ಗಾಳಿಯಿಂದ ಬರಬಹುದಾದ ಕೊರೋನ ಸೋಂಕನ್ನು ತಡೆಯಲು ಇಷ್ಟು ಮಾಡಿದರೆ ಸಾಕು!

0
3847

ಗಾಳಿಯಲ್ಲಿ ಕೊರೊನ ಸೋಂಕು ಹರಡುತ್ತದೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಸೋಂಕು ಕಿಲೋಮೀಟರ್ ಗಟ್ಟಲೆ ಗಾಳಿಯಲ್ಲಿ ಹರಡುವುದಿಲ್ಲ ಬದಲಿಗೆ ಮೀಟರ್ ಹಂತದಲ್ಲಿ ಇದ್ದರೆ ಮಾತ್ರ ಹರಡುತ್ತದೆ ಎಂಬುದು ಅಷ್ಟೇ ಸತ್ಯ ಆದ್ದರಿಂದ ಸೋಂಕು ಬಂದಿರುವ ವ್ಯಕ್ತಿಯ ಜೊತೆ ಅಂತರವನ್ನು ಕಾಯ್ದುಕೊಂಡರೆ ಈ ಸೋಂಕು ಹರಡುವುದಿಲ್ಲ ಎಂಬುದರ ಬಗ್ಗೆ ಈಗಾಗಲೇ ವಿಜ್ಞಾನಿಗಳು ಸಹ ಸ್ಪಷ್ಟಪಡಿಸಿದ್ದು ಕಳೆದ 2 ದಿನಗಳ ಹಿಂದೆ ಕೊರೊನ ಸೋಂಕು ಗಾಳಿಯಲ್ಲಿ ಹರಡುತ್ತದೆ ಎಂಬುವ ಹೇಳಿಕೆಯನ್ನು ನೀಡಿದ್ದರು, ಕೆಲವು ಮೀಟರ್ ಗಳಷ್ಟು ದೂರ ಗಾಳಿಯಲ್ಲಿ ಚರಿಸಿ ನಂತರ ಆ ಕಣಗಳು ನಾಶವಾಗುತ್ತದೆ ಎಂಬ ಹೇಳಿಕೆಯನ್ನು ವಿಜ್ಞಾನಿಗಳೇ ನೀಡಿದ್ದಾರೆ.

ಸೋಂಕು ಗಾಳಿಯಲ್ಲಿ ಹೇಗೆ ಸೇರುತ್ತದೆ : ಕೊರೊನ ವೈರಸ್ ತಗುಲಿರುವ ರೋಗಿಯು ಜೋರಾಗಿ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯಲ್ಲಿ ವೈರಾಣುಗಳು ಸೇರಿಕೊಳ್ಳುತ್ತವೆ ಕೆಲವೇ ಮೀಟರ್ ಅಂತರದಲ್ಲಿ ಯಾರಾದರೂ ಚಲಿಸುತ್ತಿದ್ದರೆ ಅಥವಾ ಇದ್ದರೆ ಅವರನ್ನು ಸೇರುವ ಸಾಧ್ಯತೆ ಹೆಚ್ಚಿರುತ್ತದೆ ಅದೇ ಕಾರಣಕ್ಕಾಗಿಯೇ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಿ ಸ್ವಚ್ಛ ಮಾಡಬೇಕು.

ಕಳೆದ ಕೆಲವು ತಿಂಗಳಿಂದ ವಿಶ್ವ ಆರೋಗ್ಯ ಸಂಸ್ಥೆಯು ಗಾಳಿಯಲ್ಲಿ ಸೋಂಕು ಹರಡುವ ಬಗ್ಗೆ ಮಾಹಿತಿಯನ್ನು ಕಲೆಯಾಗುತ್ತದೆ ಆದರೆ ಇಲ್ಲಿಯವರೆಗೂ ದೃಢವಾದ ಅಥವಾ ಸ್ಪಷ್ಟವಾದ ಯಾವುದೇ ಸಾಕ್ಷಿ ಲಭಿಸಿಲ್ಲ ಎಂದು ಸ್ವತಹ ಆರೋಗ್ಯ ಸಂಸ್ಥೆಗೆ ಹೇಳಿಕೆಯನ್ನು ನೀಡಿದೆ, ಆದರೆ ವಿಜ್ಞಾನಿಗಳು ಕಚೇರಿಗಳಲ್ಲಿ ಅಥವಾ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸೋಂಕು ಹರಡುವ ಸಾಧ್ಯತೆಗಳು ಅತಿ ಹೆಚ್ಚಾಗಿದೆ, n95 ಮಸ್ಕ್ ಕಡ್ಡಾಯವಾಗಿ ಧರಿಸಲೇಬೇಕು ಸಾಧ್ಯವಾದರೆ ಹ್ಯಾಂಡ್ ಗ್ಲೌಸ್ ಧರಿಸಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here