬಾಸ್ ಮನೆಯೊಳಗೆ ವಾಸುಕಿ ವೈಭವ್ ಬರುತ್ತಾರೆ ಅಂತ ಅವರಿಗೇ ಗೊತ್ತೇ ಇರಲಿಲ್ಲ. ಈ ಸಲ ಈ ಮನೆಯೊಳಗೆ ಇದ್ದಾರೆ ಮತ್ತು ಅದ್ಭುತವಾಗಿ ಆಡುತ್ತಿದ್ದಾರೆ.
ನಿನ್ನೆ ಕಿಚ್ಚ ಸುದೀಪ ವಾರ ಜೊತೆ ಕಿಚ್ಚನ ಕಾರ್ಯಕ್ರಮ ನಡೆಸಿಕೊಟ್ಟರು. ಆ ಶೊ ಶುರುವಿಗೂ ಮೊದಲೇ ಕಿಚ್ಚ ಸುದೀಪ್ ವಾಸುಕಿ ವೈಭವ್’ಗೆ ಹುಟ್ಟಿದ ಹಬ್ಬದ ಶುಭಾಶಯ ಹೇಳಿದರು. 27 ವರ್ಷ ತುಂಬಿದ ಈ ಗಳಿಗೆಯಲ್ಲಿ ನಿಮ್ಮ ಜೀವನ ಸುಖಕರವಾಗಿರಲಿ ಎಂದು ತುಂಬು ಹೃದಯದಿಂದ ಶುಭಾಶಯ ಕೋರಿದರು.
ಮಾತನಾಡುತ್ತಾ ಸುದೀಪ್ ನಿಮಗೆ ಒಂದು ಹಾಡು ಮತ್ತು ಕೇಕನ್ನು ಗಿಪ್ಟ್ ಆಗಿ ಕಳಿಸಿದ್ದೇನೆ ಎಂದು ಹೇಳಿದರು. ಕೇಕ್ ಗಿಪ್ಟ್ ಬಂತು. ಯಾವ ಹಾಡು ಎಂದು ಊಹಿಸಿ ಎಂದು ಬಿಗ್ಬಾಸ್ ಕೇಳಿದರು. ವಾಸುಕಿ ತಾನು ರಚಿಸಿದ್ದ, ಸಂಗೀತ ಸಂಯೋಜಿಸಿದ್ದ ಕೆಲವೊಂದು ಗೀತೆಗಳನ್ನು ಹಾಡಿದರು. ಆಗ ಬಿಗ್ಬಾಸ್ ಒಂದು ಹಾಡನ್ನು ಪ್ಲೇ ಮಾಡಿತು. ಅದು ವಾಸುಕಿ ಬರೆದ ಹಾಡೆ ಆಗಿತ್ತು. ಆದರೆ ಅವರು ಅದನ್ನು ಸಿನಿಮಾಗಾಗಿ ಬರೆದಿರಲಿಲ್ಲ. ಬಿಗ್ಬಾಸ್ ಮನೆಯೊಳಗೆ ಒಂದು ಟಾಸ್ಕ್’ನಲ್ಲಿ ಸೋತು ಕಳಪೆ ಬೋರ್ಡ್ ಪಡೆದುಕೊಂಡ ಸಮಯದಲ್ಲಿ ಈ ಹಾಡನ್ನು ಹಾಡಿದ್ದರು. ಅದು ಸ್ಪೂರ್ತಿದಾಯಕ ಹಾಡು ಆಗಿತ್ತು.
ಸುದೀಪ್ ಮಾತನಾಡುತ್ತಾ ನನಗೆ ನನ್ನ ಸಿನಿಮಾದ ಏನಾಗಲೀ ಮುಂದೆ ಸಾಗು ನೀ ಮತ್ತು ಅರಳುವ ಹೂವುಗಳೇ ಹಾಡು ಅಂದ್ರೆ ತುಂಬಾ ಇಷ್ಟ ಎಂದರು. ಸ್ಪೂರ್ತಿಯ ಹಾಡುಗಳು ಮನುಷ್ಯನಿಗೆ ಬೇಸರ ಓಡಿಸಿ ಹೊಸ ಭರವಸೆಯನ್ನು ನೀಡುತ್ತದೆ ಎಂದು ಸುದೀಪ್ ಹೇಳಿದರು. ಅಂದ ಹಾಗೇ ನೀವೂ ಕೂಡ ವಾಸುಕಿ ವೈಭವ್ ಗೆ ಹುಟ್ಟಿದ ಹಬ್ಬದ ಶುಭಾಶಯ ಕೋರಿ.