ಸುಧಾ ಮೂರ್ತಿ ಜೀವನಪೂರ್ತಿ ಹಾಲು ಕುಡಿಯುವುದಿಲ್ಲವೆಂದು ಶಪಥ ಮಾಡಿದ್ದೇಕೆ ?

0
6001

ಸುಧಾಮೂರ್ತಿ ಕರ್ನಾಟಕ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಧರ್ಮ ಪತ್ನಿ. ಕೋಟ್ಯಾಧೀಶೆಯಾಗಿದ್ದರೂ ಅತ್ಯಂತ ಸರಳವಾಗಿ ಬದುಕುತ್ತಿರುವ ಜೀವನೋತ್ಸಾಹಿ. ಇವರು ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೆಳದು ಬಡತನದ ಕಷ್ಟ,ಬೇಗೆಯನ್ನು ತಿಳಿದವರು.

ಅದಕ್ಕಾಗಿಯೇ ದೀನರ, ಬಡವರ ಸೇವೆ ಮಾಡುತ್ತಾ ಇದ್ದಾರೆ‌ . ಸಾವಿರಾರು ಶಾಲೆಗಳನ್ನು , ಗ್ರಂಥಾಲಯಗಳನ್ನು ದೇಶದಲ್ಲಿ ಕಟ್ಟಿಸಿದ್ದಾರೆ. ಸುಮಾರು 20 ಸಾವಿರದಷ್ಟು ಶೌಚಾಲಯಗಳನ್ನು ನಿರ್ಮಿಸಿದ್ದಾರೆ.ಇವರ ನಿಸ್ವಾರ್ಥ ಸೇವೆಗೆ ದೇಶವೇ ‘ಅಮ್ಮ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಸ್ವತಃ ಲೇಖಕಿಯೂ ಆದ ಸುಧಾಮೂರ್ತಿಯವರು ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅಂಕಣಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಬಂದಿದೆ.

ಸುಧಾಮೂರ್ತಿಯವರು ಕೋಟ್ಯಾಧೀಶರಾದರೂ ಪತಿ ಪತ್ನಿ ಇಬ್ಬರೂ ಸರಳ ಜೀವನವನ್ನು ನಡೆಸುತ್ತಾರೆ. ಎಲ್ಲರ ಜೊತೆ ನಿಸ್ವಾರ್ಥದಿಂದ ಬೆರೆಯುತ್ತಾರೆ. ಬಡವ ಬಲ್ಲಿದ ಎಂಬ ಬೇದ ಭಾವ ಮಾಡುವುದಿಲ್ಲ. ಇತ್ತೀಚೆಗೆ ಇವರ ಮಗನ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿ ಮುಗಿಸಿದ್ದು ಸಕ್ಕತ್ ಸುದ್ದಿಯಾಗಿತ್ತು. ಇಂತಹ ಸರಳತೆಯ ಮೂರ್ತಿ ತಮಗೆ ಇಷ್ಟವಾದ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದಾರೆ. ಮೊದಲು ಅವರಿಗೆ ಹಾಲೆಂದರೆ ತುಂಬಾ ಇಷ್ಟವಾಗಿತ್ತು . ಪ್ರತಿ ದಿನ ಚಹಾ ಕುಡಿಯುವ ಬದಲು ಹಾಲನ್ನೇ ಹೆಚ್ಚು ಸೇವಿಸುತ್ತಿದ್ದರು. ಆದರೆ ತಮ್ಮ ಇಷ್ಟದ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದಾರೆ. ಇದರ ಹಿಂದಿದೆ ಒಂದು ಮನಕಲಕುವ ಕತೆ. ಓದಿ.

ಸುಧಾಮೂರ್ತಿಯವರು ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ಕಟ್ಟಿಸಿದ್ದಾರೆ. ಒಮ್ಮೆ ಒಡಿಸ್ಸಾದ ಒಂದು ಹಳ್ಳಿಯಲ್ಲಿ ಶಾಲೆ ಕಟ್ಟಿಸಿ ಅದನ್ನು ನೋಡಲು ಹೋಗುತ್ತಿದ್ದಾಗ ಭಾರೀ ಮಳೆ ಬರತೊಡಗಿತು. ಇನ್ನ ಕಾರನ್ನು ಓಡಿಸಲು ಕಷ್ಟಸಾಧ್ಯವಾದಾಗ ಕಾರು ಒಂದು ಗುಡಿಸಲ ಪಕ್ಕದಲ್ಲಿ ನಿಂತಿತು. ಸುಧಾಮೂರ್ತಿಯವರು ಆ ಗುಡಿಸಲ ಒಳಗೆ ಹೋಗುತ್ತಾರೆ. ಆ ಬಡ ವ್ಯಕ್ತಿ ಸುಧಾಮೂರ್ತಿಯವರನ್ನು ಗುರುತಿಸಿ ಬರಮಾಡಿಕೊಳ್ಳುತ್ತಾನೆ. ತಮ್ಮ ಊರಿಗೆ ಶಾಲೆ ಕಟ್ಟಿಸಿದವರು ತಮ್ಮ ಮನೆಗೆ ಬಂದುದು ಅವನಿಗೆ ಆನಂದವಾಗಿತ್ತು. ಏನಾದರೂ ತೆಗೆದುಕೊಳ್ಳಿ ಎನ್ನುತ್ತಾನೆ . ಅದಕ್ಕೆ ಸುಧಾಮ್ಮ ಏನೂ ಬೇಡ ಎನ್ನುತ್ತಾರೆ. ಅವನು ಹಠದಿಂದ ಹಾಲನ್ನದರೂ ತೆಗೆದುಕೊಳ್ಳಬೇಕು ಎಂದು ಅವನ ಹೆಂಡತಿಯ ಬಳಿ ಹೋಗಿ ಒಂದು ಲೋಟ ಹಾಲು ಕಾಯಿಸಿ ಕೊಡು ಎನ್ನುತ್ತಾನೆ. ಆಗ ಅವನ ಹೆಂಡತಿ ಒಡಿಸ್ಸಾ ಭಾಷೆಯಲ್ಲಿ ನಮ್ಮ ಮನೆಯಲ್ಲಿ ಏನೂ ಇಲ್ಲ. ಇರುವುದು ಅರ್ಧ ಗ್ಲಾಸು ಹಾಲು. ಅದೂ ನಮ್ಮ ಮಗುವಿಗೆ.ಏನು ಮಾಡುವುದು ಎನ್ನುತ್ತಾಳೆ. ಅದಕ್ಕೆ ಅವನು ಅವರು ನಮ್ಮ ಊರಿಗೆ ಶಾಲೆ ಕಟ್ಟಿಸಿದ ಮಹಾನುಭಾವರು. ಇರುವ ಹಾಲನ್ನೇ ಸ್ವಲ್ಪ ನೀರು ಹಾಕಿ ಕೊಡು ಎನ್ನುತ್ತಾನೆ. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಸುಧಾಮೂರ್ತಿಯವರ ಕಣ್ಣಲ್ಲಿ ನೀರು ಬಂದುಬಿಡುತ್ತೆ. ನಮ್ಮ ದೇಶದ ಎಷ್ಟು ಜನ ಬಡವರು ಕುಡಿಯಲು ಹಾಲೂ ಇಲ್ಲದೇ ಬದುಕುತ್ತಿದ್ದಾರೆ ಎಂದು ನೊಂದುಕೊಂಡರು. ತಕ್ಷಣ ಅವನನ್ನು ಕರೆದು ನಾನು ಇಂದು ಉಪವಾಸ ಇದ್ದೇನೆ. ಏನೂ ಬೇಡ ಎಂದು ಅವನಿಗೆ ಸ್ವಲ್ಪ ದುಡ್ಡಿನ ಸಹಾಯ ಮಾಡಿ ಹೊರಡುತ್ತಾರೆ.

ದಾರಿಯಲ್ಲಿ ಹೋಗುತ್ತಾ ಅವರು ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತಾರೆ. ನಾನು ಇನ್ನೂ ಮುಂದೆ ಹಾಲನ್ನು ಕುಡಿಯಬಾರದು. ನಮ್ಮ ದೇಶದ ಜನ ಒಂದು ಹೊತ್ತಿಗೂ ಎಷ್ಟು ಕಷ್ಟ ಪಡುತ್ತಾರೆ ಎಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂದಿನಿಂದ ಅವರು ಹಾಲು ಕುಡಿಯುವುದನ್ನು ಬಿಡುತ್ತಾರೆ.

LEAVE A REPLY

Please enter your comment!
Please enter your name here